ಮಕ್ಕಳ ಹಕ್ಕು ವಿಶೇಷ ಗ್ರಾಮಸಭೆ

ಕಿನ್ನಿಗೋಳಿ: ಹಳೆಯಂಗಡಿ ಸಂತೆಕಟ್ಟೆ -ಗುಂಡಿ ರಸ್ತೆ ಸರಿಯಾಗಿಲ್ಲ ಮಳೆಗಾಲದ ಸಂದರ್ಭ ಶಾಲೆಗೆ ಬರಲು ಬಹಳ ಕಷ್ಟ, ಕಿನ್ನಿಗೋಳಿಯಿಂದ ಬರುವ ಬಸ್ಸುಗಳ ವೇಗಕ್ಕೆ ಕಡಿವಾಣ ಬೇಕು ಈ ಬಸ್ಸುಗಳ ಧಾವಂತದಲ್ಲಿ ವಿದ್ಯಾರ್ಥಿಗಳಿಗೆ ಅಪಾಯವಿದೆ. ಪಡುಪಣಂಬೂರು ಸರಕಾರಿ ಶಾಲೆಯ ಶೌಚಾಲಯದ ಬಳಿ ಪೊದೆ ತುಂಬಿದ್ದು ಹಾವುಗಳು ಶೌಚಾಲಯದ ಮಾಡಿನಲ್ಲಿ ಸಂಚರಿಸುವುದರಿಂದ ಭಯವಾಗುತ್ತದೆ. ಪುನರೂರು ಕ್ವಾಟ್ರಸ್ ಬಳಿ ರಸ್ತೆ ಸರಿಯಾಗಿಲ್ಲ ರಾತ್ರಿ ಯಾವುದೇ ರಿಕ್ಷಾ ಅಧವಾ ಇನ್ನಿತರ ವಾಹನ ಬಾರದೆ ಸಮಸ್ಯೆಯಾಗುತ್ತದೆ. ಕೆರೆಕಾಡು ಬಸ್ಸು ನಿಲ್ದಾಣ ಕುಸಿದಿದೆ ಈ ಬಗ್ಗೆ ಸಂಭಂದಿತರು ಗಮನಹರಿಸಬೇಕು ಇವು ಪಡುಪಣಂಬೂರು ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಹಕ್ಕು ಜಾರಿಗಾಗಿ ಮಂಗಳವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಾಡು ಬೆಳ್ಳಾಯೂರಿನಲ್ಲಿ ನಡೆಸಿದ ಮಕ್ಕಳ ಹಕ್ಕು ವಿಶೇಷ ಗ್ರಾಮಸಭೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ನೀಡಿದ ದೂರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಈ ಬಗ್ಗೆ ಮಾತನಾಡಿ, ಮಕ್ಕಳ ಹಕ್ಕು ಬಾದ್ಯತೆಗಳ ಬಗ್ಗೆ ಪಡುಪಣಂಬೂರು ಪಂಚಾಯಿತಿ ಶೀಘ್ರವಾಗಿ ಸ್ಪಂದಿಸುತ್ತಿದೆ. ಮಕ್ಕಳ ಶಿಕ್ಷಣ ಸಂಬಂದಿ ಸಮಸ್ಯೆಗಳು ಹಾಗೂ ಮೂಲ ಭೂತ ವ್ಯವಸ್ಥೆಗಳ ಬಗ್ಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ದೂರುಗಳನ್ನು ಪರಿಶೀಲಿಸಿ ಸಂಬಂದಿತ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗುವುದು ಎಂದರು.
ಪಡುಪಣಂಬೂರು ಶಾಲೆಯ ಮುಖ್ಯ ಶಿಕ್ಷಕಿ ರತಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಮಕ್ಕಳ ಹಕ್ಕು ಬಾದ್ಯತೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಜೊತೆಗೆ ಮಕ್ಕಳು ಅನುಭವಿಸುವ ಕಿರುಕುಳಗಳು ಹಾಗೂ ಸಮಾಜಿಕ ಶೋಷಣೆಯ ಬಗ್ಗೆ ಮಕ್ಕಳು ನೇರವಾಗಿ ಪೋಷಕರು ಮತ್ತು ಶಿಕ್ಷಕರಲ್ಲಿ ತಿಳಿಸಬೇಕು ಇಲ್ಲವಾದರೆ ಮಕ್ಕಳು ನೇರವಾಗಿ 1098 ಉಚಿತ ಕರೆ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆರಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಆಚಾರ್ಯ ಮಾತನಾಡಿ, ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೆ ಬರಬೇಕು ಶ್ರೀಮಂತರು ಮತ್ತು ಬಡವರ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಲಭ್ಯವಾಗಬೇಕು ನಗರದ ಶಿಕ್ಷಣ ಸೌಲಭ್ಯಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗಬಾರದು. ಮಕ್ಕಳ ಹಕ್ಕು ಬಾದ್ಯತೆಗಳನ್ನು ಹಿರಿಯರು ಗೌರವಿಸುವ ಮೂಲಕ ಪ್ರತಿಭಾನ್ವಿಯ ಮುಂದಿನ ಪೀಳಿಗೆಯ ಉನ್ನತಿಗೆ ಎಲ್ಲರೂ ಸಹಕಾರಿಗಳಾಗಬೇಕು ಎಂದರು.
ಈಸಂದರ್ಭ ಸುಬ್ರಮಣ್ಯ ಹಿರಿಯ ಪ್ರಾಥಮಿಕ ಶಾಲೆಯ ಜೀವಿತಾ, ಹಿಂದುಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಜ್ವಲ್, ತೋಕೂರು ತಪೋವನ ರಾಮಣ್ಣ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೇಹಾ, ಪಡುಪಣಂಬೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ, ಪಡುಪಣಂಬೂರು ಪಂಚಾಯಿತಿ ಉಪಾಧ್ಯಕ್ಷೆ ಸುರೇಖಾ ಕೆ, ಪಿಡಿಒ ಅನಿಥಾ ಕ್ಯಾಥರಿನ್, ಸಮೂಹ ಸಂಪನ್ಮೂಲ ವ್ಯಕಿ ಸಿಆರ್‌ಪಿ ಕುಸುಮಾ, ಪಂ,ಸದಸ್ಯರಾದ ವಿನೋದ್ ಸಾಲ್ಯಾನ್, ವನಜಾ, ಸಂಪಾವತಿ, ಕುಸುಮಾ, ಮಂಜುಳಾ, ಸುಜಾತ, ಲೀಲಾ ಭಂಜನ್, ಉಮೇಶ್, ಹೇಮನಾಥ, ಪುಷ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನ, ಮುಖ್ಯ ಶಿಕ್ಷಕಿ ಭುವನೇಶ್ವರೀ ಅತಿಥಿಗಳಾಗಿದ್ದರು .ಮಕ್ಕಳ ಗ್ರಾಮ ಸಭೆಯ ಪ್ರಯುಕ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಫಲಿತಾಂಶ: ಸೀನಿಯರ್ ವಿಭಾಗ ಪ್ರಬಂಧ ಸ್ಪರ್ಧೆ:  ಪ್ರಥಮ: ಶಶಿಪ್ರಭಾ 7ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು, ದ್ವಿತೀಯ: ಜಾಹ್ನವಿ ಶೆಟ್ಟಿ 7ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಶಾಲೆ ತೋಕೂರು,

ಜೂನಿಯರ್ ವಿಭಾಗ ಪ್ರಥಮ: ದೀಪಿಕಾ 5ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು, ದ್ವಿತೀಯ: ಪವಿತ್ರ 5ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು,

ಭಾಷಣ ಸ್ಪರ್ಧೆ ಸೀನಿಯರ್ ವಿಭಾಗ ಪ್ರಥಮ: ವಿಘ್ನೇಶ್ 7ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 10ನೇ ತೋಕೂರು, ದ್ವಿತೀಯ: ಶಾರ್ವರಿ 6ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 10ನೇ ತೋಕೂರು,

ಜೂನಿಯರ್ ವಿಭಾಗ ಪ್ರಥಮ: ಆರ್ಮನ್ 5ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 10ನೇ ತೋಕೂರು, ದ್ವೀತಿಯ: ತನ್ವಿತಾ 5ನೇ ತರಗತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಪಣಂಬೂರು,

ಚಿತ್ರಕಲಾ ಸ್ಪರ್ಧೆ ಸಬ್ ಜೂನಿಯರ್ ವಿಭಾಗ ಪ್ರಥಮ: ಶಮಿತ್ ರಿಶಾವ್ ರಾಡ್ರಿಗಸ್ 2ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 10ನೇ ತೋಕೂರು, ದ್ವಿತೀಯ: ಋತ್ವಿಕ್ ರೈ 1ನೇ ತರಗತಿ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ 10ನೇ ತೋಕೂರು.
ಸುಬ್ರಮಣ್ಯ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿದರು. ಪಡುಪಣಂಬೂರು ಪಂಚಾಯಿತಿ ಸಿಬ್ಬಂದಿ ಶರ್ಮಿಳಾ ನಡಾವಳಿ ವಾಚಿಸಿದರು. ತೋಕೂರು ಹಿಂದುಸ್ಥಾನಿ ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ನಿರೂಪಿಸಿದರು.ರಾಮಣ್ಣ ಶೆಟ್ಟಿ ಶಾಲೆಯ ವಿದ್ಯಾರ್ಥಿನಿ ನೇಹಾ ವಂದಿಸಿದರು.

Mulki-3011201601

Comments

comments

Comments are closed.

Read previous post:
Kinnigoli-28112016015
ಮುತ್ತಯ್ಯ ರಾಮಣ್ಣ ಶೆಟ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಲ್ಲಂಜೆ ನಿವಾಸಿ ಮುತ್ತಯ್ಯ ರಾಮಣ್ಣ ಶೆಟ್ಟಿ (83 ವರ್ಷ) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. ಮೃತರು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು...

Close