ಸ್ವಾವಲಂಬಿ ಜೀವನಕ್ಕೆ ಟೈಲರಿಂಗ್ ವೃತ್ತಿ ಸಹಕಾರಿ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸದೃಡ ಹಾಗೂ ಸ್ವಾವಲಂಬಿ ಜೀವನ ಸಾಗಿಸಲು ಟೈಲರಿಂಗ್ ವೃತ್ತಿ ಸಹಕಾರಿಯಾಗಿದೆ ಎಂದು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಬಾಬು ದೇವಾಡಿಗ ಹೇಳಿದರು.
ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಾಗೂ ಶ್ರೀ ಕಟೀಲು ವಿವಿದೋದ್ಧೇಶ ಸಹಕಾರ ಸಂಘದ ಜಂಟೀ ಆಶ್ರಯದಲ್ಲಿ ಮಂಗಳವಾರ ಕಟೀಲು ಕ್ಷೀರ ಸಾಗರ ಸಭಾಂಗಣದಲ್ಲಿ ನಡೆದ ಕರ್ನಾಟಕ ಸಮುದಾಯ ಅಭಿವೃದ್ಧಿ(ಸಿ.ಡಿ.ಟಿ.ಪಿ) ಯೋಜನೆಯನ್ವಯ ರೇಡಿಮೇಡ್ ಗಾರ್ಮೆಂಟ್ ಮೇಕಿಂಗ್ ತರಬೇತಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶ್ರೀ ಕಟೀಲು ವಿವಿದೋದ್ಧೇಶ ಸಹಕಾರ ಸಂಘ ವತಿಯಿಂದ ಟೈಲರಿಂಗ್ ಯಂತ್ರವನ್ನು ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಸಿ.ಡಿ.ಟಿ.ಪಿ. ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಆಂತರಿಕ ಸಂಯೋಜಕ ಟಾಕಪ್ಪ ಚೌಹಾಣ್, ರಿಜಿಸ್ಟ್ರಾರ್ ರಾಜೇಂದ್ರ ಪ್ರಸಾದ್, ಸುಧೀರ್ ಕುಮಾರ್, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತಿ ಎನ್ ಶೆಟ್ಟಿ, ಶ್ರೀ ಕಟೀಲು ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ಉಪಾಧ್ಯಕ್ಷ ಸ್ಟ್ಯಾನಿ ಪಿಂಟೋ, ನಿರ್ದೇಶಕ ರಾಮದಾಸ್ ಕಾಮತ್ ಉಪಸ್ಥಿತರಿದ್ದರು.
ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಯಶೋಧ ಆರ್ ಸ್ವಾಗತಿಸಿದರು. ಶ್ರೀ ಕಟೀಲು ವಿವಿದೋದ್ಧೇಶ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಷಾ ಜಯಕರ್ ಕಟೀಲು ವಂದಿಸಿದರು ನಿರ್ದೇಶಕ ಕೆ. ಬಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-1511201601

Comments

comments

Comments are closed.

Read previous post:
Kinnigoli-14112016013
ಕಿನ್ನಿಗೋಳಿ ಕೊಸೆಸಾಂವ್ ಚರ್ಚ್‌ನ ವಾರ್ಷಿಕ ಹಬ್ಬ

ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಭಾನುವಾರ ಮೆರವಣಿಗೆ ಹಾಗೂ ಬಲಿಪೂಜೆ ನಡೆಯಿತು.

Close