ಕಿನ್ನಿಗೋಳಿ ಧರ್ಮ ಜಾಗೃತಿ ಸಭೆ

ಕಿನ್ನಿಗೋಳಿ: ಇಂದು ಪ್ರತೀ ಹೆಜ್ಜೆಯಲ್ಲಿಯೂ ಭ್ರಷ್ಠಾಚಾರ ಹಾಸುಹೊಕ್ಕಾಗಿದ್ದು ಗ್ರಾಮೀಣ ಪ್ರದೇಶದ ಜನರನ್ನು ಕಷ್ಠದ ಕೂಪಕ್ಕೆ ತಳ್ಳುತ್ತಿದೆ. ಭಯೋತ್ಪಾದನೆ ಹಾಗೂ ಮತೀಯ ಜಾಲಗಳು ಹೆಚ್ಚಾಗಲು ಭ್ರಷ್ಠಾಚಾರವೇ ಮೂಲ ಕಾರಣವಾಗಿದೆ. ಕೆಲವು ಜನಪ್ರತಿನಿಧಿಗಳು ಸರಕಾರಿ ಅಧಿಕಾರಿಗಳು ಭ್ರಷ್ಠರಾದ ಕಾರಣ ದೇಶದಲ್ಲಿ ಸಮಸ್ಯೆಯುಂಟಾಗಿದೆ ನಮ್ಮ ಯುವ ಸಮಾಜದಲ್ಲಿ ರಾಮ ರಾಜ್ಯದ ಕಲ್ಪನೆ ಬಿತ್ತುವ ಮೂಲಕ ಭ್ರಷ್ಠಾಚಾರ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ದಿವ್ಯ ಬಾಳೆಹಿತ್ತಲು ಹೇಳಿದರು.
ಹಿಂದೂಜನಜಾಗೃತಿ ಸಮಿತಿಯ ವತಿಯಿಂದ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಧರ್ಮ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಹಿಂದೂ ಜನಜಾಗೃತಿ ಸಮಿತಿ ರಣರಾಗಿಣಿ ಶಾಖೆಯ ಲಕ್ಷ್ಮೀ ಪೈ ಮಹಿಳೆಯರ ಸ್ವರಕ್ಷಣಾ ಆತ್ಮರಕ್ಷಣಾ ಕಲೆಗಳ ಅಗತ್ಯ ಎಂಬ ವಿಷಯದಲ್ಲಿ ಮಾಹಿತಿ ನೀಡಿ ಮಾತನಾಡಿ ದೇಶದಲ್ಲಿ ಮತೀಯವಾದಿ ಶಕ್ತಿಗಳು ಹಾಗೂ ರಾಜಕಾರಣಿಗಳ ಓಟ್ ಬ್ಯಾಂಕ್ ರಾಜಕಾರಣಗಳಿಂದಾಗಿ ಅಲ್ಲದೆ ಹಿಂದೂಗಳ ಮೇಲೆ ಧಾಳಿ ನಡೆಯುವ ಕಾರಣ ಹಿಂದೂ ಸಮಾಜವು ಭಯದಲ್ಲಿ ಜೀವಿಸುವ ವಾತಾವರಣ ನಿರ್ಮಾಣವಾಗಿದೆ. ಮಹಿಳೆ ಆತ್ಮರಕ್ಷಣಾ ಕಲೆಗಳಿಂದ ತನ್ನ ಕುಟುಂಬ ಮಾತ್ರವಲ್ಲದೆ ತನ್ನ ಪರಿಸರದ ಜನರನ್ನೂ ರಕ್ಷಿಸುವ ಶಕ್ತಿ ಬರುತ್ತದೆ. ಹಾಗಾಗಿ ಮಹಿಳೆಯರಿಗೆ ರಣರಾಗಿಣಿ ಸಂಸ್ಥೆಯು ಸರಳ ಆತ್ಮರಕ್ಷಣಾ ಕಲೆಗಳನ್ನು ಭೋಧಿಸಿ ಅವರನ್ನು ಧೈರ್ಯವಂತರನ್ನಾಗಿ ಮಾಡಿ ಅವರನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಂಸ್ಕಾರಯುತರನ್ನಾಗಿ ಮಾಡುತ್ತದೆ. ಎಂದರು.
ಕಿನ್ನಿಗೋಳಿ ಶ್ರೀರಾಮ ಮಂದಿರದ ಅರ್ಚಕ ವೆ.ಮೂ. ಗಿರೀಶ್ ಭಟ್ ವೇದಗೀತ ಪಠಣ ಮಾಡಿದರು.
ಈ ಸಂದರ್ಭ ಸನಾತನ ಸಂಸ್ಥೆಯ ಮಂಜುಳಾ ಗೌಡ, ಹಿಂದೂ ಜನಜಾಗ್ರೃತಿ ಸಮಿತಿಯ ಸಮನ್ವಯಕ ವಿವೇಕ ಪೈ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಪ್ರಸ್ತಾವಿಸಿದರು. ರಂಜಿತಾ ಸ್ವಾಗತಿಸಿದರು ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Kinnigoli-1411201603

Comments

comments

Comments are closed.

Read previous post:
ಮಾಫಿಯಾದಲ್ಲಿ ಮುಳುಗಿರುವ ರಾಜ್ಯ ಸರಕಾರ

ಕಿನ್ನಿಗೋಳಿ: ಕಾಂಗ್ರೆಸ್ ಆಡಳಿತದ ಕರ್ನಾಟಕ ಸರಕಾರ ನಿದ್ರಿಸುತ್ತಿದೆ ಪರಿಣಾಮವಾಗಿ ಡ್ರಗ್ ಮಾಫಿಯಾ, ಮರಳು ಮಾಫಿಯಾಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಕೇರಳ ರಾಜ್ಯದಲ್ಲಿರುವಂತೆ ದ್ವೇಷದ ರಾಜಕಾರಣದಿಂದಾಗಿ ನಿರಂತರ ಹತ್ಯೆ,...

Close