ಏಸ್ ವಾಹನ ಪಲ್ಟಿ ಇಬ್ಬರಿಗೆ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಕೋಲ್ನಾಡು ಬಳಿ ಮೂಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಏಸ್ ವಾಹನ ಪಲ್ಟಿಯಾಗಿ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ. ಮೂಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಸರಂಜಾಮು ಹೇರಿಕೊಂಡು ಅತೀ ವೇಗದಲ್ಲಿ ಸಾಗುತ್ತಿದ್ದ ವಾಹನ ಕೋಲ್ನಾಡು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕೂಡಲೇ ಸ್ಥಳೀಯರು ಧಾವಿಸಿ ವಾಹನದೊಳಗೆ ಇದ್ದ ಇಬ್ಬರನ್ನು ಹೊರತೆಗೆದಿದ್ದಾರೆ. ವಾಹನ ಚಾಲಕ ಮತ್ತು ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಳಿಕ ಕ್ರೇನ್ ತರಿಸಿ ವಾಹನವನ್ನು ಮೇಲೆತ್ತಲಾಯಿತು. ಸುರತ್ಕಲ್ ಟ್ರಾಫಿಕ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Mulki-0312201606

Comments

comments

Comments are closed.

Read previous post:
Mulki-0312201605
ಮಂಜು ಮುಸುಕಿದ ವಾತಾವರಣ

ಮುಲ್ಕಿ: ಹೋಬಳಿಯ ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ಪಡುಪಣಂಬೂರು  ಮಂಜು ಮುಸುಕಿದ ವಾತಾವರಣ ಕಂಡುಬಂದಿದ್ದು ರಸ್ತೆಯಲ್ಲಿ ವಾಹನ ಚಲಾಯಿಸಲು ಚಾಲಕರು ಪರದಾಡಬೇಕಾಯಿತು. ಗ್ರಾಮೀಣ ಪ್ರದೇಶಗಳಾದ ಐಕಳ, ಏಳಿಂಜೆ, ಪಂಜಿನಡ್ಕ ,ಬಳಕುಂಜೆಪರಿಸರದಲ್ಲಿ...

Close