ಸುರಗಿರಿ ದೇವಳ – ಸಮಾಲೋಚನಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು-ಕೆಮ್ರಾಲ್-ಕಿಲೆಂಜೂರುವಿನ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ 2017 ಮೇ 1 ರಂದು ನಡೆಯಲಿರುವ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ದೇವಳದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಅತ್ತೂರು ಬೈಲು ವೆಂಕಟ್ರಾಜ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಕೆರೆ, ತೀರ್ಥಮಂಟಪ ಗಣಪತಿ ಗುಡಿ ಜೀಣೋಧ್ಧಾರದ ಮಾಡುವ ಬಗ್ಗೆ ತಿರ್ಮಾನಿಸಲಾಯಿತು. ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನಿಮಿತ್ತ ವಿವಿಧ ಸಮಿತಿ ಉಪ ಸಮಿತಿಗಳನ್ನು ರಚಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಪ್ರಧಾನ ಅರ್ಚಕ ವಿಶ್ವೇಶ ಭಟ್, ಮೊಕ್ತೇಸರರಾದ ಬಾಲಚಂದ್ರ ಭಟ್, ಅನಂತರಾಮ ಭಟ್, ಪ್ರಕಾಶ್ ಶೆಟ್ಟಿ , ಸಮಿತಿಯ ಲವ ಶೆಟ್ಟಿ , ಶಂಭುಮುಕ್ಕಾಲ್ದಿ ಭಂಡಾರ ಮನೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜನಾರ್ದನ ಕಿಲೆಂಜೂರು ಸ್ವಾಗತಿಸಿ ವಿವಿಧ ಸಮಿತಿಗಳ ವಿವರ ನೀಡಿದರು. ರಜ್ ಶೆಟ್ಟಿ ಸಭೆಯ ನಿರ್ಣಯಗಳನ್ನು ಮಂಡಿಸಿದರು. ಕೃಷ್ಣರಾಜ್ ಭಟ್ ವಂದಿಸಿದರು. ಧನಂಜಯ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-28112016014

Comments

comments

Comments are closed.

Read previous post:
Kinnigoli-25112016013
ಯಕ್ಷಗಾನ ಕಲಾ ಉಳಿಸಿ ಬೆಳೆಸಿದ ಮುಖ್ಯಪ್ರಾಣ

ಕಿನ್ನಿಗೋಳಿ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಎರಡು ವ್ಯಕ್ತಿಗಳಿಗೆ ಈ ಪ್ರಶಸ್ತಿ ಸಂದಿರುವುದು ಸಂತಸ ವಿಷಯ. ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದ ಕಾರಣ ಅರ್ಹವ್ಯಕ್ತಿಗಳಿಗೆ...

Close