ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ ಅಮೃತ ಮಹೋತ್ಸವ

ಕಿನ್ನಿಗೋಳಿ : ವಿದ್ಯಾಲಯ ಮಕ್ಕಳ ದೇವಾಲಯ. ಶಾಲಾ ಶೈಕ್ಷಣಿಕ ವಾತಾವರಣ ಉತ್ತಮವಿದ್ದಾಗ ಮಕ್ಕಳು ಜ್ಞಾನ ಮತ್ತು ಸದ್ಗುಣ ಸಂಪನ್ನರಾಗಿ ಬೆಳೆಯುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದ ಕೀರ್ತಿ ಲಿಟ್ಲ್ ಫ್ಲವರ್ ಶಾಲೆಗೆ ಸಲ್ಲುತ್ತದೆ ಎಂದು ಮಂಗಳೂರು ಬೆಥನಿ ಕನ್ಯಾ ಮಠದ ಮಹಾ ಮಾತೆ ಹಾಗೂ ಬೆಥನಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ವಂ. ಭಗಿನಿ ರೋಜ್ ಸೆಲಿನ್ ಬಿ. ಎಸ್ ಹೇಳಿದರು.

ಶನಿವಾರ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಯ ಅಮೃತ ಮಹೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸಂಟ್ ಮೊಂತೇರೂ ಆಶೀರ್ವಚನ ನೀಡಿ ಮಾತನಾಡಿ ಬೆಥನಿ ಸಂಸ್ಥೆಯು 1941 ರಲ್ಲಿ ವಂದನೀಯ ರ‍್ಯೆಮಂಡ್ ಮಸ್ಕರೇನಸ್ ಮುತುರ್ವಜಿಯಿಂದ ಗ್ರಾಮೀಣ ಹೆಣ್ಣುಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟ ಶಾಲೆ ಕನ್ನಡ ಮಾದ್ಯಮದಲ್ಲಿ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಎಂದು ಹೇಳಿದರು.

ಬೆಥನಿ ಮಂಗಳೂರು ಪ್ರಾಂತ್ಯ ಪ್ರಾಂತ್ಯಾಧಿಕಾರಿಣಿ ಭಗಿನಿ ಸಿಸಿಲಿಯಾ ಮೆಂಡೋನ್ಸಾ ಬಿ.ಎಸ್. ಶುಭಹಾರೈಸಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳು ಸಹ ಮೌಲ್ಯಯುತ ಶಿಕ್ಷಣ ಪಡೆದು ಮುಂದೆ ಜವಬ್ದಾರಿಯುತ ನಾಗರೀಕರಾಗಿ ಬೆಳೆದು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪಾತ್ರ ವಹಿಸುತ್ತಾರೆ. ಎಂದರು.

ಈ ಸಂದರ್ಭ ಬಡ ವಿದ್ಯಾರ್ಥಿಗಳ ನಿಧಿಯ ಮಹಪೋಷಕರಾದ ಸೈಂಟ್ ಎಲೋಷಿಯಸ್ ಕಾಲೇಜು ಪಿ.ಜಿ.ಡಿ.ಬಿ.ಎಂ. ಡೀನ್ ಎಂಡ್ಮಂಡ್ ಫ್ರ್ಯಾಂಕ್, ಶಾಲಾ ಶ್ರೇಯಸ್ಸಿಗಾಗಿ ದುಡಿದ ಹಿರಿಯ ಮುಖ್ಯ ಶಿಕ್ಷಕಿ ಹಾಗೂ ಸಂಚಾಲಕರಾದ ಭಗಿನಿ ಕನ್ಸೆಟ್ಟಾ, ಭಗಿನಿ ಇನ್ವಿಯೋಲತಾ, ಭಗಿನಿ ರೋಜ್ಲಿಟಾ, ಭಗಿನಿ ವಿನ್ ಜೋಯ್, ಭಗಿನಿ ಅಕ್ವಿಲ್ಲಾ, ಭಗಿನಿ ರೀನಾ, ಭಗಿನಿ ಕ್ಲೇರಿಟಾ, ಭಗಿನಿ ಪ್ರೇಮಲತಾ, ಭಗಿನಿ ಜಿಲಿಯಾನಾ ಮೋನಿಸ್, ಭಗಿನಿ ಸಿಬಿಲ್ ಹಾಗೂ
ಯುಪಿಎಸ್‌ಸಿ ಪರೀಕ್ಷೇಯಲ್ಲಿ 387 ನೇ ರ‍್ಯಾಂಕ್ ವಿಜೇತೆ ಶಾಲಾ ಹಳೇವಿದ್ಯಾರ್ಥಿನಿ ಮಿಶೆಲ್ ಕ್ವೀನಿ ಡಿಕೋಸ್ಟ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಹಿತೈಷಿಗಳಾದ ರುಡೋಲ್ಪ್ ಫೆರ್ನಾಂಡೀಸ್ ಹಾಗೂ ಬಾಲಕೃಷ್ಣ ಉಡುಪರನ್ನು ಅಭಿನಂದಿಸಲಾಯಿತು. ಶಾಲಾ ದಾನಿಗಳನ್ನು ಗೌರವಿಸಲಾಯಿತು.
ಮೇರಿವೆಲ್ ಕ್ವಾನೆಂಟ್ ಸುಪೀರಿಯರ್ ಭಗಿನಿ ವಿತಾಲಿಸ್ ಲೋಬೊ ಬಿ.ಎಸ್., ದ.ಕ ಜಿಲ್ಲಾ ಶಿಕ್ಷಣ ಇಲಾಖೆ ನಿರ್ದೇಶಕ ವಾಲ್ಟರ್ ಡಿಮೆಲ್ಲೊ,ಮೂಡಬಿದ್ರಿಯ ಉದ್ಯಮಿ ಅಶ್ವಿನ್ ಪಿರೇರಾ, ಶಾಲೆಯ ಹಳೆ ವಿದ್ಯಾರ್ಥಿಗಳಾದ ಮ್ಯೆನಾ ಎಸ್ ಶೆಟ್ಟಿ, ಮೊಹಮ್ಮದ್ ಸನಾವುಲ್ಲಾ ಅಸಾದಿ, ಐರಿನ್ ರೆಬೆಲ್ಲೊ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕಿ ಭಗಿನಿ ಡಿವೀನಾ ಬಿ.ಎಸ್. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ.ಎಸ್, ಅಶೋಕ್, ಅಬ್ದುಲ್ ರೆಹಮಾನ್ ವರದಿ ವಾಚಿಸಿದರು. ಶಾಲಾ ದೈಹಿಕ ಶಿಕ್ಷಕ ಹಿಲರಿ ಮಸ್ಕರೇನ್ಹಸ್ ಹಗೂ ಶೀಲಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಶಾಲೆಯ ಶಿಕ್ಷಕ ಹಿಲರಿ ಮಸ್ಕರೇನ್ಹಸ್ ನಿರ್ದೇಶನದ ಬೆಥನಿ ಶಿಕ್ಷಣ ಸಂಸ್ಥೆಯ ಐದು ಶಾಲೆಗಳ 250 ವಿದ್ಯಾರ್ಥಿಗಳು 3 ವೇದಿಕೆಗಳಲ್ಲಿ ನಟಿಸಿ ನರ್ತಿಸಿದ ಅಮ್ಮ ವಿಶೇಷ ನೃತ್ಯ ನಾಟಕ ಪ್ರದರ್ಶನ ನಡೆಯಿತು.

Kinnigoli-11121601 Kinnigoli-11121602 Kinnigoli-11121603 Kinnigoli-11121604

Comments

comments

Comments are closed.

Read previous post:
Logo
ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ

ಕಿನ್ನಿಗೋಳಿ: ಎತ್ತಿನಹೂಳೆ ಯೋಜನೆಯ ವಿರುದ್ಧ ತೀರ್ಥ ಕ್ಷೇತ್ರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಾರುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿಸೆಂಬರ್ 12 ಸೋಮವಾರ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಪಾವಂಜೆ ಮೂಲಕ...

Close