ಕಟೀಲು : ಮಕ್ಕಳ ದಿನಾಚರಣೆ

ಕಿನ್ನಿಗೋಳಿ: ಜವಹರಲಾಲ ನೆಹರು ಆಧುನಿಕ ಭಾರತದ ಶಿಲ್ಪಿ. ಕೃಷಿ, ಕೈಗಾರಿಕೆ, ನೈಸರ್ಗಿಕ ಸಂಪತ್ತಿನ ವಿನಿಯೋಗ ಮತ್ತು ಮಾನವ ಸಂಪನ್ಮೂಲದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದ್ದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಸಂಕಲ್ಪ ಮಾಡಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕನ್ನಡ ಉಪನ್ಯಾಸಕಿ ವನಿತಾಜೋಷಿ, ಸಮಾಜಶಾಸ್ತ್ರ ಉಪನ್ಯಾಸಕ ಶಂಕರನಾರಾಯಣ ನಾಯಕ್, ಶಾರೀರಿಕ ಉಪನ್ಯಾಸಕ ವಿಜಯಕುಮಾರ್ ಶೆಟ್ಟಿ ಶಿಕ್ಷಕ- ಶಿಕ್ಷಕೇತರ ಸಂಘದ ಕಾರ್ಯದರ್ಶಿ ಕವಿತಾ, ವಿದ್ಯಾರ್ಥಿ ಸಂಘದ ನಾಯಕ ಶ್ರೀವತ್ಸ ಹಾಗೂ ಕಾರ್ಯದರ್ಶಿ ಸಾಕ್ಷಿ ರೈ ಉಪಸ್ಥಿತರಿದ್ದರು.

Kinnigoli-1511201602

Comments

comments

Comments are closed.

Read previous post:
Kinnigoli-1511201601
ಸ್ವಾವಲಂಬಿ ಜೀವನಕ್ಕೆ ಟೈಲರಿಂಗ್ ವೃತ್ತಿ ಸಹಕಾರಿ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸದೃಡ ಹಾಗೂ ಸ್ವಾವಲಂಬಿ ಜೀವನ ಸಾಗಿಸಲು ಟೈಲರಿಂಗ್ ವೃತ್ತಿ ಸಹಕಾರಿಯಾಗಿದೆ ಎಂದು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಬಾಬು ದೇವಾಡಿಗ ಹೇಳಿದರು....

Close