ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ಕಾರ್ಯಕ್ರಮ

ಮೂಲ್ಕಿ: ಸ್ವಾವಲಂಭಿ ಬದುಕಿಗೆ ಕಾನೂನು ತಿಳುವಳಿಕೆ ಬಹಳ ಮುಖ್ಯ ಎಂದು ಮೂಡಬಿದ್ರೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ, ಸಿವಿಲ್ ನ್ಯಾಯಾದೀಶರಾದ ಅರುಣಾಕುಮಾರಿ ಎ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ಮೂಲ್ಕಿ ನಗರ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೂಲ್ಕಿ ಪೋಲೀಸ್ ಠಾಣೆಯ ಪ್ರಾಯೋಜಕತ್ವದಲ್ಲಿ ಬುಧವಾರ ನಡೆದ ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಅತೀ ಉತ್ತಮ ಸವಿಂದಾನ ಹಾಗೂ ಕಾನೂನು ಹಕ್ಕು ಭಾರತದ ನಾಗರೀಕರಿಗೆ ಲಭ್ಯವಾಗಿದೆ. ವ್ಯಕ್ತಿಯ ಹುಟ್ಟಿನ ಮೊದಲು ಹಾಗೂ ಮರಣದ ನಂತರವೂ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿರುತ್ತದೆ. ನಮ್ಮ ಹಕ್ಕು ಬಾದ್ಯತೆಗಳ ರಕ್ಷಣೆಗೆ ಕಾನೂನು ದಂಡ ಸಂಹಿತೆಗಳು ರಕ್ಷಣೆ ನೀಡುತ್ತದೆ. ಮಹಿಳಾ ಮತ್ತು ಮಕ್ಕಳ ಕಾನೂನು ಮಹಿಳಾ ಸಭಲೀಕರಣ ಲಿಂಗತಾರತಮ್ಯ ಹಾಗೂ ಮಕ್ಕಳ ಶೋಷಣೆಯನ್ನು ನಿಯಂತ್ರಿಸಿ ಸಮಾನ ಸ್ವಸ್ಥ ಜೀವನವನ್ನು ರೂಪಿಸುತ್ತದೆ. ಕಾನೂನಿನ ಬಗ್ಗೆ ತಿಳಿದುಕೊಂಡು ಕಷ್ಟದಲ್ಲಿರುವವರಿಗೆ ಸಹಕರಿಸುವುದು ಸಾರ್ವಜನಿಕರ ಕರ್ತವ್ಯ ಪ್ರಾಧಿಕಾರವು ಆರ್ಥಿಕ ದುಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ, ಮಹಿಳೆ ಮತ್ತು ಮಕ್ಕಳಿಗೆ ಹಾಗೂ ಪ್ರಕೃತಿ ವಿಕೋಪ ಹಾಗೂ ನಿರ್ವಸತಿಗರಿಗೆ ಉಚಿತ ನೆರವು ನೀಡುತ್ತದೆ ಆದರೆ ಪ್ರತೀಯೊಬ್ಬ ಪ್ರಜೆಯು ಕಾನೂನು ಮಾಹಿತಿ ಪಡೆಯಲು ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದ್ರೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ವಹಿಸಿದ್ದರು. ನ್ಯಾಯವಾದಿಗಳಾದ ಶಾಂತಿ ಪ್ರಸಾದ್ ಹೆಗ್ಡೆ ಮತ್ತು ಶರತ್ ಡಿ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಮಾಹಿತಿ ನೀಡಿದರು. ಕಾನೂನು ವಿದ್ಯಾರ್ಥಿನಿ ಭವ್ಯಾ ಮಕ್ಕಳ ಕಾನೂನು ಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ, ಮೂಲ್ಕಿ ಠಾಣೆಯ ನಿರೀಕ್ಷಕ ಅನಂತಪದ್ಮನಾಭ, ವಿಜಯಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮೀನಾ ಆಳ್ವಾ. ನ್ಯಾಯವಾದಿ ಶುಭಾ ಅತಿಥಿಗಳಾಗಿದ್ದರು.
ಅನಂತಪದ್ಮನಾಭ ಸ್ವಾಗತಿಸಿದರು. ಸ್ವಾತಿ ಶೆಟ್ಟಿ ನಿರೂಪಿಸಿದರು. ಡಾ.ನಾರಾಯಣ ಪೂಜಾರಿ ವಂದಿಸಿದರು.

Mulki-23112016010

Comments

comments

Comments are closed.

Read previous post:
Kinnigoli-2011201603
ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಆದರ್ಶ ಬಳಗ (ರಿ) ಕೊಡೆತ್ತೂರು ಇವರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ (ರಿ) ಮೂಲ್ಕಿ ವಲಯ, ಶ್ರೀ ವೀರಮಾರುತಿ...

Close