ಎಂ. ಶ್ರೀನಿವಾಸ ರೆಡ್ಡಿ: ಸ್ಲಂ ಪ್ರದೇಶಗಳಿಗೆ ಭೇಟಿ

ಮೂಲ್ಕಿ: ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪರವರ ನಿರ್ದೇಶನದಂತೆ ರಾಜ್ಯದ ವಿವಿಧ ಸ್ಲಂಗಳಲ್ಲಿ ವಾಸ್ತವ್ಯ ನಡೆಸುವ ಮೂಲಕ ಬಡ ಜನರ ಕಷ್ಟ ಕಾರ್ಪಣ್ಯಗಳ ಪಟ್ಟಿ ತಯಾರಿಸಿ ಹೋರಾಟ ನಡೆಸಲು ನಿರ್ದರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಹಾಗೂ ಉಭಯ ಜಿಲ್ಲಾ ಪ್ರಭಾರಿ ಎಂ. ಶ್ರೀನಿವಾಸ ರೆಡ್ಡಿ ಹೇಳಿದರು.
ಮೂಲ್ಕಿ ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದ ಬಿಜಾಪುರ ಕಾಲನಿಯ ಕೊಳಚೆ ಪ್ರದೇಶಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮಾತನಾಡಿದರು.
ರಾಜ್ಯದಾದ್ಯಂತ ಇರುವ ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಮುಖ್ಯ ವ್ಯವಸ್ಥೆಗಳಾದ ಕುಡಿಯುವ ನೀರು, ಶೌಚಾಲಯ,ಹಕ್ಕುಪತ್ರ, ಬಿಪಿಎಲ್ ಕಾರ್ಡುದಾರರ ಸೌಲಭ್ಯಗಳು,ಒಳಚರಂಡಿ, ಆರೋಗ್ಯ ಸಮಸ್ಯೆಗಳು, ಶಿಕ್ಷಣ ವ್ಯವಸ್ಥೆ, ಹಾಗೂ ಜನ್‌ಧನ್ ಮುಂತಾದ ಆರ್ಥಿಕ ವ್ಯವಸ್ಥೆಗಳ ಬಗ್ಗೆ ತಿಳುವಳಿಕೆ ಮತ್ತು ಸ್ಲಂ ಪ್ರದೇಶದಲ್ಲಿ ರಾತ್ರಿ ವಾಸ್ತವ್ಯ ನಡೆಸಿ ಇಲ್ಲಿನ ಜನರೊಂದಿಗೆ ಬೆರೆತು ಅವರ ಸಮಸ್ಯೆ ತಿಳಿದು ವರದಿ ತಯಾರಿಸಿ ಬಳಿಕ ಸಂಭಂದ ಪಟ್ಟ ಪ್ರದೇಶದಲ್ಲಿ ಅತೀ ಶೀಘ್ರ ಮತ್ತು ಪರಿಣಾಮಕಾರಿ ಹೋರಾಟ ನಡೆಸಲು ರೂಪುರೇಶೆ ಮಾಡಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ರಾಮ ಅಮೀನ್, ಜಿಲ್ಲಾ ಸಂಚಾಲಕ ಶೇಖರ ಪೂಜಾರಿ, ಕಾರ್ಯದರ್ಶಿ ಸಂತೋಷ್ ತುಪ್ಪೆ ಕಟ್ಟ, ಮಂಗಳೂರು ದಕ್ಷಿಣ ವಿಭಾಗ ಕಾರ್ಯದರ್ಶಿ ಹೇಮಂತ್, ಬಿಜೆಪಿ ಜಿಲ್ಲಾ ಮುಖಂಡ ಜಗದೀಶ ಅಧಿಕಾರಿ, ಮೂಲ್ಕಿ ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು,ಕ್ಷೇತ್ರ ಸ್ಲಂ ಮೋರ್ಚಾ ಅಧ್ಯಕ್ಷ ನವೀನ್ ರಾಜ್ ಬಪ್ಪನಾಡು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂ.ಅಧ್ಯಕ್ಷೆ ಸರೋಜಿನಿ ಗುಜರನ್, ಕ್ಷೇತ್ರ ಎಸ್.ಸಿ ಮೋರ್ಚಾ ಅಧ್ಯಕ್ಷ ವಿಠಲ ಎನ್.ಎಂ,ಸ್ಥಾನೀಯ ಅಧ್ಯಕ್ಷ ವಿಠೋಭ ನಾರಾಯಣಪುರ, ಸ್ಲಂ ಮೋರ್ಚಾ ಸ್ಥಳಿಯ ಸಂಚಾಲಕ ನಾಗೇಶ್ ಮೂಲ್ಕಿ, ಕಾರ್ಯದರ್ಶಿಗಳಾದ ಬಸವಲಿಂಗಯ್ಯ,ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

Mulki-0312201609

Comments

comments

Comments are closed.

Read previous post:
Kinnigoli-0312201603
ಶ್ರೀ ಸುಬ್ರಹ್ಮಣ್ಯ ದೇವಳ ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷಾವಧಿ ಜಾತ್ರಾ ಪ್ರಯುಕ್ತ ಶನಿವಾರ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.

Close