ಗೀತಾ ಪಠಣ ಯಜ್ಞ ಸಪ್ತಾಹ ಸಮಾರೋಪ

ಕಿನ್ನಿಗೋಳಿ: ಸನಾತನ ಧರ್ಮ, ಸಂಸ್ಕೃತಿ ಹಾಗೂ ಜೀವನ ಸಂದೇಶಗಳು ಭಗವದ್ಗೀತೆಯ ಸಾರದಲ್ಲಿ ಅಡಗಿದೆ. ಹಳ್ಳಿಗಳಲ್ಲಿರುವ ಜನ ಸತ್ಯವಂತರು. ಅವರನ್ನು ಸೇರಿಸಿ ಇಂತಹ ಜ್ಞಾನ ಯಜ್ಞ ನಡೆಸುವ ಕೆಲಸಗಳು ನಡೆದು ಎಲ್ಲರ ಬದುಕಿಗೆ ದಾರಿ ದೀಪವಾಗಲಿ ಎಂದು ಕಿನ್ನಿಗೋಳಿ ಸಮೀಪದ ಎಳತ್ತೂರು ಶಕ್ತಿದರ್ಶನ ಯೋಗಾಶ್ರಮದ ಗುರೂಜೀ ದೇವದಾಸ್ ರಾವ್ ಹೇಳಿದರು.
ಭಗವದ್ಗೀತಾ ಅಭಿಯಾನ ಸಮಿತಿ ದ.ಕ, ಜಿ. ಎಸ್. ಬಿ ಮಾತೃ ಮಂಡಳಿ ಕಿನ್ನಿಗೋಳಿ ಗೀತಾ ಸತ್ಸಂಗ- 25 ವರ್ಷಾಚರಣ ಸಮಿತಿ ಹಾಗೂ ಲೋಕಮುಖೀ ಟ್ರಸ್ಟ್ (ರಿ) ಕಿನ್ನಿಗೋಳಿ-ಮೂಲ್ಕಿ ಆಶ್ರಯದಲ್ಲಿ ಡಾ. ಸೋಂದಾ ಭಾಸ್ಕರ ಭಟ್ ಮಾರ್ಗದರ್ಶನದಲ್ಲಿ ಗೀತಾ ಜಯಂತಿ ಪ್ರಯುಕ್ತ ಕಿನ್ನಿಗೋಳಿ ಶಾರದಾ ಮಂಟಪದ ವೇದಿಕೆಯಲ್ಲಿ ಭಾನುವಾರ ನಡೆದ ಗೀತಾ ಪಠಣ ಯಜ್ಞ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ. ಕ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಎಂ. ಬಿ. ಪುರಾಣಿಕ್ ಮಾತನಾಡಿ ಆಧುನಿಕ ಶಿಕ್ಷಣ ಪದ್ದತಿಯಿಂದ ಭಾರತೀಯ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳ ಮೇಲೆ ಹೊಡತ ಬಿದ್ದಿದೆ. ಮನಶ್ಶಾಂತಿಗೆ ಭಗವದ್ಗೀತಾ ಪಠಣ ಉತ್ತಮ ಔಷಧಿ. ಗೀತೆಯಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಜಿಎಸ್‌ಬಿ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಶಾರದೋತ್ಸವ ಸಮಿತಿಯ ಸುಬ್ರಹ್ಮಣ್ಯ ಶೆಣೈ, , ವಿಶ್ವಬ್ರಾಹ್ಮಣ ಸಮಾಜದ ಮುಖಂಡ ಪೃಥ್ವಿರಾಜ ಆಚಾರ್ಯ, ಕಟೀಲು ಕಾಲೇಜು ಉಪನ್ಯಾಸಕ ಮತ್ತು ಭಗವದ್ಗೀತಾ ತರಗತಿಯ ಪ್ರಮುಖ ಶಿಕ್ಷಕರಾದ ಡಾ. ಸೋಂದಾ ಭಾಸ್ಕರ ಭಟ್, ಕಾಂಚನಾ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಭಗವದ್ಗೀತಾ ಬಗ್ಗೆ ನಡೆದ ಗೀತಾ ಕಂಠಪಾಠ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಾದೀಶ್ ಆಚಾರ್ ರಿಂದ ಹರಿಕಥೆ ನಡೆಯಿತು.
ಜಿ.ಎಸ್.ಬಿ. ಮಾತೃಮಂಡಳಿ ಅಧ್ಯಕ್ಷೆ ಭಾರತೀ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ರಂಜನಿ ರಾವ್ ವರದಿ ವಾಚಿಸಿದರು. ರಾಧಾ ಶೆಣೈ ವಿವಿಧ ಸ್ಪರ್ಧೆಯ ವಿಜೇತರ ವಿವರ ನೀಡಿದರು. ಡಾ. ಸೋಂಧಾ ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವೆ. ಮೂ. ವಾಗೀಶ್ ಆಚಾರ್ಯ ಅವರಿಂದ ಹರಿಕಥೆ ಕಾಲಕ್ಷೇಪ ನಡೆಯಿತು.

Kinnigoli-12121601

Comments

comments

Comments are closed.

Read previous post:
Kinnigoli-11121603
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆ ಅಮೃತ ಮಹೋತ್ಸವ

ಕಿನ್ನಿಗೋಳಿ : ವಿದ್ಯಾಲಯ ಮಕ್ಕಳ ದೇವಾಲಯ. ಶಾಲಾ ಶೈಕ್ಷಣಿಕ ವಾತಾವರಣ ಉತ್ತಮವಿದ್ದಾಗ ಮಕ್ಕಳು ಜ್ಞಾನ ಮತ್ತು ಸದ್ಗುಣ ಸಂಪನ್ನರಾಗಿ ಬೆಳೆಯುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದ...

Close