ಉಳೆಪಾಡಿ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ ಮತ್ತು ಸಮಾಜ ಮುಖಿ ಚಿಂತನೆಯ ಮಾಹಿತಿ ಕಾರ್ಯಾಗಾರಗಳು ನಡೆದಾಗ ಗ್ರಾಮೋದ್ಧಾರ ಆಗಲಿದೆ. ಎಂದು ಮೂಲ್ಕಿ ಠಾಣಾ ಉಪ ನಿರೀಕ್ಷಕ ಆರ್. ಶಾಂತಪ್ಪ ಹೇಳಿದರು.
ಶ್ರೀನಿವಾಸ ಆಸ್ಪತ್ರೆ ಮುಕ್ಕ, ಉಳೆಪಾಡಿ ಶ್ರೀದುರ್ಗಾಪರಮೇಶ್ವರೀ ದೇವಳ ಹಾಗೂ ಕಿನ್ನಿಗೋಳಿ ಲಯನ್ಸ್, ಲಯೆನೆಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ದುರ್ಗಾಪರಮೇಶ್ವರೀ – ಮಹಮ್ಮಾಯಿ ದೇವಳ ವಠಾರದಲ್ಲಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮೂಲ್ಕಿ ಠಾಣಾ ಉಪ ನಿರೀಕ್ಷಕ ಆರ್. ಶಾಂತಪ್ಪ ಅವರನ್ನು ಸನ್ಮಾನಿಸಲಾಯಿತು.
ಮುಕ್ಕ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಉದಯಕುಮಾರ್, ಚೀಪ್ ಮೆಡಿಕಲ್ ಆಫೀಸರ್ ಅಣ್ಣಯ್ಯ ಕುಲಾಲ್, ವೈದ್ಯ ಡಾ. ಪ್ರಮೋದ್ ಕುಮಾರ್, ಲಯೆನೆಸ್ ಅಧ್ಯಕ್ಷೆ ವತ್ಸಲಾ ಯೋಗೀಶ್ ರಾವ್, ಮೆಸ್ಕಾಂ ಸುಧಾಕರ್ ಉಪಸ್ಥಿತರಿದ್ದರು.
ದೇವಳ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಸ್ವಾಗತಿಸಿದರು. ರಘುನಾಥ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ವಂದಿಸಿದರು.

Kinnigoli-0512201604

Comments

comments

Comments are closed.

Read previous post:
Kinnigoli-0512201604
ದಾಮಸ್ಕಟ್ಟೆ ವಾರ್ಷಿಕ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಭಜನೆ ಸತ್ಸಂಗ ಕಾರ್ಯಕ್ರಮಗಳಿಂದ ಜನರಲ್ಲಿ ಆಧ್ಯಾತ್ಮ ಹಾಗೂ ಧಾರ್ಮಿಕತೆಯ ಭಾವನೆ ಹೆಚ್ಚಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು ಎಂದು ಪುಂಡಲೀಕ ಶೆಣೈ...

Close