ದಾಮಸ್‌ಕಟ್ಟೆ ಚರ್ಚ್ ವಾರ್ಷಿಕ ಹಬ್ಬ

ಕಿನ್ನಿಗೋಳಿ: ದಾಮಸ್‌ಕಟ್ಟೆ ಕಿರೆಂ ರೆಮದಿ ಅಮ್ಮನವರ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಂದು ಶತಮಾನಗಳ ಹಿಂದೆ ಟಿಪ್ಪು ಸುಲ್ತಾನ್ ಚರ್ಚ್ ಮೇಲೆ ದಾಳಿ ನಡೆಸಿದ ಸಂದರ್ಭ ಸ್ಥಳೀಯ ಮೂರು ಬಂಟ ಮನೆತನಗಳು ಚರ್ಚನ್ನು ರಕ್ಷಿಸಿದ ಪ್ರತೀಕವಾಗಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಿಗೆ ಸಂಪ್ರದಾಯದಂತೆ ಅಡಿಕೆ, ವೀಳ್ಯ ಹಾಗೂ ಬಾಳೆಗೊನೆ ನೀಡಲಾಯಿತು.
ಐಕಳಬಾವ ರಘುಚಂದ್ರ ಶೆಟ್ಟಿ, ಜಯಪಾಲ ಶೆಟ್ಟಿ, ತಾಳಿಪಾಡಿಗುತ್ತು ದಿನೇಶ್ ಶೆಟ್ಟಿ, ಸುಕುಮಾರ್ ಶೆಟ್ಟಿ, ವಿಜಯ ಶೆಟ್ಟಿ ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ, ಉದಯ ಶೆಟ್ಟಿ, ಸುರೇಶ್ ಶೆಟ್ಟಿ ಗೌರವ ಸ್ವೀಕರಿಸಿದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೋ, ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ, ದಾಮಸ್‌ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ, ಸಹಾಯಕ ಧರ್ಮಗುರು ಎಡ್ವಿನ್ ಮೋರಿಸ್ ಪಾಲನಾ ಮಂಡಳಿ ಉಪಾಧ್ಯಕ್ಷ ಮ್ಯಾಕ್ಸಿ ಪಿಂಟೊ, ಕಾರ್ಯದರ್ಶಿ ಅನಿತಾ ಡಿ’ಸೋಜ, ಬರ್ಟನ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-2411201601

Comments

comments

Comments are closed.

Read previous post:
Mulki-23112016010
ಹೋಬಳಿ ಮಟ್ಟದ ಕಾನೂನು ಸಾಕ್ಷರತಾ ಕಾರ್ಯಕ್ರಮ

ಮೂಲ್ಕಿ: ಸ್ವಾವಲಂಭಿ ಬದುಕಿಗೆ ಕಾನೂನು ತಿಳುವಳಿಕೆ ಬಹಳ ಮುಖ್ಯ ಎಂದು ಮೂಡಬಿದ್ರೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ, ಸಿವಿಲ್ ನ್ಯಾಯಾದೀಶರಾದ ಅರುಣಾಕುಮಾರಿ ಎ ಹೇಳಿದರು. ಮೂಲ್ಕಿ ವಿಜಯಾ ಕಾಲೇಜಿನಲ್ಲಿ...

Close