ಡಿ.13 ಶ್ರೀನಿಧಿ ಶೆಟ್ಟಿ ಹುಟ್ಟೂರ ಸನ್ಮಾನ

ಕಿನ್ನಿಗೋಳಿ: ಪೋಲೆಂಡ್ ದೇಶದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ 89 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ವಿಶ್ವದ ಪ್ರತಿಷ್ಟಿತ ಮಿಸ್ ಸುಪ್ರ ನ್ಯಾಶನಲ್-2016 ಪ್ರಶಸ್ತಿ ವಿಜೇತೆ ಕಿನ್ನಿಗೋಳಿಯ ತಾಳಿಪಾಡಿ ಗುತ್ತು ಶ್ರೀನಿಧಿ ಶೆಟ್ಟಿ ಅವರು ಡಿಸೆಂಬರ್ 13 ಮಂಗಳವಾರ ಹುಟ್ಟೂರಿಗೆ ಆಗಮಿಸಲಿದ್ದು, ಸಂಜೆ ಕಿನ್ನಿಗೋಳಿಯ ರಾಜಾಂಗಣದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದು 12 ಗಂಟೆಗೆ ಕಟೀಲು ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ಬಳಿಕ ಶ್ರೀ ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರೀ ದೇವಳಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ತನ್ನ ತವರು ಮನೆ ತಾಳಿಪಾಡಿಗುತ್ತುವಿನ ತಮ್ಮ ಕುಟುಂಬದ ದೈವ ದೇವರುಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 4.30 ಕ್ಕೆ ಕಿನ್ನಿಗೋಳಿ ಚರ್ಚ್ ಸಭಾಂಗಣದಿಂದ ರಾಜಾಂಗಣದವರೆಗೆ ಮೆರವಣಿಗೆಯಲ್ಲಿ ಬಂದು ರಾಜಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ 5.30 ಕ್ಕೆ ಸಾರ್ವಜನಿಕರಿಂದ ಹುಟ್ಟೂರ ಸನ್ಮಾನ ಸ್ವೀಕರಿಸಲಿದ್ದಾರೆ. ತಾಳಿಪಾಡಿಗುತ್ತಿನ ಪ್ರಮುಖರು, ವಿವಿಧ ಧರ್ಮ ಗುರುಗಳು ಸಮಾಜದ ಮುಂಖಡರು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಭಿನಂಧನಾ ಸಮಿತಿಯ ಪ್ರಕಟನೆ ತಿಳಿಸಿದೆ.

3kinni1 srinidhi shetty (1)

Comments

comments

Comments are closed.

Read previous post:
Kinnigoli-12121603
ತಾಳಿಪಾಡಿ ಮಸೀದಿಯಲ್ಲಿ ಈದ್ ಮಿಲಾದ್

ಕಿನ್ನಿಗೋಳಿ:  ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಇದರ ಆಶ್ರಯದಲ್ಲಿ ಈದ್ ಮಿಲಾದ್ ಮೆರವಣಿಗೆ ಗುತ್ತಕಾಡಿನಲ್ಲಿ ಸೋಮವಾರ ನಡೆಯಿತು.

Close