ಮಾಫಿಯಾದಲ್ಲಿ ಮುಳುಗಿರುವ ರಾಜ್ಯ ಸರಕಾರ

ಕಿನ್ನಿಗೋಳಿ: ಕಾಂಗ್ರೆಸ್ ಆಡಳಿತದ ಕರ್ನಾಟಕ ಸರಕಾರ ನಿದ್ರಿಸುತ್ತಿದೆ ಪರಿಣಾಮವಾಗಿ ಡ್ರಗ್ ಮಾಫಿಯಾ, ಮರಳು ಮಾಫಿಯಾಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ. ಕೇರಳ ರಾಜ್ಯದಲ್ಲಿರುವಂತೆ ದ್ವೇಷದ ರಾಜಕಾರಣದಿಂದಾಗಿ ನಿರಂತರ ಹತ್ಯೆ, ಕೊಲೆಯತ್ನಗಳು ನಡೆಯುತ್ತಿವೆ. ಉಳ್ಳಾಲದಲ್ಲಿ 7 ಚೂರಿ ಇರಿತ, ಮೂಡಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಓಟ್ ಬ್ಯಾಂಕ್ ರಾಜಕೀಯದಿಂದ ಪೋಲೀಸ್ ಇಲಾಖೆಯನ್ನು ಹಿಡಿದಿಟ್ಟಿರುವ ಸರಕಾರ ಜನರ ಮನಸ್ಸಿನಲ್ಲಿ ಮೂಡಿ ಬಂದು ಜನರ ನೆಮ್ಮದಿಯನ್ನು ಹಾಳುಗೆಡವುತ್ತಿದೆ. ಶಾಲಾ ಕಾಲೇಜು ಪರಿಸರದಲ್ಲಿ ಡ್ರಗ್ಸ್ ಮಾಫಿಯ ನಿರಾಂತಕವಾಗಿ ನಡೆಯುತ್ತಿದೆ. ಮರಳು ಡ್ರಗ್ಸ್ ಮಾಫಿಯಾ ಹಾಗೂ ದ್ವೇಷ ರಾಜಕಾರಣದ ವಿರುದ್ಧ ತಾ. 16 ಬುಧವಾರ ಮಂಗಳೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಭಾನುವಾರ ಕಿನ್ನಿಗೋಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
122.9 ಕೋಟಿ ರೂ. ರಸ್ತೆ ಅಭಿವೃದ್ದಿಗೆ ಜಿಲ್ಲೆಗೆ ಕೇಂದ್ರದಿಂದ ಡಿಪಿಆರ್ ಟೆಂಡರ್ ಆಗಿದೆ ಸುಮರು ಆರೇಳು ತಿಂಗಳಲ್ಲಿ ಯೋಜನೆ ಕಾರ್ಯಾರಂಭ ಆಗಲಿದೆ. ಜಿಲ್ಲೆಯಲ್ಲಿ ನೂರು ಔಷಧಿ ಅಂಗಡಿಗಳನ್ನು ತೆರೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ನಳಿನ್ ಕುಮಾರ್ ಹೇಳಿದರು.
ತನ್ನನ್ನು ಸಾಂಸದನನ್ನಾಗಿ ಆರಿಸಿರುವುದರಿಂದ 2018ರ ತನಕ ಕೇಂದ್ರ ರಾಜಕಾರಣದಲ್ಲೇ ಇರುವುದಾಗಿ ತಿಳಿಸಿದ ನಳಿನ್ ಕುಮಾರ್ ತಾನು ರಾಜ್ಯ ರಾಜಕಾರಣಕ್ಕೆ ಬರುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಂದಿನ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿದ್ದಾರೆ. ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಈಶ್ವರ್, ಉಮಾನಾಥ ಕೋಟ್ಯಾನ್, ಜಗದೀಶ ಅಧಿಕಾರಿ, ಸುದರ್ಶನ್, ಬ್ರಿಜೇಶ್ ಚೌಟ, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-1411201602
ರೋಟರಿ ಜಿಲ್ಲೆ ವಲಯ-1 ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ: ರೋಟರಿಯಂತಹ ಸೇವಾ ಸಂಸ್ಥೆಗಳು ಸಮಾಜ ಸೇವೆಯೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕ್ರೀಡಾ ಮನೋಭಾವನೆಗಳನ್ನು ರೂಢಿಸಬೇಕು ಎಂದು ರೋಟರಿ ಜಿಲ್ಲೆ 3181 ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಿ. ಸಾಲ್ಯಾನ್...

Close