ಬಿಜೆಪಿ ಗೆಲ್ಲಿಸಿದಲ್ಲಿ ಸುಖಾನಂದರಿಗೆ ಗೌರವ

ಮೂಲ್ಕಿ: ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬೆಳೆಸಿದ ದಿ.ಸುಖಾನಂದ ಶೆಟ್ಟರ ಬಲಿದಾನವು ಕ್ಷೇತ್ರದಲ್ಲಿ ಕಾರ್ಯಕರ್ತರು ಶ್ರಮವವಹಿಸಿ ಬಿಜೆಪಿ ಗೆಲ್ಲಿಸಿದಾಗ ಮಾತ್ರ ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಅವರು ನಿಧನದರಾದ ಹತ್ತು ವರುಷದಲ್ಲಿ ಮೂಲ್ಕಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಂತೆ ಎಲ್ಲಾ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಶಕ್ತಿಯಾಗಿದ್ದರೆ ಅವರ ಅಂದಿನ ಸಂಘಟನೆಯೇ ಸಾಕ್ಷಿ ಎಂದು ಬಿಜೆಪಿ ಜಿಲ್ಲಾ ನಾಯಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಅವರು ಮೂಲ್ಕಿ ಬಪ್ಪನಾಡುವಿನಲ್ಲಿ ಬಿಜೆಪಿ ನಾಯಕ ದಿ.ಸುಖಾನಂದ ಶೆಟ್ಟಿಯವರ ಸಂಸ್ಮರಣಾ ಕಾರ್ಯಕ್ರಮವಲ್ಲಿ ನುಡಿನಮನ ಸಲ್ಲಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ಮಾತನಾಡಿ, ಹಿಂದುತ್ವವನ್ನು ಗ್ರಾಮೀಣ ಭಾಗದಲ್ಲಿ ಭದ್ರವಾಗಿ ತಳಹದಿ ಹಾಕಲು ಪ್ರೇರಣಾ ಶಕ್ತಿಯಾಗಿದ್ದ ದಿ.ಸುಖಾನಂದ ಶೆಟ್ಟರಂತಹ ನಾಯಕರು ಇಂದಿನ ದಿನದಲ್ಲಿ ಅಗತ್ಯವಿದೆ ಎಂದರು.
ಬಿಜೆಪಿಯ ಜಗದೀಶ್ ಅಧಿಕಾರಿ, ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸತೀಶ್ ಭಟ್ ಕೊಳುವೈಲ್, ಸಂದೇಶ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಮಾತನಾಡಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ, ಉದ್ಯಮಿಗಳಾದ ಯದು ನಾರಾಯಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಶೇಖರ ಶೆಟ್ಟಿ, ಮೂಲ್ಕಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸದಸ್ಯರು, ಬಿಜೆಪಿ ಕ್ಷೇತ್ರದ ಪದಾಧಿಕಾರಿಗಳು ಮತ್ತಿತರರು ಇದ್ದರು.
ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ ನಿರೂಪಿಸಿದರು.1Mulki-0312201604

Comments

comments

Comments are closed.

Read previous post:
ಡಿ.3 ದ. ಕ. ಜಿ. ಮಟ್ಟದ ಯುವಜನೋತ್ಸವ

ಪಾವಂಜೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಳೆಯಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ದಕ್ಷಿಣ...

Close