ಮಹಿಳೆಯರ ಸಾಮಾಜಿಕ ಬದ್ದತೆಗೆ ಮುನ್ನುಡಿ

ಮೂಲ್ಕಿ: ಮಹಿಳೆಯರು ಸಾಮಾಜಿಕ ಬದ್ಧತೆಯಲ್ಲಿ ನೆಲ ಕಾಣಲು ಇಂದಿರಾ ಗಾಂಧಿಯವರೇ ಮುನ್ನುಡಿಯಾಗಿದ್ದಾರೆ. ರಾಜಕೀಯವಾಗಿಯೂ ಬೆಳೆಯಲು ಮಹಿಳೆಯಲ್ಲಿ ಸಶಕ್ತವಿದೆ ಎಂದು ಅವರು ಜಗತ್ತಿಗೆ ತೋರಿಸಿಕೊಟ್ಟವರು ಎಂದು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾರ್ಡ್ ಹೇಳಿದರು.
ಅವರು ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ವಿಭಾಗದಿಂದ ನಡೆದ ಇಂದಿರಾಗಾಂಧಿಯವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಹಿಳಾ ಒಕ್ಕೂಟದ ನಂದಾ ಪಾಯಸ್ ಇಂದಿರಾ ಗಾಂಧಿಯವರ ಬಗ್ಗೆ ವಿಶೇಷವಾಗಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಅಝೀಝ್, ಚಿತ್ರಾ ಸುರೇಶ್, ಅತಿಕಾರಿ ಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ, ಮಹಿಳಾ ಕಾಂಗ್ರೆಸ್‌ನ ಶಶಿಕಲಾ ಯದೀಶ್ ಅಮಿನ್ ಕೊಕ್ಕರಕಲ್, ಶೆರ್ಲಿ ಬಂಗೇರ, ಸಮಾಜ ಸೇವಕ ಧರ್ಮಾನಂದ ತೋಕೂರು ಇದ್ದರು.

Mulki-1911201608

Comments

comments

Comments are closed.

Read previous post:
123
ಶ್ರೀಧರಾಯಣ ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ: ತೆಂಕುತಿಟ್ಟು ಯಕ್ಷಗಾನ ಕವಿ, ಪ್ರಸಂಗಕರ್ತ, ಯಕ್ಷಪ್ರಭಾ ಮಾಸಪತ್ರಿಕೆಯ ಸಂಪಾದಕರಾಗಿ ಕಟೀಲು ಮೇಳದಲ್ಲಿ 26 ವರ್ಷಗಳಿಂದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಕುಬಣೂರು ಶ್ರೀಧರ ರಾಯರ ಸಾರ್ಥಕ ಸೇವೆಯನ್ನು ಕುಬಣೂರು...

Close