ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು

ಮುಲ್ಕಿ: ಸರಕಾರದ ಅನುದಾನಗಳನ್ನು ಸದುಪಯೋಗಪಡಿಸಿಕೊಂಡು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು.ಅದಕ್ಕೆ ಊರಿನ ಹಿರಿಯರ ಸಹಕಾರ ಬೇಕು ಎಂದು ಕಿನ್ನಿಗೋಳಿ ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಹೇಳಿದರು. ಅವರು ಅತಿಕಾರಿಬೆಟ್ಟು ಗ್ರಾಮಪಂಚಾಯತಿಯ ಕಕ್ವ ಎಂಬಲ್ಲಿ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಗೆ ತಾಲ್ಲೂಕು ಪಂಚಾಯತಿ ವತಿಯಿಂದ ಸುಮಾರು ೧ ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಅಳಡಿಸಿದ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಿಲ್ಪಾಡಿ ತಾ.ಪಂ. ಸದಸ್ಯ ಶರತ್ ಕುಬೆವೂರು ಮಾತನಾಡಿ ಶಿಕ್ಷಣಕ್ಕೆ ಸರಕಾರ ಒತ್ತು ನೀಡುತ್ತಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು,ಶಾಲೆಗೆ ರಸ್ತೆಯ ಅಗತ್ಯವಿದ್ದು ಶೀಘ್ರದಲ್ಲೇ ಅನಿಷ್ಠಾನಗೊಳಿಸಲಾಗುವುದು ಎಂದು ಹೇಳಿದರು.ಸಮಾರಂಭದಲ್ಲಿ ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಮನೋಹರ ಕೋಟ್ಯಾನ್,ಮಾಜೀ ತಾ.ಪಂ. ಸದಸ್ಯ ವನಿತಾ,ಊರಿನ ಹಿರಿಯರಾದ ಕೆಎನ್ ಕೋಟ್ಯಾನ್,ಭೋಜ ಅಂಚನ್,ಬಿಜೆಪಿ ನಾಯಕರಾದ ಜಯಾನಂದ ಮೂಲ್ಕಿ,ಸಂತೋಷ್‌ಕುಮಾರ್ ಶೆಟ್ಟಿ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಹಿತ್ ಕುಮಾರ್,ಸತೀಶ್ ಕಕ್ವ,ಮಹೇಶ್ ಕಕ್ವ,ಕಮಲ್,ಗುತ್ತಿಗೆದಾರ ಶರತ್‌ಶ್ಚಂದ್ರ ಶಾಲಾ ಶಿಕ್ಷಕಿ ಶಿಲ್ಪ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾದ್ಯಾಯಿಸಿ ಅಶ್ವಿನಿ ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು.

Mulki-0312201608

Comments

comments

Comments are closed.

Read previous post:
Kinnigoli-0212201603
ಕಟೀಲು ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಬುಧವಾರದಂದು ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದೊಂದಿಗೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಕಟೀಲು ದೇವಳದ ಅನುವಂಶಿಕ...

Close