ಪೊಂಪೈ ಕಾಲೇಜು : ವಿಚಾರಸಂಕಿರಣ

ಕಿನ್ನಿಗೋಳಿ: ನಗು ಮೊಗ ಹಾಗೂ ಧನಾತ್ಮಕ ಚಿಂತನೆಯೊಂದಿಗೆ ಮನಸ್ಸನ್ನು ಸ್ಥಿತ ಪ್ರಜ್ಞೆಯಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡಿದಾಗ ಯೋಜನೆ ಯೋಚನೆಗಳು ಸುಲಲಿತವಾಗಿ ಕಾರ್ಯಗತವಾಗುತ್ತದೆ ಎಂದು ಉಡುಪಿ ಡಯೋಸಿಯಸ್ ಚಾನ್ಸಿಲರ್ ಫಾ. ವಲೇರಿಯನ್ ಮೆಂಡೋನ್ಸ ಹೇಳಿದರು.
ಯುಜಿಸಿ ಪ್ರಾಯೋಜಕತ್ವದಲ್ಲಿ ಐಕಳ ಪೊಂಪೈ ಕಾಲೇಜು ಸಭಾಂಗಣದಲ್ಲಿ ಕಾಲೇಜು ಆಡಳಿತ ಶಿಕ್ಷಕೇತರ ಸಿಬ್ಬಂದಿಗಳಿಗೆ ಶುಕ್ರವಾರ ನಡೆದ ಕೌಶಲ್ಯ ವರ್ಧನೆ ಆಡಳಿತನಾತ್ಮಕ ಕಾರ್ಯ ಸಮರ್ಥತೆ ಬಗ್ಗೆ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ಪೊಂಪೈ ಶಿಕ್ಷಣ ಸಮೂಹ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸೋಜ, ಎ.ಜೆ. ಆಸ್ಪತ್ರೆ ಮಾನಸಿಕ ತಜ್ಞ ಡಾ. ಪಿ.ಕೆ. ಕಿರಣ್ ಕುಮಾರ್, ಬ್ರಿಯನ್ ಪಿಂಟೊ, ಪಿ. ಕನಕರಾಜನ್, ವಿಕ್ಟೋರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಾರ್ಯ ಕ್ಷೇತ್ರದಲ್ಲಿ ಮಾನಸಿಕ ಸಮಸ್ಯೆಗಳು ಬಗ್ಗೆ ಎ.ಜೆ. ಆಸ್ಪತ್ರೆ ಮಾನಸಿಕ ತಜ್ಞ ಡಾ. ಪಿ.ಕೆ. ಕಿರಣ್ ಕುಮಾರ್, ಧನಾತ್ಮಕ ಕೆಲಸ ಕಾರ್ಯಗಳು ಬಗ್ಗೆ ಬ್ರಹ್ಮಾವರ ಕ್ರಾಸ್ ಕ್ಯಾಂಡ್ ಕಾಲೇಜು ಉಪನ್ಯಾಸಕ ಡಾ. ಜಿ. ರಾಬರ್ಟ್ ಕ್ಲೈವ್, ಆಡಳಿತಾತ್ಮಕ ಒತ್ತಡಗಳು ಬಗ್ಗೆ ಉಡುಪಿ ಡಾ. ಪಿ.ವಿ. ಬಾಳಿಕ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಉಪನ್ಯಾಸಗಳನ್ನು ನೀಡಿದರು.
ಪೊಂಪೈ ಕಾಲೇಜು ಶಿಕ್ಷಕೇತರ ಸಿಬ್ಬಂದಿ ವರ್ಗದ ಕಾರ್ಯದರ್ಶಿ ರೋಕಿ ಜೆ. ಲೋಬೊ ಸ್ವಾಗತಿಸಿದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಪ್ರಸ್ತಾವನೆಗೈದರು. ಶಾಂತಿ ಡಿಸೋಜ ವಂದಿಸಿದರು. ಉಪನ್ಯಾಸಕ ಯೋಗೇಂದ್ರ ಬಿ. ಕಾರ್ಯಕ್ರಮ ನಿರೂಪಿಸಿದರು.

Mulkii-0912201607

Comments

comments

Comments are closed.

Read previous post:
Mulkii-0912201606
ಶ್ರೀ ಗಜಾನನ ಸ್ಪೋಟ್ಸ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಇತ್ತೀಚೆಗೆ ನಡೆದ ತೋಕೂರು ಶ್ರೀ ಗಜಾನನ ಸ್ಪೋಟ್ಸ್ ಕ್ಲಬ್‌ನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ದಂಪತಿಯರನ್ನು ಸಹಿತ ಸಮ್ಮಾನಿಸಲಾಯಿತು. ತೋಕೂರು...

Close