ಕಟೀಲು ಶ್ರೀಧರಾಯಣ

ಕಿನ್ನಿಗೋಳಿ: ಕಲಾವಿದರನ್ನು ಅಭಿಮಾನಿಗಳು ಜನರು ಗುರುತಿಸುವುದು ಮುಖ್ಯ. ಯಕ್ಷಗಾನ ಮೇಳಗಳಲ್ಲಿರುವ ಕಲಾವಿದರಿಗೆ ಇತ್ತೀಚೆಗೆ ತುಂಬಾ ಬೇಡಿಕೆ ಇದೆ ನಿಜವಾದರೂ ಮೇಳದ ಆಟಗಳಿಗೆ ತೊಂದರೆಯಾಗದಂತೆ ಅಭಿಮಾನಿಗಳು ನೋಡಿಕೊಳ್ಳಬೇಕು. ಬಿಡುವಿಲ್ಲದ ಯಕ್ಷಗಾನ ಬಯಲಾಟ ತಾಳಮದ್ದಲೆಗಳಿಂದ ಹಿಮ್ಮೇಳ ಮುಮ್ಮೇಳದ ಕಲಾವಿದರ ಆರೋಗ್ಯಕ್ಕೂ ತೊಂದರೆ ಜೊತೆಗೆ ಮೇಳಕ್ಕೂ ನಿಖರ ಸೇವೆ ದೊರಕುವುದಿಲ್ಲ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ಜು ವಿದ್ಯಾಸದನ ವೇದಿಕೆಯಲ್ಲಿ ಕಟೀಲು ಮೇಳದ ಭಾಗವತ ಕುಬಣೂರು ಶ್ರೀಧರರಾಯರ ಶ್ರೀಧರಾಯಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಡನೀರು ಮಠ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನಗೈದು ಮಾತನಾಡಿ ಯಕ್ಷಗಾನ ಕಲೆಯಲ್ಲಿ ಆಧುನಿತೆ ಬೇಕಾಗಿದ್ದರೂ ಮೂಲ ಚೌಕಟ್ಟಿಗೆ ಚ್ಯುತಿ ಬಾರದಂತೆ ಪರಂಪರೆಯನ್ನು ಉಳಿಸಿಕೊಂಡು ಯಕ್ಷಗಾನ ಜನರಿಗೆ ಅಭಾಸವಾಗಂತೆ ನೋಡಿಕೊಳ್ಳಬೇಕು. ತೆಂಕುತಿಟ್ಟು ಯಕ್ಷಗಾನದ ಸಮಗ್ರ ಅನುಭವಿ ಸಾಹಿತಿ, ಕವಿ, ಪ್ರಸಂಗಕರ್ತ, ಮೇಳದ ಯಜಮಾನನಾಗಿ ಸರ್ವತೋಮುಖ ಪ್ರಗತಿ ಕಂಡ ಕುಬಣೂರು ಒರ್ವ ಅಪ್ರತಿಮ ಕಲಾವಿದ ಎಂದು ಹೇಳಿದರು.
ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷ ಟಿ. ಶ್ಯಾಂ ಭಟ್ ಕುಬಣೂರು ಭಾಗವತರ ಜೀವನ ಚರಿತ್ರೆ ಯಕ್ಷ ಭೃಂಗ ಕೃತಿಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಕುಬಣೂರು ಭಾಗವತರ ಪದ್ಯಗಳ ಅಡಕ ಮುದಿಕ್ರೆ ಸಿಡಿಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ಕುಬಣೂರು ಶ್ರೀಧರರಾಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು. ದಿ. ದಾಮೋದರ ಮಂಡೆಚ್ಚ ಪ್ರಶಸ್ತಿಯನ್ನು ಸಂಗೀತ ವಿದ್ವಾನ್ ಐ. ರಘು ಮಾಸ್ತರ್ ಕುಂಬಳೆ ಅವರಿಗೆ ನೀಡಿ ಗೌರವಿಸಲಾಯಿತು.
ಬಲಿಪ ನಾರಾಯಣ ಭಾಗವತ, ಗಣೇಶ ಕೊಲಕಾಡಿ, ಲಕ್ಷ್ಮೀಶ ಅಮ್ಮಣ್ಣಾಯ, ಅನೂಸೂಯ ಪಾಠಕ್, ಶ್ರೀ ರಾಮ ಯಕ್ಷಗಾನ ನಾಟಕ ಸಭಾ ಕುಬಣೂರು, ದಿಗಂತ ಮುದ್ರಣ ಅವರಿಗೆ ಗೌರವಾರ್ಪಣೆ ಮಾಡಲಯಿತು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ವೆಂಕಟರಮಣ ಆಸ್ರಣ್ಣ , ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಜಿರೆ ಜನಾರ್ಧನ ಸ್ವಾಮಿ ದೇವಳ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಕಿಶನ್ ಹೆಗ್ಡೆ , ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಉಡುಪಿ ಯಕ್ಷ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೆಕಾರ್, ಅಭಿನಂದನಾ ಸಮಿತಿ ಕಾರ್ಯದ್ಯಕ್ಷ ಮಧುಕರ ಭಾಗವತ್ ಸುರತ್ಕಲ್, ಕೋಶಾಧಿಕಾರಿ ವಿದ್ಯಾಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಗೌರವಾಧ್ಯಕ್ಷ ಕಮಲಾದೇವಿ ಪ್ರಸಾದ್ ಆಸ್ರಣ್ಣ ಸ್ವಾಗತಿಸಿದರು. ಸುಣ್ಣಂಬಳ ವಿಶೇಶ್ವರ ಭಟ್ ಅಭಿನಂಧನಾ ಭಾಷಣಗೈದರು. ಕಾರ್ಯದರ್ಶಿ ಡಾ| ಶ್ರುತ ಕೀರ್ತಿರಾಜ ಉಜಿರೆ ವಂದಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Kateel-2011201602

Comments

comments

Comments are closed.

Read previous post:
Kateel-2011201601
ಕಟೀಲು ದೇವಳ ದೀಪೋತ್ಸವ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕಾರ್ತಿಕ ಮಾಸದ ಶುಕ್ರವಾರ ದೀಪೋತ್ಸವದ ಅಂಗವಾಗಿ ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ ಉತ್ಸವ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು.

Close