ಕಟೀಲು ಮೇಳಗಳ ತಿರುಗಾಟಕ್ಕೆ ಚಾಲನೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2016-17 ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಪ್ರಥಮ ಸೇವೆಯಾಟದ ಪ್ರಯುಕ್ತ ದೇವಳದಲ್ಲಿ ಗುರುವಾರ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆರು ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು. ಆರು ಮೇಳಗಳ ದೇವರ ಪೆಟ್ಟಿಗೆ ,ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಳದಲ್ಲಿ ಪೂಜೆ ಬಳಿಕ ಶಾಲಾ ಸರಸ್ವತೀ ಸದನದಲ್ಲಿನ ಚೌಕಿಯಲ್ಲಿ ಪೂಜೆ ನಡೆಯಿತು. ದೇವಳದ ರಥಬೀದಿಯಲ್ಲಿ ನಿರ್ಮಿಸಿದ ಆರು ರಂಗಸ್ಥಳಗಳಲ್ಲಿ ಬಯಲಾಟ ನಡೆಯಿತು. ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ , ಡಾ. ರವೀಂದ್ರನಾಥ ಪೂಂಜಾ, ಕಟೀಳು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ವೇದವ್ಯಾಸ ತಂತ್ರಿ , ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-24111600 Kateel-24111601 Kateel-24111602 Kateel-24111603
Kateel-24111605 Kateel-24111606 Kateel-24111607 Kateel-24111608

Comments

comments

Comments are closed.

Read previous post:
Kinnigoli-2411201601
ದಾಮಸ್‌ಕಟ್ಟೆ ಚರ್ಚ್ ವಾರ್ಷಿಕ ಹಬ್ಬ

ಕಿನ್ನಿಗೋಳಿ: ದಾಮಸ್‌ಕಟ್ಟೆ ಕಿರೆಂ ರೆಮದಿ ಅಮ್ಮನವರ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಂದು ಶತಮಾನಗಳ ಹಿಂದೆ ಟಿಪ್ಪು ಸುಲ್ತಾನ್ ಚರ್ಚ್ ಮೇಲೆ ದಾಳಿ ನಡೆಸಿದ ಸಂದರ್ಭ ಸ್ಥಳೀಯ ಮೂರು...

Close