ಮೂಲ್ಕಿ ಅರಸು ಕಂಬಳ ಸಮಿತಿ ಸಭೆ

ಮೂಲ್ಕಿ: ಪ್ರಾಣಿ ಹಿಂಸೆಯ ನೆಪದಿಂದ ಕಂಬಳಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತಡೆಯಾಜ್ಞೆ ಪರಿಣಾಮ ಕಳೆದ 800 ವರ್ಷದ ಇತಿಹಾಸ ಇರುವ ಮೂಲ್ಕಿ ಸೀಮೆಯ ಅರಸು ಕಂಬಳದ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಕೈಗೊಂಡು, ಮುಂದಿನ ಸ್ಪಷ್ಟ ಆದೇಶ ಸಿಗುವವರೆಗೂ ನಡೆಸುವ ಜನಾಂದೋಲನಕ್ಕೆ ಸಮಿತಿಯು ಸಂಪೂರ್ಣವಾಗಿ ಬೆಂಬಲಿಸಲಾಗುವುದು ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ತಿಳಿಸಿದರು.
ಅವರು ಪಡುಪಣಂಬೂರು ಅರಮನೆಯಲ್ಲಿ ನಡೆದ ಮೂಲ್ಕಿ ಸೀಮೆಯ ಅರಸು ಕಂಬಳ ಸಮಿತಿಯ ವಿಶೇಷ ಸಭೆಯಲ್ಲಿ ಮಾತನಾಡಿ, ಮೂಲ್ಕಿ ಸೀಮೆಯ ಕಂಬಳವು ಒಂದು ಸಾಂಪ್ರದಾಯಿಕ ಕಂಬಳವಾಗಿದ್ದು ಸುಮಾರು 800 ವರ್ಷದ ಇತಿಹಾಸ ಇದೆ ಇಲ್ಲಿನ ಕಂಬಳ ಪ್ರಕ್ರಿಯೆಯಲ್ಲಿ ಧಾರ್ಮಿಕ ಆಚರಣೆಗಳು ಹಾಸುಹೊಕ್ಕಾಗಿವೆ ಈ ಧಾರ್ಮಿಕ ಆಚರಣೆಗಳನ್ನು ಪ್ರದೇಶದ ಹಿತದೃಷ್ಠಿಯಲ್ಲಿ ಪ್ರತೀವರ್ಷವೂ ಕಳೆದ 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ.ಎಲ್ಲಾ ವಿಧಿ ವಿಧಾನಗಳಾದ ಅರಮನೆಯ ನಾಗದೇವರ ಸಾನ್ನಿಧ್ಯದ ಆರಾಧನೆ, ದೈವಾರಾಧನೆ, ಬಪ್ಪನಾಡು, ಶಿಮಂತೂರು ದೇವಳಗಳಿಗೆ ವಿಶೇಷ ಪೂಜೆ, ಅರಮನೆಯ ಪದ್ಮಾವತಿ ಅಮ್ಮ ಮತ್ತು ಚಂದ್ರಾನಾಥ ಸ್ವಾಮಿ ಬಸದಿಯಲ್ಲಿ ಧಾರ್ಮಿಕ ವಿಧ ವಿಧಾನವನ್ನು ನಡೆಸಿ ಕಂಬಳಗದ್ದೆಗೆ ಪ್ರಸಾದ ಹಾಕುವ ಸಾಂಪ್ರದಾಯಿಕ ಕ್ರಮಗಳು ಪೂರ್ವನಿಗದಿತ ಡಿಸೆಂಬರ್ ೩೧ರಂದೇ ನಡೆಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಕೋಲ್ನಾಡುಗುತ್ತು ರಾಮಚಂದ್ರ ನಾಯಕ್ ಅಭಿಪ್ರಾಯ ತಿಳಿಸಿ, ಕಂಬಳದ ಬಗ್ಗೆ ನ್ಯಾಯಾಲಯದ ಆದೇಶ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕಾನೂನಿನ ವಿರುದ್ಧವಾಗಿ ಯಾವುದೇ ರೀತಿಯಲ್ಲಿ ಸಮಿತಿಯು ಕಾರ್ಯವೆಸಗದು ಆದರೆ ಜಿಲ್ಲಾ ಕಂಬಳ ಸಮಿತಿಯವರು ಹಮ್ಮಿಕೊಂಡಿರುವ ಪ್ರತಿಯೊಂದು ಜನಾಂದೋಲನ ಹೋರಾಟಕ್ಕೆ ಸಂಪೂರ್ಣವಾಗಿ ಸಮಿತಿಯು ಬೆಂಬಲಿಸುತ್ತದೆ ಹೋರಾಟವು ಕಾನೂನಿನ ಚೌಕಟ್ಟಿನಲ್ಲಿ ನಡೆಯುವುದರಿಂದ ಸಮಿತಿ ಹಾಗೂ ಸಾರ್ವಜನಿಕರು ತನ್ನ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನ್ಯಾಯವಾದಿ ಚಂದ್ರಶೇಖರ್ ಜಿ., ಅರಮನೆಯ ಗೌತಮ್ ಜೈನ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಹರಿಪ್ರಸಾದ್, ಸಮಿತಿಯ ನವೀನ್ ಶೆಟ್ಟಿ ಎಡ್ಮೆಮಾರ್, ಮನ್ಸೂರ್ ಎಚ್., ನವೀನ್, ಕಿರಣ್‌ಕುಮಾರ್ ಪಡುತೋಟ, ಸುಭಾಶ್, ರಮೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Mulki-3011201605

Comments

comments

Comments are closed.

Read previous post:
Mulki-3011201604
ವೀರೇಶ್ ಮಠಪತಿ ತರಬೇತಿದಾರರಾಗಿ ಆಯ್ಕೆ

ಹಳೆಯಂಗಡಿ: ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಟೇಬಲ್‌ಟೆನ್ನಿಸ್ ತರಬೇತುದಾರ ವೀರೇಶ್ ಮಠಪತಿ ಕರ್ನಾಟಕ ರಾಜ್ಯ ತಂಡದ ತರಬೇತಿದಾರರಾಗಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಯುವ ರಾಷ್ಟ ಮಟ್ಟದ ಟೇಬಲ್...

Close