ದಾಮಸ್ಕಟ್ಟೆ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಭಜನೆ ಸತ್ಸಂಗ ಕಾರ್ಯಕ್ರಮಗಳಿಂದ ಜನರಲ್ಲಿ ಆಧ್ಯಾತ್ಮ ಹಾಗೂ ಧಾರ್ಮಿಕತೆಯ ಭಾವನೆ ಹೆಚ್ಚಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು ಎಂದು ಪುಂಡಲೀಕ ಶೆಣೈ ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಶ್ರೀ ರಾಮಕೃಷ್ಣ ಭಜನಾ ಮಂದಿರ ವಾರ್ಷಿಕ ಭಜನಾ ಮಂಗಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಶ್ರೀಧರ ಭಟ್ ಏಳಿಂಜೆ , ಶ್ರೀ ರಾಮಕೃಷ್ಣ ಭಜನಾ ಮಂದಿರ ಅಧ್ಯಕ್ಷ ರಾಮದಾಸ ಶೆಣೈ, ರಾಜೇಂದ್ರ ಶೆಣೈ, ರಘುರಾಮ ಪ್ರಭು, ಗೋಪಾಲ ಶೆಣೈ, ಅನಂತ ಪ್ರಭು, ರವಿದಾಸಶೆಣೈ, ರಾಮಚಂದ್ರ ಪ್ರಭು, ರವೀಂದ್ರನಾಥ ಶೆಣೈ, ರಾಜೇಶ್ ಶೆಣೈ, ರಾಘವೇಂದ್ರ, ಪ್ರಸಾದ್ ಪ್ರಭು , ರಾಮಚಂದ್ರ ಶೆಣೈ, ಗುರುದತ್ ಕಾಮತ್, ಪುಂಡಲೀಕ್ ಸತೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-0512201604

Comments

comments

Comments are closed.

Read previous post:
Kinnigoli-0512201603
ಕಿನ್ನಿಗೋಳಿ : ಸಪ್ತಾಹ ಗೀತಾ ಪಠಣ ಯಜ್ಞ ಆರಂಭ

ಕಿನ್ನಿಗೋಳಿ: ದ.ಕ. ಭಗವದ್ಗೀತಾ ಅಭಿಯಾನ ಸಮಿತಿ, ಕಿನ್ನಿಗೋಳಿ ಜಿ.ಎಸ್.ಬಿ. ಮಾತೃಮಂಡಳಿ, ಗೀತಾ ಸತ್ಸಂಗ -25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ ವತಿಯಿಂದ ಕಿನ್ನಿಗೋಳಿ ಶಾರದಾ ಮಂಟಪ ವೇದಿಕೆಯಲ್ಲಿ...

Close