ಶ್ರೀಧರಾಯಣ ಅಭಿನಂದನಾ ಕಾರ್ಯಕ್ರಮ

123

ಕಿನ್ನಿಗೋಳಿ: ತೆಂಕುತಿಟ್ಟು ಯಕ್ಷಗಾನ ಕವಿ, ಪ್ರಸಂಗಕರ್ತ, ಯಕ್ಷಪ್ರಭಾ ಮಾಸಪತ್ರಿಕೆಯ ಸಂಪಾದಕರಾಗಿ ಕಟೀಲು ಮೇಳದಲ್ಲಿ 26 ವರ್ಷಗಳಿಂದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಕುಬಣೂರು ಶ್ರೀಧರ ರಾಯರ ಸಾರ್ಥಕ ಸೇವೆಯನ್ನು ಕುಬಣೂರು ಅಭಿಮಾನಿಗಳು ಶ್ರೀಧರಾಯಣ ಅಭಿನಂದನಾ ಕಾರ್ಯಕ್ರಮ ಶನಿವಾರ ಪೂರ್ವಾಹ್ನ ಗಂಟೆ 9 ರಿಂದ ಕಟೀಲು ವಿದ್ಯಾಸದನ ಮತ್ತು ಸರಸ್ವತೀ ಸದನದಲ್ಲಿ ಶೈಕ್ಷಣಿಕ ಗೋಷ್ಠಿಗಳು, ಅಭಿನಂದನೆ, ಸಾಧಕರಿಗೆ ಸನ್ಮಾನ ಪ್ರಶಸ್ತಿ ಪ್ರಧಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅಭಿನಂಧನ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶನಿವಾರ ಪೂರ್ವಾಹ್ನ 9.30ಕ್ಕೆ ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣರು ಶ್ರೀಧರಾಯಣಕ್ಕೆ ದೀಪಬೆಳಗಿಸಿ ಚಾಲನೆ ನೀಡಲಿದ್ದಾರೆ. 10.30ರಿಂದ ಶೈಕ್ಷಣಿಕ ಗೋಷ್ಠಿ ಯಕ್ಷಗಾನ ಹಿಮ್ಮೇಳದಲ್ಲಿ ಪ್ರಸ್ತುತ-ಪ್ರಸ್ತುತಿ ನಡೆಯಲಿದ್ದು ಇದರಲ್ಲಿ ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ, ಅಧ್ಯಯನ ಕಾರಣಗಳಿಂದಾಗಿ ಸುಮಾರು 30 ವಿವಿಧ ಪ್ರಶ್ನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಆಸ್ರಣ್ಣ ತಿಳಿಸಿದರು.
ಮಧ್ಯಾಹ್ನದ ಗೋಷ್ಠಿ ರಾಗಾನುಸಂಧಾನ ನಡೆಯಲಿದ್ದು ತೆಂಕು ಮತ್ತು ಬಡಗು ತಿಟ್ಟುಗಳ ಸಮ್ಮಿಲನದಲ್ಲಿ ವಿವಿಧ ರಾಗಗಳ ಅನುಸಂಧಾನದ ಕುರಿತು ವಿಮರ್ಶೆಗಳಲ್ಲಿ ಆಯ್ದ ಹಿರಿಯ ಭಾಗವತರು ಭಾಗವಹಿಸಲಿದ್ದಾರೆ. ಎರಡೂ ಗೋಷ್ಠಿಗಳಲ್ಲಿ ಎಡನೀರು ಕ್ಷೇತ್ರದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದು ಅವರೊಂದಿಗೆ ಹಿರಿಯ ವಿಧ್ವಾಂಸರು ಅವಲೋಕನಗೈಯಲಿದ್ದಾರೆ. ಸಂಜೆ 5.30 ರಿಂದ ಅಭಿನಂದನಾ ಸಭೆ ನಡೆಯಲಿದ್ದು ಎಡನೀರು ಕ್ಷೇತ್ರದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಬಣೂರು ದಂಪತಿಗಳಿಗೆ ಅಭಿನಂದನೆ. ಶ್ರೀಧರರಾಯರ ಸಂಗೀತ ಗುರುಗಳಾದ ರಘು ಮಾಸ್ತರ್ ಕುಂಬ್ಳೆ ಅವರಿಗೆ ದಾಮೋದರ ಮಂಡೆಚ್ಚ ಪ್ರಶಸ್ತಿ ಪ್ರಧಾನ ಹಿರಿಯ ಸಾಧಕರಿಗೆ ಗೌರವಾರ್ಪಣೆ, ಯಕ್ಷ ಸಂಗೀತ ಶೈಕ್ಷಣಿಕ ಪಾಠದ ಸಿಡಿ ಬಿಡುಗಡೆ, ಕುಬಣೂರು ರವರ ಯಕ್ಷ ಜೀವನ ಆತ್ಮಕಥೆಯನ್ನು ಒಳಗೊಂಡ ಕೃತಿ ಬಿಡುಗಡೆ ಕಾರ್ಯಕ್ರಮವಿರುವುದು ಎಂದರು.
ರಾತ್ರಿ 7.30ರಿಂದ ಬೆಳಿಗ್ಗೆ 6ವರೆಗೆ ಹಿರಿಯ ಪ್ರಸಿದ್ದ ಕಲಾವಿದರಿಂದ ಬ್ರಹ್ಮ ಕಪಾಲ,ಗಧಾಯುದ್ದ,ರಕ್ತರಾತ್ರಿ ಯಕ್ಷಗಾನ ನಡೆಯಲಿದೆ. ಶ್ರೀಧರರಾಯರ ಪರಿಕಲ್ಪನೆಯಲ್ಲಿ ದೇವೇಂದ್ರನ ಒಡ್ಡೋಲಗ ಹಾಗೂ ಪರಮೇಶ್ವರನ ತಾಂಡವ ನೃತ್ಯ ರೂಪಕ ವನ್ನು ಶ್ರೀ ದುರ್ಗಾ ಮಕ್ಕಳ ಮೇಳದ ವಿದ್ಯಾರ್ಥಿಗಳು ನಡೆಸಲಿದ್ದಾರೆ ಹಿರಿಯ ಕಲಾವಿದರಿಂದ ವಿಶಿಷ್ಟ ಚಂಡೆ ಜುಗಲ್‌ಬಂದಿ ನಡೆಯಲಿದೆ ಎಂದರು.
ಈ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷ ಕಮಲಾದೇವಿ ಪ್ರಸಾದ ಆಸ್ರಣ್ಣ, ಅಧ್ಯಕ್ಷ ಶ್ರೀಧರ ಉಡುಪ, ಕಾರ್ಯಾಧ್ಯಕ್ಷ ಮಧುಕರ ಭಾಗವತ್, ಸಂಘಟನಾ ಕಾರ್ಯದರ್ಶಿ ವಾದಿರಾಜ ಕಲ್ಲೂರಾಯ, ಕಾರ್ಯದರ್ಶಿ ಡಾ. ಶುತಕೀರ್ತಿರಾಜ್ ಉಜಿರೆ, ಅಡಕ ಮುದ್ರಿಕೆ ಸಮಿತಿಯ ವೆಂಕಟೇಶ ಉಡುಪ, ವಿಶ್ವೇಶ್ವರ ಭಟ್, ಸಲಹಾ ಸಮಿತಿಯ ರಘುನಾಥಕಾಮತ್ ಕೆಂಚನಕೆರೆ ಉಪಸ್ಥಿತರಿದ್ದರು.

Comments

comments

Comments are closed.