ಪಂಚತೀರ್ಥ ಸಪ್ತಕ್ಷೇತ್ರ ರಥ ಯಾತ್ರೆ ಸಭೆ

ಕಿನ್ನಿಗೋಳಿ: ಎತ್ತಿನ ಹೊಳೆ ಯೋಜನೆಯಲ್ಲಿ ರಾಜ್ಯ ಸರಕಾರ ದಕ್ಷಿಣ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಯಾವ ಜಿಲ್ಲೆಗೂ ನೀರು ನೀಡಲಿ ಆದರೆ ಯೋಜನೆಯ ಪರಿಸರದ ಬಗ್ಗೆ ವಿಚಾರ ವಿಮರ್ಶೆ, ಸಾಧಕ ಬಾಧಕಗಳನ್ನು ಕೂಲಂಕುಷ ಚರ್ಚೆ ಮಾಡಬೇಕಾಗಿತ್ತು ಈದೀಗ ಜಿಲ್ಲೆಯ ಹೆಚ್ಚಿನ ಜನಪ್ರತಿನಿಧಿಗಳನ್ನು ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ಯುಗಪುರುಷ ಸಭಾಭವನದಲ್ಲಿ ಪಂಚತೀರ್ಥ ಸಪ್ತಕ್ಷೇತ್ರ ರಥ ಯಾತ್ರೆಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಜನರಿಗೆ ಕಳೆದ ಮೂರು ವರ್ಷದಿಂದ ಯಾವುದೇ ನಿಖರ ಮಾಹಿತಿ ನೀಡುತ್ತಿಲ್ಲ ವಿಧಾನ ಪರಿಷತ್‌ನಲ್ಲಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಗಣೇಶ್ ಕಾರ್ಣಿಕ್ ಪ್ರತಿಧ್ವನಿಸಿದ್ದಾರೆ. ಮುಂದಿನ ವರ್ಷ ಜನವರಿ 26 ರಂದು ಕ್ರಾಂತಿಕಾರಿ ಹೋರಾಟ ಮಾಡಲಾಗುವುದು. ಕಾನೂನು ಸಮರ ಹಾಗೂ ಜನಜಾಗೃತಿ ಮೂಲಕವಾಗಿ ಸರಕಾರದ ಮೇಲೆ ನಾವು ಒತ್ತಡ ತರಬೇಕಾಗಿದೆ. ಡಿ. 10, 11,. 12 ರಂದು ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಮಾಡಲಾಗುವುದು ಸುಬ್ರಹ್ಮಣ್ಯ ಕುಮಾರಧಾರೆಯಿಂದ ಆರಂಭವಾಗಿ ಕಟೀಲು ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ ಎಂದು ಹೇಳಿದರು.
ಸಮಿತಿಯ ಸಂಚಾಲಕ ಕೆ. ಮೋನಪ್ಪ ಭಂಡಾರಿ, ಸಹಸಂಚಾಲಕ ಸತ್ಯಜಿತ್ ಸುರತ್ಕಲ್, ದೇವದಾಸ ಶೆಟ್ಟಿ , ಗಣೇಶ ಹೊಸಬೆಟ್ಟು , ಈಶ್ವರ್ ಕಟೀಲು, ಭುವನಾಭಿರಾಮ ಉಡುಪ, ದೇವ ಪ್ರಸಾದ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-0512201605

Comments

comments

Comments are closed.

Read previous post:
Kinnigoli-0512201604
ಉಳೆಪಾಡಿ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ ಮತ್ತು ಸಮಾಜ ಮುಖಿ ಚಿಂತನೆಯ ಮಾಹಿತಿ ಕಾರ್ಯಾಗಾರಗಳು ನಡೆದಾಗ ಗ್ರಾಮೋದ್ಧಾರ ಆಗಲಿದೆ. ಎಂದು ಮೂಲ್ಕಿ ಠಾಣಾ ಉಪ ನಿರೀಕ್ಷಕ ಆರ್. ಶಾಂತಪ್ಪ...

Close