ರೋಟರಿ ಜಿಲ್ಲೆ ವಲಯ-1 ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ: ರೋಟರಿಯಂತಹ ಸೇವಾ ಸಂಸ್ಥೆಗಳು ಸಮಾಜ ಸೇವೆಯೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕ್ರೀಡಾ ಮನೋಭಾವನೆಗಳನ್ನು ರೂಢಿಸಬೇಕು ಎಂದು ರೋಟರಿ ಜಿಲ್ಲೆ 3181 ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಿ. ಸಾಲ್ಯಾನ್ ಹೇಳಿದರು.
ಕಿನ್ನಿಗೋಳಿ ರೋಟರಿಕ್ಲಬ್ ಸಹಯೋಗದೊಂದಿಗೆ ಕಿನ್ನಿಗೋಳಿ ರೋಟರಿ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ರೋಟರಿ ಜಿಲ್ಲೆ 3181 ವಲಯ 1ರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕ್ರೀಡಾಪಟು ಅಕ್ಷತಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಲಯ ಸೇನಾನಿ ಜಯರಾಮ ಪೂಂಜಾ, ಮಾಧವ ಅಮೀನ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ಕಾರ್ಯದರ್ಶಿ ದೇವಿದಾಸ ಶೆಟ್ಟಿ, ಸಂಘಟಕ ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1411201602

Comments

comments

Comments are closed.

Read previous post:
Kinnigoli-1411201601
ಶಿಲಾ ಮಹೂರ್ತ ಹಾಗೂ ಸಮಾಲೋಚನಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮುಂದಿನ 2017 ಮೇ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಅಂಗವಾಗಿ ಶಿಲಾ ಮಹೂರ್ತ ಹಾಗೂ ಸಮಾಲೋಚನಾ ಸಭೆ ಭಾನುವಾರ ನಡೆಯಿತು....

Close