ಕಟೀಲಿಗೆ ಶ್ರೀನಿಧಿ ಶೆಟ್ಟಿ ಭೇಟಿ

ಕಿನ್ನಿಗೋಳಿ : ಪೋಲೆಂಡ್ ದೇಶದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಆಯ್ಕೆಯಾದ ಕಿನ್ನಿಗೋಳಿಯ ತಾಳಿಪಾಡಿ ಗುತ್ತು ಶ್ರೀನಿಧಿ ಶೆಟ್ಟಿ ಕುಟುಂಬಿಕರು ಕಟೀಲು ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ನೀಡಿ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜಾ, ತಾಳಿಪಾಡಿಗುತ್ತು ಧನಪಾಲ ಶೆಟ್ಟಿ, ದಿನೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ಸುಕುಮಾರ್ ಶೆಟ್ಟಿ, ಸತ್ಯೇಶ್ ಶೆಟ್ಟಿ, ಗಿರೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಸಾಯಿನಾಥ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ದಿವಾಕರ ಕರ್ಕೇರ, ವಿನೋದ್‌ಕುಮಾರ್ ಬೊಳ್ಳೂರು, ಶಿವಾನಂದ ಶೆಟ್ಟಿ, ಮುರ ಸದಾಶಿವ ಶೆಟ್ಟಿ, ನೀಲಯ್ಯ ಕೋಟ್ಯಾನ್, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-1312201604 Kinnigoli-1312201605

Comments

comments

Comments are closed.

Read previous post:
Kinnigoli-1312201603
ಕಟೀಲು ಪಂಚ ತೀರ್ಥ ರಥ ಯಾತ್ರೆ ಸಮಾರೋಪ

ಕಿನ್ನಿಗೋಳಿ: ಎತ್ತಿನ ಹೊಳೆ ಯೋಜನೆ ಎಂಬ ಆಟ ನಿಜವಾದ ನೀರುಣಿಸುವ ಯೋಜನೆಯಾಗಿಲ್ಲ ಅದು ಹಣ ಲೂಟಿ ಮಾಡುವ ಆಟವಾಗಿದೆ . ನಾವು ಯಾವತ್ತಿನ ವರೆಗೆ ಮೌನವಾಗಿರುತ್ತೇವೆಯೋ ಅಂದಿನವರೆಗೆ ಇಂತಹ...

Close