ಕಟೀಲು ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಬುಧವಾರದಂದು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಕಾಲೇಜಿನ ಸಂಚಾಲಕ ವೇದಮೂರ್ತಿ ವಾಸುದೇವ ಆಸ್ರಣ್ಣರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೈ ಮೋನಪ್ಪ ಶೆಟ್ಟಿಯವರು ವಹಿಸಿದ್ದರು. ಪ್ರಿನ್ಸಿಪಾಲ್ ಜಯರಾಮ ಪೂಂಜ, ಶಾರೀರಿಕ ಉಪನ್ಯಾಸಕ ವಿಜಯಕುಮಾರ್ ಶೆಟ್ಟಿ, ಆಂಗ್ಲಭಾಷಾ ಉಪನ್ಯಾಸಕ ಗೋಪಿನಾಥ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-0212201603

Comments

comments

Comments are closed.

Read previous post:
ತೋಕೂರು ವರ್ಷಾವಧಿ ಷಷ್ಠಿ ಮಹೋತ್ಸವ

ಕಿನ್ನಿಗೋಳಿ: ಡಿಸೆಂಬರ್ 3 ರಿಂದ 6 ರವರೆಗೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವರ್ಷಾವಧಿ ಷಷ್ಠಿ ಮಹೋತ್ಸವ ನಡೆಯಲಿದೆ. ಡಿ. ೩ ಶನಿವಾರ ಮಧ್ಯಾಹ್ನ 12.05ಕ್ಕೆ ಧ್ವಜಾರೋಹಣ, ಮಾಹಾಪೂಜೆ....

Close