ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ

Logo

ಕಿನ್ನಿಗೋಳಿ: ಎತ್ತಿನಹೂಳೆ ಯೋಜನೆಯ ವಿರುದ್ಧ ತೀರ್ಥ ಕ್ಷೇತ್ರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಾರುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿಸೆಂಬರ್ 12 ಸೋಮವಾರ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಪಾವಂಜೆ ಮೂಲಕ ಮುಲ್ಕಿ ಬಪ್ಪನಾಡು ದೇವಳ ಸನ್ನಿಧಿಗೆ ಆಗಮಿಸಿ ಸಂಜೆ ೩.೩೦ರ ಹೊತ್ತಿಗೆ ಕಿನ್ನಿಗೋಳಿ ಹಾಗೂ 4.00 ಗಂಟೆಗೆ ಕಟೀಲು ಪ್ರಥಮ ದರ್ಜೆ ಕಾಲೇಜಿಗೆ ತಲುಪಲಿದೆ ಎಂದು ಸಮಿತಿಯ ಈಶ್ವರ್ ಕಟೀಲು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲ್ನಾಡುವಿನಿಂದ ಬಪ್ಪನಾಡು ದೇವಳವಾಗಿ ಕಟೀಲುವರೆಗೆ ಸುಮಾರು 500 ಮಂದಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಟೀಲು ಕಾಲೇಜಿನಿಂದ ಕಾಲ್ನಡಿಗೆಯ ಮೂಲಕ ವಿವಿಧ ಕಲಾ ತಂಡಗಳು, ನಾಗಸ್ವರ ವಾದನ, ಚೆಂಡೆಯೊಂದಿಗೆ ವೈಭವದ ವಿಜೃಂಭಣೆಯ ಮೆರವಣಿಗೆ ನಡೆಯಲಿದ್ದು ಸುಮಾರು 5,000 ಸಾರ್ವಜನಿಕರು ಭಾಗವಹಿಸಲಿದ್ದಾರೆ.
ರಥಯಾತ್ರೆಯು ಕಟೀಲು ನಂದಿನಿ ನದಿ ತಟದಲ್ಲಿ ಸಂಪನ್ನಗೊಂಡು ಸಂಜೆ 5.00 ಗಂಟೆಗೆ ರಥಬೀದಿಯಲ್ಲಿ ಸಾರ್ವಜನಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂಧರ್ಭ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು, ಹಾಗೂ ನೇತ್ರಾವತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಸಮಿತಿಗಳನ್ನು ರಚಿಸಲಾಗಿದ್ದು ಜವಾಬ್ದಾರಿಯನ್ನು ನೀಡಲಾಗಿದೆ. ಕಟೀಲು ಜೂನಿಯರ್ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆಯ ವ್ಯವಸ್ಥೆ ಹಾಗೂ ಉಪಹಾರದ ವ್ಯವಸ್ಥೆಯನ್ನು ಪ್ರಥಮ ದರ್ಜೆ ಕಾಲೇಜು ವಠಾರದಲ್ಲಿ ಮಾಡಲಾಗಿದೆ. ಸಮಾರೋಪ ಸಮಾರಂಭದ ಸಂದರ್ಭ ಕಟೀಲು ರಥಬೀದಿಯಲ್ಲಿ ವಾಹನಗಳ ಪ್ರವೇಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಸಮಿತಿಯ ಕೆ. ಭುವನಾಭಿರಾಮ ಉಡುಪ, ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಅಭಿಲಾಷ್ ಶೆಟ್ಟಿ, ದೇವಪ್ರಸಾದ್ ಪುನರೂರು, ಗುರುರಾಜ ಮಲ್ಲಿಗೆಯಂಗಡಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Mulkii-0912201607
ಪೊಂಪೈ ಕಾಲೇಜು : ವಿಚಾರಸಂಕಿರಣ

ಕಿನ್ನಿಗೋಳಿ: ನಗು ಮೊಗ ಹಾಗೂ ಧನಾತ್ಮಕ ಚಿಂತನೆಯೊಂದಿಗೆ ಮನಸ್ಸನ್ನು ಸ್ಥಿತ ಪ್ರಜ್ಞೆಯಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡಿದಾಗ ಯೋಜನೆ ಯೋಚನೆಗಳು ಸುಲಲಿತವಾಗಿ ಕಾರ್ಯಗತವಾಗುತ್ತದೆ ಎಂದು ಉಡುಪಿ ಡಯೋಸಿಯಸ್ ಚಾನ್ಸಿಲರ್ ಫಾ....

Close