ಜನಾರ್ಧನ ರೆಡ್ಡಿ ಕಟೀಲು ದೇವಳಕ್ಕೆ ಭೇಟಿ

ಕಿನ್ನಿಗೋಳಿ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಕಟೀಲು ದೇವಳಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಹಾಗೂ ಚಂಡಿಕಾ ಯಾಗದ ಸೇವೆ ಸಲ್ಲಿಸಿದರು.
ಕಳೆದ ವರ್ಷದಲ್ಲಿ ಚಂಡಿಕಾ ಯಾಗ ಸೇವೆ ನೀಡಬೇಕಾಗಿದ್ದು ಕಾರಣಾಂತರದಿಂದ ಸಾಧ್ಯವಾಗಿಲ್ಲ ಇದೀಗ ನನ್ನ ಮನದ ಇಚ್ಚೆ ನೆರವೇರಿದೆ ಎಂದರು.
ಸುದ್ದಿ ಮಾದ್ಯಮದವರಿಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಕೊಡಲು ನಿರಾಕರಿಸಿದರು. ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಕಟೀಲು ಖಾಸಗಿ ವಸತಿ ಗೃಹದಲ್ಲಿ ವಾಸ್ತವ್ಯ ಹೊಂದಿದ್ದು ಖಾಸಗಿ ಕಾರ್ಯಕ್ರಮ ವಾದ್ದರಿಂದ ಯಾರಿಗೂ ಮಾಹಿತಿ ನೀಡಿಲ್ಲ, ದೇವಳದಲ್ಲಿ ಚಂಡಿಕಾ ಹೋಮ ಸೇವಾ ಕರ್ತ ಸೂರ್ಯನಾರಾಯಣ ಶರ್ಮ ಬಳ್ಳಾರಿ ಎಂಬ ಹೆಸರಲ್ಲಿ ನೋಂದಣಿಯಾಗಿದ್ದು ದೇವಳದ ಆಡಳಿತ ಮಂಡಳಿಗೂ ಜನಾರ್ಧನ ರೆಡ್ಡಿ ಬರುವ ಬಗ್ಗೆ ಮಾಹಿತಿ ಇರಲಿಲ್ಲ ದೇವಳದಿಂದ ವಸತಿ ಗೃಹಕ್ಕೆ ಸುಮಾರು 100 ಮೀಟರ್ ಅಂತರವಿದ್ದು ರೆಡ್ಡಿ ದಂಪತಿಗಳು ಸಾಮಾನ್ಯ ಭಕ್ತರಂತೆ ನಡೆದುಕೊಂಡೇ ಬಂದಿದ್ದರು.

Kinnigoli-0612201603

 

Comments

comments

Comments are closed.

Read previous post:
Kinnigoli-0612201602
ಬಸ್ಸು ರಿಕ್ಷಾ ಮುಖಾ ಮುಖಿ ಡಿಕ್ಕಿ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಬೊಳ್ಳೂರು ಬಳಿ ಸೋಮವಾರ ಸಂಜೆ ಖಾಸಗಿ ಬಸ್ಸು ಮತ್ತು ಅಟೋರಿಕ್ಷಾ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ರಿಕ್ಷಾ ಚಾಲಕ ಇಂದಿರಾನಗರ ನಿವಾಸಿ ಸಾಧಿಕ್ (35)...

Close