ತಾಳಮದ್ದಲೆ ಹಾಗೂ ಸಾಧಕರ ಸನ್ಮಾನ

ಮೂಲ್ಕಿ: ಧಾರ್ಮಿಕ ವಿಷಯಗಳ ಮೂಲಕ ಯುವ ಸಮಾಜಕ್ಕೆ ಉತ್ತಮ ಸಂಸ್ಕಾರ ನೀಡಲು ತಾಳಮದ್ದಲೆ ಬಹಳ ಸೂಕ್ತ ಮಾದ್ಯಮವಾಗಿದೆ ಎಂದು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಕಿನ್ನಿಗೋಳಿ ಯಕ್ಷಲಹರಿಯ ಸಂಯೋಜನೆಯಲ್ಲಿ ಕಲಾವಿದ ಉಮೇಶ್ ನೀಲಾವರ ರವರ ವತಿಯಿಂದ ನಡೆದ ತಾಳಮದ್ದಲೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆರಳೆಣಿಕೆಯ ಸಮಾನ ಮನಸ್ಕ ಸಹೃದಯರು ಸೇರಿ ಪ್ರಾರಂಭಿಸಿದ ಯಕ್ಷಲಹರಿ ಇದೀಗ ೨೭ವರ್ಷ ಪೂರೈಸುವ ಹೊಸ್ತಿಲಿನಲ್ಲದೆ ಗ್ರಾಮೀಣ ಪ್ರದೇಶದಲ್ಲಿ ತಾಳಮದ್ದಲೆಯನ್ನು ನಡೆಸಿ ಹಿರಿಯ ಮತ್ತು ಯುವ ಕಲಾವಿದರಿಗೆ ಉತ್ತಮ ವೇದಿಕೆ ಹಾಗೂ ಸಾಧಕರನ್ನು ಸನ್ಮಾನಿಸುವ ಮೂಲಕ ಕಲಾಪೋಷಕರಾಗಿ ಈ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.
ಬಪ್ಪನಾಡು ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ ಮಾತನಾಡಿ ಸಾಧಕರನ್ನು ಅವರ ಸ್ವಕ್ಷೇತ್ರದಲ್ಲಿ ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಹೆಚ್ಚಿನ ಬಲ ನೀಡಿದಂತಾಗುತ್ತದೆ ಯಕ್ಷಲಹರಿಯ ಕಲಾ ಕೈಂಕರ್ಯ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭ ಭಾಗವತಿಕೆ ಕ್ಷೇತ್ರದ ಸಾಧಕರಾಗಿ ಹವ್ಯಾಸಿ ಭಾಗವತ ಮೋಹನ ಆಚಾರ್ಯ ಮೂಲ್ಕಿ ಇವರನ್ನು sಸನ್ಮಾನಿಸಲಾಯಿತು.
ಅತಿಥಿಗಳಾಗಿ ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಯಕ್ಷಲಹರಿಯ ಅಧ್ಯಕ್ಷ ಪಿ.ಸತೀಶ್ ರಾವ್,ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ,ಕಾರ್ಯದರ್ಶಿ ವಸಂತ ದೇವಾಡಿಗ, ಕಾರ್ಯಕ್ರಮ ಸಂಯೋಜಕ ಉಮೇಶ್ ನೀಲಾವರ,ಶ್ರೀವತ್ಸ,ರಘುನಾಥ ಕಾಮತ್ ಕೆಂಚನಕೆರೆ ಉಪಸ್ಥಿತರಿದ್ದರು.
ಈ ಸಂದರ್ಭ ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಹಿಮ್ಮೇಳ ಚೆಂಡೆ ಯೋಗೀಶ್ ಆಚಾರ್ಯ ಉಳೆಪಾಡಿ, ಮದ್ದಳೆ ಸುಬ್ರಮಣ್ಯ ಶಾಸ್ತ್ರಿ ,ಅರ್ಥಧಾರಿಗಳಾಗಿ ಮಲ್ಪೆ ವಾಸುದೇವ ಸಾಮಗ,ಸುಣ್ಣಂಬಳ ವಿಶ್ವೇಶ್ವರ ಭಟ್,ಪಶುಪತಿ ಶಾಸ್ತ್ರಿ,ವಸಂತ ದೇವಾಡಿಗ,ಪಿ.ವಿ.ರಾವ್,ಉಮೇಶ ನೀಲಾವರ,ಶ್ರೀವತ್ಸ,ಹರಿರಾಜ ಕುಜಿಂಗಿರಿ ಇವರಿಂದ ಇಂದ್ರಜಿತು ಕಾಳಗ ತಾಳಮದ್ದಲೆ ನಡೆಯಿತು.
ಪಿ.ಸತೀಶ್ ರಾವ್ ಸ್ವಾಗತಿಸಿದರು. ವಸಂತ ದೇವಾಡಿಗ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು.

Mulki-2011201609

Comments

comments

Comments are closed.

Read previous post:
Kinnigoli-1911201602
ಕಟೀಲು ಶ್ರೀಧರಾಯಣ ಉದ್ಘಾಟನೆ

ಕಿನ್ನಿಗೋಳಿ: ಜಗತ್ತಿನ ಪುರಾತನ ಕಲೆಗಳಲ್ಲಿ ಯಕ್ಷಗಾನ ಜೀವಂತಿಕೆ ಮತ್ತು ಭಾಷಾ ಶ್ರೀಮಂತಿಕೆ ಉಳಿಸಿಕೊಂಡಿದೆ. ಯಕ್ಷಗಾನದಲ್ಲಿ ಕುಬಣೂರು ಉತ್ತಮ ಸಾಧನೆ ಮಾಡಿದ್ದು ಯಕ್ಷಗಾನದ ಸಂಗೀತ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಕಲಾವಿದರ...

Close