ಆಕ್ರೋಶ ದಿವಸ್ ಪ್ರತಿಭಟನೆ

ಮೂಲ್ಕಿ: ಕಾಳ ಧನಿಕರ ಕೃಪೆಯಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾದ ನರೇಂದ್ರ ಮೋದಿಯವರು ಕೋಟಿ ವೆಚ್ಚದ ಸೂಟು ಧರಿಸಿರುವುದು ಬಿಟ್ಟರೆ ದೇಶದ ಜನಸಾಮಾನ್ಯರಿಗೆ ಮಾಡಿದ ಸಹಾಯವಾದರೂ ಏನು? ಅವರು ಐಷಾರಾಮೀ ಜೀವನ ದೊಂದಿಗೆ ದೇಶ ವಿದೇಶ ಸುತ್ತುತ್ತಾ ಇದೀಗ ಏಕಾಏಕಿ ನೋಟು ಬ್ಯಾನ್ ಮೂಲಕ ಜನಸಾಮಾನ್ಯರಿಗೆ ಕಷ್ಟದ ಜೀವನ ನೀಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಹಾಗೂ ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಮೂಲ್ಕಿಯ ಕಾರ್ನಾಡಿನಲ್ಲಿ ಹಮ್ಮಿಕೊಳ್ಳಲಾದ ಆಕ್ರೋಶ ದಿವಸ್ ಪ್ರತಿಭಟನೆ ಸಂದರ್ಭ ಮೂಲ್ಕಿ ನಾಡ ಕಛೇರಿಯ ಹೊರ ಪ್ರಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಹಿಂದೆ ಸಂಪೂರ್ಣ ತಯಾರಿಯೊಂದಿಗೆ ನೋಟು ರದ್ದತಿ ಮಾಡಿತ್ತು ಆದರೆ ಇದು ಮೋದಿಯವರ ಉದ್ಧಟತನದ ಪ್ರತೀಕವಾಗಿ ಜನಸಾಮಾನ್ಯರಿಗೆ ಪೂರ್ವ ಮಾಹಿತಿ ನೀಡದೆ ಹಠಾತ್ ರದ್ದುಗೊಳಿಸಿದ್ದರಿಂದ ಜನಸಾಮಾನ್ಯರ ಬದುಕು ತೀರಾ ಕಷ್ಟದಾಯಕವಾಗಿದೆ. ಎಂದರು. ದೇಶದ ಸ್ವಾತಂತ್ರ್ಯಗಳಿಕೆಯ ಬಳಿಕ ಪಂಚ ವಾರ್ಷಿ ಯೋಜನೆಗಳ ಮೂಲಕ ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್, ಮನಮೋಹನ್ ಸಿಂಗ್ ರವರು ದೇಶದ ಏಳಿಗೆಗಾಗಿ ಹೋರಾಟ ಹಾಗೂ ತ್ಯಾಗ ಮಾಡಿದ್ದರು. ಆದರೆ ಮೋದಿ ದೇಶಕ್ಕಾಗಿ ಮಾಡಿದ ತ್ಯಾಗವೇನು? ಎಂದು ಪ್ರಶ್ನಿಸಿದ ಜೈನ್,ನಾವು ದುಡಿದು ಬ್ಯಾಂಕ್‌ನಲ್ಲಿ ಹಾಕಿದ ಹಣ ಸರಿಯಾದ ಸಮಯದಲ್ಲಿ ನಮಗೆ ದೊರೆಯದಿದ್ದರೆ ಬಡ ಜನತೆ ಏನು ಮಾಡಲು ಸಾಧ್ಯ. ಬಡ ಜನರ ಧ್ವನಿಯಾದ ಕಾಂಗ್ರೆಸ್ ಪಕ್ಷವು ಬಿಜೆಪಿಯಂತೆ ಯಾವತ್ತೂ ಬಂದ್ ನಡೆಸದು ಕೇಂದ್ರ ಸರಕಾರದ ಬಡಜನವಿರೋಧಿ ಧೋರಣೆಗಳ ವಿರುದ್ದ ಕಾಂಗ್ರೆಸ್ ಪಕ್ಷ ಆಕ್ರೋಷ ವ್ಯಕ್ತಪಡಿಸಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, 360 ಕೋಟಿ ರೂಪಾಯಿ ಕಾಳಧದ ಬಲದಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ ಇದೀಗ ಅವರು ಚುನಾವಣೆಗೆ ಖರ್ಚು ಮಾಡಿದ ಹಣದ ವಿವರ ದೇಶದ ಜನತೆಗೆ ನೀಡಬೇಕೆಂದು ಮೋದಿಯವರ ನೋಟು ಬ್ಯಾನ್ ಬಳಿಕ ಸರತಿ ಸಾಲಿನಲ್ಲಿ ನಿಂತು ಬಸವಳಿದ 68 ಮಂದಿ ಅಸುನೀಗಿದ್ದಾರೆ. ಇದಕ್ಕೆ ಮೋದಿಯವರೇ ನೇರ ಹೊಣೆ ಎಂದ ಅವರು ಸಂಸಾರವನ್ನೇ ನಡೆಸದ ಮೋದಿಯವರಿಗೆ ಸಾಂಸಾರಿಕ ನೋವು ಹೇಗೆ ತಿಳಿಯಬೇಕು.ಭೇಟಿ ಬಚಾವೂ ಎನ್ನುವ ಅವರಿಂದ ಬ್ಯಾಂಕ್‌ನಲ್ಲಿದ್ದ ಹಣ ಸಿಗದೆ ಹಲವು ಮದುವೆಗಳು ನಿಂತುಹೋಗಿವೆ ಎಂದವರು ಹೇಳಿದರು.
ಮೌನ ಪ್ರಾರ್ಥನೆ: ಬ್ಯಾಂಕ್ ಮುಂದೆ ಸರತಿಸಾಲಿನಲ್ಲಿ ನಿಂತು ಅನಾರೋಗ್ಯಪೀಡಿತರಾಗಿ ಅಸುನೀಗಿದ ದೇಶದ 68 ಮಂದಿ ಸಾರ್ವಜನಿಕರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕರ್ತರು ಅಭಯಚಂದ್ರ ಜೈನ್ ನೇತೃತ್ವದಲ್ಲಿ ಕಾರ್ನಾಡಿನಿಂದ ಮೂಲ್ಕಿ ವಿಜಯಾ ಬ್ಯಾಂಕ್ ತನಕ ಕೇಂದ್ರ ಸರಕಾರ ಹಾಗೂ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾರ್ನಾಡಿನಲ್ಲಿರುವ ನಾಡಕಛೇರಿಗೆ ಮೆರವಣಿಗೆ ಮೂಲಕ ತೆರಳಿ ಆಕ್ರೋಶ್ ದಿವಸ್ ಅಂಗವಾಗಿ ತಹಶೀಲ್ದಾರ್ ಕಿಶೋರ್ ಕುಮಾರ್‌ಗೆ ಮನವಿಯೊಂದನ್ನು ಅರ್ಪಿಸಿದರು.
ಈ ಸಂದರ್ಭ ಕೆ.ಪಿ.ಸಿಸಿ ಸದಸ್ಯ ವಸಂತ ಬೆರ್ನಾಡ್,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಡಿಸೋಜಾ, ಬಜ್ಪೆ ವಲಯ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ,ಪಕ್ಷದ ಮುಖಂಡರುಗಳಾದ ಶಾಲೆಟ್ ಪಿಂಟೋ,ಬಶೀರ್ ಜೋಕಟ್ಟೆ, ಚಂದ್ರಹಾಸ ಸನಿಲ್, ಸರೋಜಿನಿ ಸುವರ್ಣ,ಮನೋರಮಾ ಹೆನ್ರಿ, ದಾವೂದ್ ಹಕೀಂ,ಪ್ರಮೋದ್ ಸುವರ್ಣ,ರತ್ನಾಕರ ದೇವಾಡಿಗ,ದಯಾನಂದ ಕೋಟ್ಯಾನ್ ಮಟ್ಟು, ಮೋನಪ್ಪ ಶೆಟ್ಟ,ಸುರೇಂದ್ರ ಪೆರ್ಗಡೆ,ಸುಪ್ರಿಯಾ ಶೆಟ್ಟಿ,ಸಾಹುಲ್ ಹಮೀದ್, ಬಿ.ಎಮ್.ಆಸಿಫ್, ಪುತ್ತುಬಾವ, ಜೊಸ್ಸಿ ಪಿಂಟೋ, ಯೋಗೀಶ್ ಕೋಟ್ಯಾನ್, ಸಂದೀಪ್ ಚಿತ್ರಾಪು, ಹಸನ್‌ಬಶೀರ್ ಕುಳಾಯಿ, ಅಶೋಕ್ ಪೂಜಾರ್,ವೈ.ಕೆ. ಸಾಲ್ಯಾನ್, ಸುಧೀರ್ ಕರ್ಕೇರಾ ಹೆಜ್ಮಾಡಿ,ಜಲಜಾ ಹಳೆಯಂಗಡಿ,ಸುಗಂಧಿ ಕೊಂಡಾಣ,ಅಬ್ದುಲ್ ಖಾದರ್,ಶಶೀಂದ್ರ ಸಾಲ್ಯಾನ್,ಸಂತೋಷ್ ಶೆಟ್ಟಿ,ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Mulki-3011201603

Comments

comments

Comments are closed.

Read previous post:
Mulki-3011201602
ಕಾರ್ತಿಕ ತುಳಸಿ ಸಂಕೀರ್ಥನಾ

ಹಳೆಯಂಗಡಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕಾರ್ತಿಕ ತುಳಸಿ ಸಂಕೀರ್ಥನಾ ಭಜನಾ ಮಂಗಲೋತ್ಸವವು ನಗರ ಸಂಕೀರ್ಥನೆಯೊಂದಿಗೆ ಜರುಗಿತು.

Close