ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ ಅಮೃತ ಮಹೋತ್ಸವ

ಕಿನ್ನಿಗೋಳಿ: ಡಿ.9-10 ರಂದು ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ಅಮೃತ ಮಹೋತ್ಸವ ವರ್ಷಾಚರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್. ಸೋಮವಾರ ಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೀಗ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಗೆ ಎಪ್ಪತೈದರ ಸಾರ್ಥಕ ಕ್ಷಣ. ಸುಧರಣಾವಾದಿ ಗುರು ರೈಮಂಡ್ ಎಫ್.ಸಿ ಮಸ್ಕರೇನ್ಹಸ್ ಅವರ ಸ್ತ್ರೀ ಶಿಕ್ಷಣದ ಆದ್ಯತೆಯ ಮೇರೆಗೆ ಈ ಶಿಕ್ಷಣ ಸಂಸ್ಥೆ ಸ್ಥಾಪಿತವಾಗಿದ್ದು ಇಂದಿನವರೆಗೂ ಹಲವಾರು ವಿದ್ಯಾರ್ಥಿಗಳು ವಿವಿಧ ಕ್ಷೇತಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಹಿಲರಿ ಮಸ್ಕರೇನ್ಹಸ್ ಮಾತನಾಡಿ. ಡಿ. 9 ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು ಭಗಿನಿ ಮರಿಯೋಲಾ ಬಿ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಹಾಗೂ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಡಿ. 10 ರಂದು ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ, ಭಗಿನಿ ಸಿಸಲಿಯಾ ಮೆಂಡೊನ್ಸಾ, ಪ್ರೊ. ಎಡ್ಮಂಡ್ ಫ್ರ್ಯಾಂಕ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ಅಭಯಚಂದ್ರ ಜೈನ್, ಸಾರ್ವಜನಿಕ ಶಿಕ್ಷಣ ಇಲಾಖಾ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಮುಲ್ಕಿ ಪೋಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಉದ್ಯಮಿ ಅಶ್ವಿನ್ ಪಿರೇರಾ ಮತ್ತಿತರರು ಭಾಗವಹಿಸಲಿದ್ದಾರೆ.
ಬೆಥನಿ ಕನ್ಯಾ ಮಠದ ಮಾಹಾ ಮಾತೆ ರೋಜ್ ಸಲಿನ್ ಬಿ.ಎಸ್, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಶಾಲಾಮಹಾಪೋಷಕರು, ಶಾಲಾ ಶ್ರೇಯಸ್ಸಿಗಾಗಿ ದುಡಿದ ಶಾಲಾ ಮುಖ್ಯ ಶಿಕ್ಷಕರು, ಶಾಲಾ ಸಂಚಾಲಕರು, ಹಿತೈಷಿಗಳು ಹಾಗೂ ಪ್ರತಿಭಾನಿತ್ವರಿಗೆ ಸನ್ಮಾನ ಮಾಡಲಾಗುವುದು ನಂತರ ಬೆಥನಿ ಶಿಕ್ಷಣ ಸಂಸ್ಥೆಗಳಿಗೆ ಒಳಪಟ್ಟ 5 ವಿದ್ಯಾ ಸಂಸ್ಥೆಗಳ 250 ವಿದ್ಯಾರ್ಥಿಗಳು ನಟಿಸಿ ನರ್ತಿಸುವ ಅಮ್ಮ ನೃತ್ಯ ನಾಟಕ ನಡೆಯಲಿದೆ. ಎಂದರು.
ಈ ಸಂದರ್ಭ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಕೆ. ಭುವನಾಭಿರಾಮ ಉಡುಪ ಶಿಕ್ಷಕ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

Kinnigoli-0612201606 Kinnigoli-0612201607

Comments

comments

Comments are closed.

Read previous post:
Kinnigoli-0612201604
ಮೆನ್ನಬೆಟ್ಟು ಗ್ರಾ. ಪಂ. ಮಹಿಳಾ ಗ್ರಾಮ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಗ್ರಾಮಸಭೆ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ...

Close