ಕಿನ್ನಿಗೋಳಿ : ಸಪ್ತಾಹ ಗೀತಾ ಪಠಣ ಯಜ್ಞ ಆರಂಭ

ಕಿನ್ನಿಗೋಳಿ: ದ.ಕ. ಭಗವದ್ಗೀತಾ ಅಭಿಯಾನ ಸಮಿತಿ, ಕಿನ್ನಿಗೋಳಿ ಜಿ.ಎಸ್.ಬಿ. ಮಾತೃಮಂಡಳಿ, ಗೀತಾ ಸತ್ಸಂಗ -25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ ವತಿಯಿಂದ ಕಿನ್ನಿಗೋಳಿ ಶಾರದಾ ಮಂಟಪ ವೇದಿಕೆಯಲ್ಲಿ ಭಾನುವಾರ ಡಾ. ಸೋಂದಾ ಭಾಸ್ಕರ ಭಟ್ ಮಾರ್ಗದರ್ಶನದಲ್ಲಿ ಗೀತಾ ಜಯಂತಿಯ ಪ್ರಯುಕ್ತ ಸಪ್ತಾಹ ಗೀತಾ ಪಠಣ ಯಜ್ಞ ಉದ್ಘಾಟಿಸಲಾಯಿತು.
ಈ ಸಂದರ್ಭ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ಅಚ್ಯುತ ಮಲ್ಯ, ಭಾಸ್ಕರ ದೇವಸ್ಯ, ಸುರೇಂದ್ರನಾಥ ಶೆಣೈ, ಭಾರತೀ ಶೆಣೈ, ಕೆ.ಜಿ. ಮಲ್ಯ ಸೋಂದಾ ಭಾಸ್ಕರ ಭಟ್, ಸುಬ್ರಹ್ಮಣ್ಯ ಶೆಣೈ, ಮಾಧವ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
ತಾ. 12ರವರೆಗೆ ದಿನಂಪ್ರತಿ ಸಂಜೆ 5.30ರಿಂದ 6.30ರವರೆಗೆ ಭಗವತ್‌ಗೀತೆಯ ನೂರು ಶ್ಲೋಕಗಳ ಪಠಣ ನಡೆಯಲಿದ್ದು, ತಾ.11ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ ಸ್ಪರ್ಧೆ, ರಸಪ್ರಶ್ನೆ ನಡೆಯಲಿದೆ.

Kinnigoli-0512201603

Comments

comments

Comments are closed.

Read previous post:
Kinnigoli-0512201601
ಶ್ರೀ ಸುಬ್ರಹ್ಮಣ್ಯ ದೇವಳ ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಸೋಮವಾರ ಹಗಲು ರಥೋತ್ಸವ ನಡೆಯಿತು.

Close