ಮೂಲ್ಕಿ: ಪಥ ಸಂಚಲನ

ಮೂಲ್ಕಿ: ಕ್ರೀಡಾ ಸಾಧನೆಯು ವಿದ್ಯಾರ್ಥಿಗಳಿಗೆ ಉತ್ತಮ ಏಕಾಗ್ರತೆ ಮತ್ತು ಆರೋಗ್ಯ ನೀಡುತ್ತದೆ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವಾ ಹೇಳಿದರು
ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೇಯ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳ ಪಥ ಸಂಚಲನದ ಗೌರವರಕ್ಷೆ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಉನ್ನತಿಗೆ ಸರ್ವತೋಮುಖ ಜ್ಞಾನಾಭಿವೃದ್ಧಿ ಅಗತ್ಯವಾಗಿದ್ದು ಕ್ರೀಡೆ ಮತ್ತು ಶಿಕ್ಷಣವನ್ನು ಸಮಾನವಾಗಿ ಬೆಳೆಸಿಕೊಂಡು ಪ್ರಾಪಂಚಿಕ ಜ್ಞಾನವನ್ನು ಉನ್ನತೀಕರಣಗೊಳಿಸಿದಲ್ಲಿ ಉತ್ತಮ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವ್ಯಾಸಮಹರ್ಷಿ ವಿದ್ಯಾ ಪೀಠದ ಅಧ್ಯಕ್ಷ ಕೆ.ಎನ್.ಶೆಣೈ ವಹಿಸಿದ್ದರು. ಮಂಗಳೂರು ಪೋಲೀಸ್ ಬೆರಳಚ್ಚು ವಿಭಾಗದ ನಿವ್ರತ್ತ ಡಿವೈಎಸ್ಪಿ ಹರಿಶ್ಚಂದ್ರ ಹೆಜ್ಮಾಡಿ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ವಿದ್ಯಾ ಪೀಠದ ಉಪಾಧ್ಯಕ್ಷ ಪ್ರೊ.ಯು ನಾಗೇಶ್ ಶೆಣೈ ದ್ವಜಾರೋಹಣ ಗೈದರು. ಕಾರ್ಯದರ್ಶಿ ಕುಲ್ಯಾಡಿ ನರಸಿಂಹ ಪೈ ಕ್ರೀಡಾ ಜ್ಯೋತಿ ಬೆಳಗಿಸಿದರು. ಶಾಲೆಯ ಸಂಚಾಲಕ ಜಿ.ಜಿ.ಕಾಮತ್ ಕ್ರೀಡಾ ಪ್ರತಿಜ್ಞೆ ಭೋದಿಸಿದರು. ಶಾಲಾ ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಉಪಸ್ಥಿತರಿದ್ದರು.
ಚಂದ್ರಿಕಾ ಭಂಡಾರಿ ಸ್ವಾಗತಿಸಿದರು. ನಿಶಾ ಎಚ್.ಕಾಮತ್ ಮತ್ತು ಶರಣ್ ನಿರೂಪಿಸಿದರು. ಜಯಲಕ್ಷ್ಮಿ ವಂದಿಸಿದರು.

Mulkii-0912201603

Comments

comments

Comments are closed.

Read previous post:
Mulkii-0912201602
ಸಿ.ಎಸ್.ಐ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ

ಮೂಲ್ಕಿ: ಯುವ ವಿದ್ಯಾರ್ಥಿಗಳು ಸಾಧಕರಾಗಲು ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಲಭ್ಯ ಅವಕಾಶಗಳನ್ನು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಬೇಕು ಎಂದು ಸಿ.ಎಸ್.ಐ ಕರ್ನಾಟಕ ಸದರ್ನ್ ಡಯಾಸೀಸ್‌ನ ಬಿಷಪ್ ರೈಟ್...

Close