ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಆದರ್ಶ ಬಳಗ (ರಿ) ಕೊಡೆತ್ತೂರು ಇವರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ (ರಿ) ಮೂಲ್ಕಿ ವಲಯ, ಶ್ರೀ ವೀರಮಾರುತಿ ವ್ಯಾಯಾಮ ಶಾಲೆ (ರಿ.) ರಾಜರತ್ನಪುರ, ಸಾರ್ವಜನಿಕ ಶ್ರೀ ಬಾಲಗಣೇಶೋತ್ಸವ ಸಮಿತಿ ರಾಜರತ್ನಪುರ, ಹಳೆ ವಿದ್ಯಾರ್ಥಿ ಸಂಘನಡುಗೋಡು (ರಿ.), ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು-ಕಿನ್ನಿಗೋಳಿ, ಸಜ್ಜನ ಬಂಧುಗಳು ಕಿನ್ನಿಗೋಳಿ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ರಿಸರ್ಚ್ ಸೆಂಟರ್ ಮಂಗಳೂರು ಸಹಭಾಗಿತ್ವದೊಂದಿಗೆ ಭಾನುವಾರ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಆದರ್ಶ ಬಳಗದ ದಾಮೋದರ ಶೆಟ್ಟಿ , ವಿಶ್ವಬ್ರಾಹ್ಮಣ ಸೇವಾ ಸಮಾಜ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಪ್ರಥ್ವಿರಾಜ್ ಆಚಾರ್ಯ, ಕೆ. ಬಿ. ಸುರೇಶ್, ವೀರ ಮಾರುತಿ ವ್ಯಾಯಾಮ ಶಾಲೆಯ ಈಶ್ವರ್ ಕಟೀಲು, ಕೇಶವ ಕಕೇರ, ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನ್ಸಂಟ್ ರೋಡ್ರಿಗಸ್, ನಡುಗೋಡು ಹಳೆವಿದ್ಯಾರ್ಥಿ ಸಂಘದ ಹರಿಶ್ಚಂದ್ರ ಆಚಾರ್ಯ, ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜದ ರೇವತಿ ಪುರುಷೋತ್ತಮ, ಅನುಷಾ, ಶ್ವೇತಾ ಆಚಾರ್ಯ, ಮೂಲ್ಕಿ ಪೋಟೋಗ್ರಾಫರ್ ಅಸೋಶಿಯೇಶನ್ ಸಂಘದ ಕಾರ್ಯದರ್ಶಿ ಅರುಣ್ ಉಲ್ಲಂಜೆ , ಎ.ಜೆ. ಆಸ್ಪತ್ರೆ ರಕ್ತನಿಧಿ ವಿಭಾಗದ ಡಾ. ರಜನೀ, ವೀಣಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-2011201603

Comments

comments

Comments are closed.

Read previous post:
Kateel-2011201602
ಕಟೀಲು ಶ್ರೀಧರಾಯಣ

ಕಿನ್ನಿಗೋಳಿ: ಕಲಾವಿದರನ್ನು ಅಭಿಮಾನಿಗಳು ಜನರು ಗುರುತಿಸುವುದು ಮುಖ್ಯ. ಯಕ್ಷಗಾನ ಮೇಳಗಳಲ್ಲಿರುವ ಕಲಾವಿದರಿಗೆ ಇತ್ತೀಚೆಗೆ ತುಂಬಾ ಬೇಡಿಕೆ ಇದೆ ನಿಜವಾದರೂ ಮೇಳದ ಆಟಗಳಿಗೆ ತೊಂದರೆಯಾಗದಂತೆ ಅಭಿಮಾನಿಗಳು ನೋಡಿಕೊಳ್ಳಬೇಕು. ಬಿಡುವಿಲ್ಲದ ಯಕ್ಷಗಾನ...

Close