ಕಟೀಲು ಶ್ರೀಧರಾಯಣ ಉದ್ಘಾಟನೆ

ಕಿನ್ನಿಗೋಳಿ: ಜಗತ್ತಿನ ಪುರಾತನ ಕಲೆಗಳಲ್ಲಿ ಯಕ್ಷಗಾನ ಜೀವಂತಿಕೆ ಮತ್ತು ಭಾಷಾ ಶ್ರೀಮಂತಿಕೆ ಉಳಿಸಿಕೊಂಡಿದೆ. ಯಕ್ಷಗಾನದಲ್ಲಿ ಕುಬಣೂರು ಉತ್ತಮ ಸಾಧನೆ ಮಾಡಿದ್ದು ಯಕ್ಷಗಾನದ ಸಂಗೀತ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಕಲಾವಿದರ ಹಾಗೂ ಯಕ್ಷಗಾನ ಅಭಿಮಾನಿಗಳ ಜ್ಞಾನ ದಾಹವನ್ನು ಹೆಚ್ಚಿಸಿ ಬಾಷಾ ಪ್ರಬುದ್ದರಾಗುವಂತೆ ಮಾಡಿದ್ದಾರೆ. ಎಂದು ಎಂದು ಬಹುಶ್ರುತ ವಿದ್ವಾಂಸ ಡಾ.ಎಂ ಪ್ರಭಾಕರ ಜೋಷಿ ಹೇಳಿದರು
ಕಟೀಲು ದೇವಳದ ಸರಸ್ವತಿ ಸದನದಲ್ಲಿ ಶನಿವಾರ ನಡೆದ ಕುಬಣೂರು ಶ್ರೀಧರ ರಾಯರ ಅಭಿನಂಧನ ಕಾರ್ಯಕ್ರಮ ಶ್ರೀಧರಾಯಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಕುಬಣೂರು ಶ್ರೀಧರ ರಾವ್, ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡಮಿ ಮಾಜಿ ಸದಸ್ಯರಾದ ಭಾಸ್ಕರ ಬಾರ್ಯ, ಬಾಸ್ಕರ ರೈ ಕುಕ್ಕುವಳ್ಳಿ, ಸಮಿತಿ ಗೌರಾವಧ್ಯಕ್ಷ ಕಮಲಾದೇವಿ ಪ್ರಸಾದ ಆಸ್ರಣ್ಣ, ಅಧ್ಯಕ್ಷ ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಶ್ರೀ ಭುಜಬಲಿ ಧರ್ಮಸ್ಥಳ, ಶ್ರೀಧರ ಉಡುಪ, ಕಾರ್ಯಾಧ್ಯಕ್ಷ ಮಧುಕರ ಬಾಗವತ್ ಮತ್ತಿತರರು ಉಪಸ್ಥಿತರಿದ್ದರು
ಅಭಿನಂಧನಾ ಸಮಿತಿಯ ಸಂಘಟನಾ ಕಾರ್ಯದರ್ಶಿ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಗಾನ ಹಿಮ್ಮೇಳದಲ್ಲಿ ಪ್ರಸ್ತುತ-ಪ್ರಸ್ತುತಿ ಶೈಕ್ಷಣಿಕ ಗೋಷ್ಠಿ ಹಾಗೂ ತೆಂಕು ಮತ್ತು ಬಡಗು ತಿಟ್ಟುಗಳ ಸಮ್ಮಿಲನದಲ್ಲಿ ವಿವಿಧ ರಾಗಗಳ ಅನುಸಂಧಾನದ ಕುರಿತು ಆಯ್ದ ಹಿರಿಯ ಭಾಗವತರ ರಾಗಾನುಸಂಧಾನ ಗೋಷ್ಠಿ ನಡೆಯಿತು.

Kinnigoli-1911201602

Comments

comments

Comments are closed.

Read previous post:
Kinnigoli-1911201601
ಹಿಂದು ರುದ್ರಭೂಮಿಗೆ ಸಹಾಯ ಹಸ್ತ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಟೀಲು ಮಲ್ಲಿಗೆಯಂಗಡಿ ಸಾರ್ವಜನಿಕ ಹಿಂದು ರುದ್ರಭೂಮಿಗೆ 1.50ಲಕ್ಷ ರೂ.ಗಳನ್ನು ಮಂಗಳೂರು ತಾಲೂಕು ಯೋಜನಾಧಿಕಾರಿ ಉಮ್ಮರಬ್ಬ ಗುರುವಾರ ಯುಗಪುರುಷ ಸಭಾಭವನದಲ್ಲಿ...

Close