ಶ್ರೀ ಗಜಾನನ ಸ್ಪೋಟ್ಸ್ ಕ್ಲಬ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಇತ್ತೀಚೆಗೆ ನಡೆದ ತೋಕೂರು ಶ್ರೀ ಗಜಾನನ ಸ್ಪೋಟ್ಸ್ ಕ್ಲಬ್‌ನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ದಂಪತಿಯರನ್ನು ಸಹಿತ ಸಮ್ಮಾನಿಸಲಾಯಿತು. ತೋಕೂರು ಹಿಂದೂಸ್ಥಾನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಹಾನ್ ಕೆರೆಕಾಡು ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭ ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಮಾಜಿ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ತೋಕೂರು ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೊದ್ಧಾರ ಸಮಿತಿಯ ಎಲ್.ಕೆ.ಸಾಲ್ಯಾನ್, ತೋಕೂರು ರೋಟರಿ ಗ್ರಾಮೀಣ ದಳದ ಅಧ್ಯಕ್ಷ ದಾಮೋದರ ಶೆಟ್ಟಿ, ಶ್ರೀ ಗಜಾನನ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಗೋವರ್ಧನ ಆಚಾರ್ಯ ಕೆರೆಕಾಡು, ಉಪಾಧ್ಯಕ್ಷ ಪ್ರೀತಮ್ ಸುವರ್ಣ, ಸಂಪತ್‌ಕುಮಾರ್ ಸುರೇಶ್ ಕುಳಾಯಿ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

Mulkii-0912201606

Comments

comments

Comments are closed.

Read previous post:
Mulkii-0912201605
ತೋಕೂರು ಮಾರ್ಗಸೂಚಿ ಅನಾವರಣ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತು ಸುಬ್ರಹ್ಮಣ್ಯ ನಗರದ ಸಂಪರ್ಕ ರಸ್ತೆಯಲ್ಲಿ ತೋಕೂರು ಯುವಕ ಸಂಘ ಹಾಗೂ ರೋಟರಿ ಸಮುದಾಯ ದಳ ಜಂಟಿಯಾಗಿ ನಿರ್ಮಿಸಿದ ಮಾರ್ಗಸೂಚಿಯನ್ನು...

Close