ಡಿ.3 ದ. ಕ. ಜಿ. ಮಟ್ಟದ ಯುವಜನೋತ್ಸವ

ಪಾವಂಜೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಳೆಯಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್, ಪಣಂಬೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಹಳೆಯಂಗಡಿ ಇವುಗಳ ಸಹಯೋಗದಲ್ಲಿ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಯುವತಿ ಮತ್ತು ಮಹಿಳಾ ಮಂಡಲ (ರಿ) ಇವುಗಳ ಸಂಯುಕ್ತ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಡಿಸೆಂಬರ್ 3 ರಂದು ಶನಿವಾರ ಬೆಳಿಗ್ಗೆ 9 ರಿಂದ ಪಾವಂಜೆಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಪಂಡಿತ್ ಎಚ್ ಸುಬ್ರಾಯ ಭಟ್ ವೇದಿಕೆಯಲ್ಲಿ ಜರಗಲಿದೆ ಎಂದು ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್ ಅಮೀನ್ ಹೇಳಿದರು ಅವರು ಪಾವಂಜೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಅಂದು ಬೆಳಿಗ್ಗೆ 9 ಗಂಟೆಗೆ ಸಚಿವ ರಮಾನಾಥ ರೈ ಕಾರ್ಯಕ್ರಮದ ಉದ್ಘಟನೆಯನ್ನು ನೆರವೇರಿಸಲಿದ್ದು, ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಸಚಿವ ಯು.ಟಿ ಖಾದರ್ ಮತ್ತಿತರ ಜನ ಪ್ರತಿನಿಧಿಗಳು ಬಾಗವಹಿಸಲಿದ್ದು ಸಮಾರೋಪ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಬಾಗವಹಿಸಲಿದ್ದಾರೆ ಎಂದರು ಯುವಜನೋತ್ಸವದಲ್ಲಿ ಜನಪದ ನೃತ್ಯ, ಜನಪದ ಹಾಡು, ಏಕಾಂಕ ನತಕ ಶಾಸ್ತ್ರೀಯ ಸಂಗೀತ, ಗಿಟಾರ್ ವಾದನ ಶಾಸ್ತ್ರೀಯ ನೃತ್ಯ ಆಶು ಬಾಷಣ ಸ್ಪರ್ದೆಗಳು ಜರಗಲಿದ್ದು ಜಿಲ್ಲೆಯ 15 ರಿಂದ 35 ವರ್ಷದ ಒಳಗಿನ ಯುವಕ ಯುವತಿಯರು ಬಾಗವಹಿಸಬಹುದು ಎಂದರು ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಸುಮಾರು 200ರಿಂದ 250 ಸ್ಪರ್ದಿಗಳು ಬಾಗವಹಿಸುವ ನಿರೀಕ್ಷೆ ಇದ್ದು ಸುಮಾರು 700 ರಿಂದ 800 ಜನ ಸೇರುವ ನಿರೀಕ್ಷೆ ಇದೆ ಎಂದರು ಈ ಸಂದರ್ಭ ಪರಮೇಶ್ವರ್ ಕೆ, ಚಂದ್ರ ಶೇಖರ್, ಸ್ಟಾನಿ ಡಿ ಕೋಸ್ತ, ನಾಗೇಶ್ ವಿನೋದ್ ಬೊಳ್ಳೂರು, ರಾಮಚಂದ್ರ ಶಣೈ ಮತ್ತಿತರರು ಇದ್ದರು.

Comments

comments

Comments are closed.

Read previous post:
Mulki-3011201606
ಮೂಲ್ಕಿ ಸಂಭ್ರಮ ದಿವಸ್

ಮೂಲ್ಕಿ: ಕೇಂದ್ರ ಸರ್ಕಾರದ ನೋಟು ರದ್ದತಿ ವಿರುದ್ದ ವಿಪಕ್ಷಗಳು ಕರೆ ನೀಡಿದ ಆಕ್ರೋಶ ದಿನಕ್ಕೆ ಪ್ರತಿಯಾಗಿ ಮೂಲ್ಕಿಯ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಮೂಲ್ಕಿಯ ಕಾರ್ನಾಡು...

Close