ಸಿ.ಎಸ್.ಐ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ

ಮೂಲ್ಕಿ: ಯುವ ವಿದ್ಯಾರ್ಥಿಗಳು ಸಾಧಕರಾಗಲು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಲಭ್ಯ ಅವಕಾಶಗಳನ್ನು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಬೇಕು ಎಂದು ಸಿ.ಎಸ್.ಐ ಕರ್ನಾಟಕ ಸದರ್ನ್ ಡಯಾಸೀಸ್‌ನ ಬಿಷಪ್ ರೈಟ್ ರೆ. ಮೋಹನ್ ಮನೋರಾಜ್ ಹೇಳಿದರು.
ಮೂಲ್ಕಿ ಕಾರ್ನಾಡು ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗನ್ನು ಅಭಿನಂದಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಅಭಿವೃದ್ಧಿ ನಾಯಕತ್ವದ ಗುಣಗಳನ್ನು ನೀಡಲು ಶಾಲೆಯ ಶಿಕ್ಷಕರು ಶ್ರಮವಹಿತ್ತಾರೆ ಶಿಕ್ಷಕರ ಶ್ರಮದೊಂದಿಗೆ ವಿದ್ಯಾರ್ಥಿಗಳು ಉತ್ತಮ ಆಸಕ್ತಿ ವಹಿಸಿದರೆ ಮಾತ್ರ ಪ್ರತಿಭಾನ್ವಿತರಾಗಿ ಹೊರಹೊಮ್ಮಲು ಸಾಧ್ಯವಿದ್ದು ಪೋಷಕರು ಮಕ್ಕಳ ಶೈಕ್ಷಣಿಕ ಸಾಧನೆಗೆ ಸಹಕಾರಿಯಾಗಿ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕು ಎಂದರು.
ಮೂಲ್ಕಿ ನಗರ ಪಂಚಾಯಿತಿಯ ಅಧ್ಯಕ್ಷ ಸುನಿಲ್ ಆಳ್ವಾ ಮಾತನಾಡಿ, ವಿದ್ಯಾರ್ಥಿಗಳು ಸಂಘಟಿತರಾಗಿ ಸರ್ವಾಂಗೀಣ ಅಭಿವೃದ್ಧಿಯತ್ತ ತಮ್ಮ ಗುರಿಯನ್ನು ಕೇಂದ್ರೀಕರಿಸಿಕೊಂಡು ಸಾಧನೆ ನಡೆಸಬೇಕು ಪರಸ್ಪರ ಸಹಕಾರಿ ಮನೋಭಾವನೆ ಯಿಂದ ಉತ್ತಮ ನಾಗರೀಕರಾಗುವ ಗುಣ ನಿಮ್ಮದಾಗಬೇಕು ಎಂದರು.
ಈ ಸಂದರ್ಭ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು,ಸಾಧಕ ಶಿಕ್ಷಕರು ಹಾಗೂ ಪೋಷಕರನ್ನು ಗೌರವಿಸಲಾಯಿತು.
ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಬಾವ,ನಿವೃತ್ತ ಮುಖ್ಯೋಪಾದ್ಯಾಯ ರವಿರಾಜ ಶೆಟ್ಟಿ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರೆ.ಎಡ್ವರ್ಡ್ ಕರ್ಕಡ,ಸದಸ್ಯ ರಂಜನ್ ಜತ್ತನ್ನಾ, ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್,ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿಎಂ,ಯುಬಿಎಂಸಿ ಮುಖ್ಯೋಪಾದ್ಯಾಯಿನಿ ಗ್ಲಾಡಿಸ್ ಸುಕುಮಾರಿ, ಸಿಎಸ್.ಐ ಮುಖ್ಯೋಪಾದ್ಯಾಯಿನಿ ಝೀಟಾ ಮೆಂಡೋನ್ಸಾ ಅತಿಥಿಗಳಾಗಿದ್ದರು. ಪ್ರೊ.ಸ್ಯಾಮ್ ಮಾಬೆನ್ ಸ್ವಾಗತಿಸಿದರು. ಶಿಕ್ಷಕರಾದ ಎಲಿಜಬೆತ್ ಪುಷ್ಪಲತಾ ಮತ್ತು ಐರಿನ್ ಕ್ರಿಸ್ತಬೆಲ್ ನಿರೂಪಿಸಿದರು.

Mulkii-0912201602

Comments

comments

Comments are closed.

Read previous post:
Mulkii-0612201601
ಮುಲ್ಕಿ: ಯಂಗ್ ಸ್ಟಾರ್ ಟ್ರೋಫಿ

ಮೂಲ್ಕಿ: ಕಾರ್ನಾಡ್ ಯಂಗ್ ಸ್ಟಾರ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಸಿಂಡಿಕೇಟ್ ಬ್ಯಾಂಕ್ ಮುಂಡ್ಕೂರು ಶಾಖೆಯ ಪ್ರಬಂಧಕ ಅಶೋಕ್ ಶೆಟ್ಟಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ...

Close