ಬಸ್ಸು ರಿಕ್ಷಾ ಮುಖಾ ಮುಖಿ ಡಿಕ್ಕಿ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಬೊಳ್ಳೂರು ಬಳಿ ಸೋಮವಾರ ಸಂಜೆ ಖಾಸಗಿ ಬಸ್ಸು ಮತ್ತು ಅಟೋರಿಕ್ಷಾ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಇಂದಿರಾನಗರ ನಿವಾಸಿ ಸಾಧಿಕ್ (35) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.

ಪಂಜ ಉಲ್ಯ ನಿವಾಸಿಗಳು ರಿಕ್ಷಾದಲ್ಲಿ ಪಕ್ಷಿಕೆರೆ ಕಡೆಯಿಂದ ತೋಕೂರು ದೇವಳಕ್ಕೆ ಷಷ್ಠಿ ನಿಮಿತ್ತ ಹೊರಟಿದ್ದರು. ಖಾಸಗಿ ಬಸ್ಸು ಒವರ್ ಟೇಕ್ ಮಾಡುವ ಭರದಲ್ಲಿ ತೀರಾ ಬಲಬದಿಯಲ್ಲಿ ಚಲಿಸಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಮುಖಾ ಮುಖಿ ಡಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ರೀತಾ(32), ಮಗ ದಿಶಾನ್ (2), ಉಮಾವತಿ(37) ಮಗ ವೈಭವ್(9) ಹಾಗೂ ಬಸ್ಸಿನಲ್ಲಿದ್ದ ಕಸ್ತೂರಿ ಪೂಜಾರಿ(34),ರೇಣುಕ(28) ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kinnigoli-0612201601 Kinnigoli-0612201602

Comments

comments

Comments are closed.

Read previous post:
Kinnigoli-0512201605
ಪಂಚತೀರ್ಥ ಸಪ್ತಕ್ಷೇತ್ರ ರಥ ಯಾತ್ರೆ ಸಭೆ

ಕಿನ್ನಿಗೋಳಿ: ಎತ್ತಿನ ಹೊಳೆ ಯೋಜನೆಯಲ್ಲಿ ರಾಜ್ಯ ಸರಕಾರ ದಕ್ಷಿಣ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಯಾವ ಜಿಲ್ಲೆಗೂ ನೀರು ನೀಡಲಿ ಆದರೆ ಯೋಜನೆಯ ಪರಿಸರದ ಬಗ್ಗೆ ವಿಚಾರ ವಿಮರ್ಶೆ, ಸಾಧಕ...

Close