ರಿಕ್ಷಾ ಟ್ಯಾಕ್ಸಿ ಚಾಲಕ ಗೈಡ್‌-ಪ್ರವಾಸಿಗರಿಗೆ ಅನುಕೂಲ

ಮೂಲ್ಕಿ: ಸಂಪತ್ಭರಿತ ಅವಿಭಜಿತ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಸ್ಥಳೀಯ ರಿಕ್ಷಾ ಟ್ಯಾಕ್ಸಿ ಚಾಲಕರು ಪ್ರವಾಸಿ ಗೈಡ್‌ಗಳಾಗಿ ಕಾರ್ಯನಿರ್ವಹಿಸಿದಲ್ಲಿ ತಾವೂ ಬೆಳೆಯುವುದರ ಜತೆಗೆ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೊಂಕಣ ರೈಲ್ವೆ ಸಹಾಯಕ ಟ್ರಾಫಿಕ್ ಮ್ಯಾನೇಜರ್ ಎಸ್. ವಿನಯ ಕುಮಾರ್ ಹೇಳಿದ್ದಾರೆ.
ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಕೊಂಕಣ ರೈಲ್ವೆ ಮತ್ತು ದಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸ್ಥಳೀಯ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ನಡೆದ ಪ್ರವಾಸಿ ಗೈಡ್ ತರಬೇತಿ ಶಿಬಿರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ರಿಕ್ಷಾ ಟ್ಯಾಕ್ಸಿ ಚಾಲಕರು ಪ್ರವಾಸಿ ಗೈಡ್ ಆಗಿ ಉಪವೃತ್ತಿಯನ್ನು ಹೊಂದಲು ಈ ಯೋಜನೆ ಅನುಕೂಲವಾಗಲಿದೆ.ಇದರಿಂದ ತಮ್ಮ ಆದಾಯವೂ ದ್ವಿಗುಣವಾಗಲಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಪ್ರವಾಸೋದ್ಯಮ ಸಚಿವರ ನಿರ್ದೇಶನದಂತೆ ಈ ಕಾರ್ಯಕ್ರಮ ಕೊಂಕಣ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸುರೇಶ್ ಟಿ. ಗೌಡ ಮೂಲ್ಕಿ ಹಾಗೂ ಆಸುಪಾಸಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳಿಗೆ ಇಲಾಖಾ ವತಿಯಿಂದ ಸಬ್ಸಿಡಿ ಸಹಿತ ಸಾಲಸೌಲಭ್ಯ ಇದೆ. ಆಸಕ್ತರು 0824-2453926 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಇದೇ ರೀತಿ ಪ್ರವಾಸಿ ಗೈಡ್ ಆಗಿ ಬರುವ ಚಾಲಕರಿಗೆ 3 ತಿಂಗಳ ತರಬೇತಿ ನೀಡಲಾಗುವುದು ಎಂದರು.
ಸಂವಹನ ಕಲೆ, ಉತ್ತಮ ರಾಯಭಾರ, ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಸುರತ್ಕಲ್ ಎಮ್‌ಆರ್‌ಪಿಎಲ್‌ನ ಎಚ್‌ಆರ್‌ಡಿ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ಟ್ರಾಫಿಕ್ ನಿಯಮ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಮೂಲ್ಕಿ ಪೋಲೀಸ್ ಠಾಣಾ ನಿರೀಕ್ಷಕ ಅನಂತಪದ್ಮನಾಭ ತರಬೇತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಗೈಡ್ ಉಮೇಶ್ ಕರ್ಕೇರ, ಇಲಾಖಾ ಅಧಿಕಾರಿ ಹರೀಶ್‌ಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಕೊಖಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Comments

comments

Comments are closed.

Read previous post:
Mulki-0312201609
ಎಂ. ಶ್ರೀನಿವಾಸ ರೆಡ್ಡಿ: ಸ್ಲಂ ಪ್ರದೇಶಗಳಿಗೆ ಭೇಟಿ

ಮೂಲ್ಕಿ: ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪರವರ ನಿರ್ದೇಶನದಂತೆ ರಾಜ್ಯದ ವಿವಿಧ ಸ್ಲಂಗಳಲ್ಲಿ ವಾಸ್ತವ್ಯ ನಡೆಸುವ ಮೂಲಕ...

Close