ತುಳು ಭಾಷೆ ಹೆಚ್ಚಿನ ಶಬ್ದ ಭಂಡಾರ ಹೊಂದಿದೆ

ಕಿನ್ನಿಗೋಳಿ : ಪ್ರಾಚೀನ ತುಳು ಭಾಷೆ ಕನ್ನಡಕ್ಕಿಂತಲೂ ಹೆಚ್ಚಿನ ಶಬ್ದ ಭಂಡಾರ ಹೊಂದಿದೆ. ಕನ್ನಡದ ಪ್ರಭಾವದಿಂದ ಕ್ಷೀಣಿಸುವ ತುಳುವನ್ನು ಉಳಿಸಿ ಬೆಳೆಸಿ 8 ನೇ ಪರಿಛ್ಛೇದಕ್ಕೆ ಸೇರಿಸುವ ಕೆಲಸ ತುಳುವರಿಂದ ಆಗಬೇಕಾಗಿದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಹೇಳಿದರು.
ಡಿ9 ರಿಂದ 13 ರರವರೆಗೆ ಕಾಸರಗೋಡು ಸಮೀಪದ ಬದಿಯಡ್ಕದಲ್ಲಿ ನಡೆಯುವ ವಿಶ್ವ ತುಳುವರೆ ಆಯನೊ-2016 ಸಮ್ಮೇಳನದಲ್ಲಿ ಪ್ರದರ್ಶಿಸಲ್ಪಡುವ ದೇವದಾಸ ಈಶ್ವರ ಮಂಗಲ ರಚಿಸಿದ ಶ್ರೀ ದೇವಿ ಮಹಾತ್ಮೆ ಕನ್ನಡ ಯಕ್ಷಗಾನದ ತುಳು ಕೃತಿಯನ್ನು ಬುಧವಾರ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಟೀಲಿನ ಆರು ಯಕ್ಷಗಾನ ಮೇಳಗಳಲ್ಲಿ ಮುಂದಿನ ದಿನಗಳಲ್ಲಿ ಒಂದು ಮೇಳದಲ್ಲಿ ತುಳು ಪೌರಾಣಿಕ ಯಕ್ಷಗಾನ ಪ್ರದರ್ಶಿಸಬೇಕೆಂಬ ವಿಶ್ವ ತುಳುವೆರೆ ಆಯನೊ ಸಮಿತಿಯ ಆಶಯಕ್ಕೆ ಕಟೀಲು ದೇವಳ ಆಡಳಿತ ಹಾಗೂ ಜನರ ಅಭಿಪ್ರಾಯಗಳನ್ನು ಆಧರಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುವ ಆಲೋಚನೆಯಿದೆ. ಎಂದರು.
ವಿಶ್ವ ತುಳು ಆಯನ ಸಮಿತಿಯ ಪಧಾನ ಕಾರ್ಯದರ್ಶಿ ರಾಜೇಶ್ ಆಳ್ವ ಮಾತನಾಡಿ ಆಧುನಿಕ ಕಾಲದಲ್ಲಿ ತುಳು ಜನರ ಸಂಸ್ಕೃತಿ ಆಚಾರ ವಿಚಾರಗಳು ಬದಲಾವಣೆಗೊಳ್ಳುತ್ತಿವೆ ಹಲವು ತುಳು ಸಂಪ್ರದಾಯಗಳು ವೈಜ್ಞಾನಿಕವಾಗಿಯೂ ಒಳ್ಳೆಯದೆಂದು ಶ್ರುತ ಪಟ್ಟಿವೆ. ತುಳು ಯಕ್ಷಗಾನ ಈಗ ಪ್ರವರ್ಧಮಾನಕ್ಕೆ ಬರುತ್ತಿದೆ. ಗ್ರಾಮೀಣ ಪ್ರದೇಶದ ತುಳುವರಿಗೆ ಇಂತಹ ಪ್ರಸಂಗಗಳು ಸರಿಯಾಗಿ ಅರ್ಥವಾಗಿ ಅವರಲ್ಲಿ ಪೌರಾಣಿಕ ಜ್ಞಾನವೂ ಹೆಚ್ಚುತ್ತದೆ. ಎಂದರು.
ಈ ಸಂದರ್ಭ ಪ್ರಸಂಗ ಕರ್ತ ದೇವದಾಸ್ ಈಶ್ವರಮಂಗಲ ಅವರನ್ನು ಲಕ್ಷೀನಾರಾಯಣ ಆಸ್ರಣ್ಣರು ಸನ್ಮಾನಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಕ್ಯ ಪ್ರಾಣ ಕಿನ್ನಿಗೋಳಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ವಿಶ್ವ ತುಳುವೆರೆ ಆಯನೋ-2016 ಸಮಿತಿ ಸಂಚಾಲಕ ತಿಮ್ಮಪ್ಪ ರೈ, ಅಖಿಲ ಭಾರತ ತುಳು ಒಕ್ಕೂಟದ ಶಶಿಧರ ಶೆಟ್ಟಿ, ಟೈಮ್ಸ್ ಆಫ್ ಕುಡ್ಲಾದ ಎಸ್. ಆರ್. ಬಂಡಿಮಾರ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-0712201602

Comments

comments

Comments are closed.

Read previous post:
Kinnigoli-0712201601
ತೋಕೂರು ಸ್ಪೋಟ್ಸ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ (ರಿ) ನ ವಾರ್ಷಿಕೋತ್ಸವ ಮಂಗಳವಾರ ನಡೆಯಿತು. ಈ ಸಂದರ್ಭ ನವನೀತ್ ಅವರ ವಿದ್ಯಾಭ್ಯಾಸಕ್ಕಾಗಿ ಧನಸಹಾಯ, ಸಾಕ್ಷಿ ಮೂಲ್ಯ ಹಾಗೂ...

Close