ಯಕ್ಷಗಾನ ಕಲಾ ಉಳಿಸಿ ಬೆಳೆಸಿದ ಮುಖ್ಯಪ್ರಾಣ

ಕಿನ್ನಿಗೋಳಿ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಎರಡು ವ್ಯಕ್ತಿಗಳಿಗೆ ಈ ಪ್ರಶಸ್ತಿ ಸಂದಿರುವುದು ಸಂತಸ ವಿಷಯ. ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದ ಕಾರಣ ಅರ್ಹವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಂಕು ಬಡಗಿನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರಿಗೆ ಕಿನ್ನಿಗೋಳಿ ನಾಗರೀಕರು ಮತ್ತು ಯಕ್ಷಗಾನ ಪ್ರೇಮಿಗಳು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿ, ಯಕ್ಷಗಾನವೇ ಪ್ರಾಣವಾಗಿರಿಸಿದ ಮುಖ್ಯಪ್ರಾಣರು ತಮ್ಮ ವಿದ್ವತ್‌ಪೂರ್ಣ ಹಾಸ್ಯದಿಂದ ತೆಂಕು ಬಡಗು ಕ್ಷೇತ್ರದಲ್ಲಿ ನಿರಂತರ ೫೧ವರ್ಷಗಳ ಕಾಲ ತ್ರಾಣ ತುಂಬಿಸಿದ ಮಹಾನುಭಾವಿ ಸಾಧಕ ಕಿನ್ನಿಗೋಳಿಯ ಹೆಸರನ್ನು ಬೆಳಗಿಸಿದ ಆದರ್ಶ ವ್ಯಕ್ತಿ ಎಂದರು.
ಯಕ್ಷಗಾನ ಪ್ರಸಂಗಕರ್ತ ವಿಮರ್ಶಕ ಶ್ರೀಧರ ಡಿ.ಎಸ್ ಅಭಿನಂಧನೆ ಮಾತುಗಳನ್ನಾಡಿ ಯಕ್ಷಗಾನ ಕಲಾ ಪ್ರಕಾರದ ವೈಶಿಷ್ಟತೆಯನ್ನು ಉಳಿಸಿ ಬೆಳೆಸಿ, ಯಕ್ಷಗಾನದ ಚೌಕಟ್ಟನ್ನು ಮೀರದೆ ಮಿಜಾರು ಶೈಲಿಯಲ್ಲಿ ಹಾಸ್ಯವನ್ನು ಮೇಳೈಸಿ ಯುವಕರನ್ನು ನಾಚಿಸುವಂತ ಪ್ರದರ್ಶನ ನೀಡುವ ಇಳಿ ವಯಸ್ಸಿನ ಮುಖ್ಯಪ್ರಾಣರು ಧನ್ಯರು. ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಂಕು ಬಡಗಿನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಹಾಗೂ ಪತ್ನಿ ಗುಲಾಬಿ ಶೆಟ್ಟಿಗಾರ್ ಅವರೊಂದಿಗೆ ಸಾರ್ವಜನಿಕ ಅಭಿನಂದನೆ ನೀಡಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಮುಖ್ಯಪ್ರಾಣರು ಯಕ್ಷಗಾನದಲ್ಲಿ ೫೧ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದೇನೆ ಅವಿಭಜಿತ ಜಿಲ್ಲೆ ಹಾಗೂ ಪರವೂರಿನಲ್ಲಿ ಜನರು ನನ್ನನ್ನು ಕಿನ್ನಿಗೋಳಿ ಹೆಸರಿನಿಂದ ಗುರುತಿಸಿದ್ದಾರೆ. ಈ ಪ್ರಶಸ್ತಿ ನನ್ನ ಹುಟ್ಟೂರು ಕಿನ್ನಿಗೋಳಿಗೆ ಸಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ವಿದ್ವಾಂಸ ವಾದಿರಾಜ ಉಪಾದ್ಯಾಯ ಕೊಲೆಕಾಡಿ ಶುಭಾಶಂಸನೆಗೈದರು.
ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಶ್ರೀ ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಮುಂಬೈ ಉದ್ಯಮಿ ಏಳಿಂಜೆ ಕೊಂಜಾಲುಗುತ್ತು ಅನಿಲ್ ಶೆಟ್ಟಿ ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಸ್ವಾಗತಿಸಿದರು. ದ.ಕ ಜಿಲ್ಲಾ ಪದ್ಮಶಾಲಿ ಸಭಾ ಅಧ್ಯಕ್ಷ ಪುರಂದರ ಶೆಟ್ಟಿಗಾರ್ ಪ್ರಸ್ತಾವನೆಗೈದರು.
ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ ಸನ್ಮಾನ ಪತ್ರ ವಾಚಿಸಿದರು, ಪತ್ರಕತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸರಪಾಡಿ ಅಶೋಕ್ ಶೆಟ್ಟಿ ನೇತ್ರತ್ವದಲ್ಲಿ ಯಕ್ಷ ಹಾಸ್ಯ ವೈಭವ ನಡೆಯಿತು.

Kinnigoli-25112016013

 

Comments

comments

Comments are closed.

Read previous post:
Kinnigoli-25112016012
ಫೇವರ್ ಫಿನಿಶ್ ಡಾಮರೀಕರಣ- ಗುದ್ದಲಿ ಪೂಜೆ

ಕಿನ್ನಿಗೋಳಿ: ದ.ಕ. ಸಂಸದರ ನಿಧಿಯಿಂದ 5 ಲಕ್ಷ ರೂ. ಪಡುಪಣಂಬೂರು ಗ್ರಾಮ ಪಂಚಾಯಿತಿ ನಿಧಿಯಿಂದ 1.5ಲಕ್ಷ ರೂ. ವಿನಿಯೋಗಿಸಿ ತೋಕೂರು ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾಗಣಪತಿ ದೇವಳದ ರಸ್ತೆಯಿಂದ...

Close