ಕಟೀಲು ಪಂಚ ತೀರ್ಥ ರಥ ಯಾತ್ರೆ ಸಮಾರೋಪ

ಕಿನ್ನಿಗೋಳಿ: ಎತ್ತಿನ ಹೊಳೆ ಯೋಜನೆ ಎಂಬ ಆಟ ನಿಜವಾದ ನೀರುಣಿಸುವ ಯೋಜನೆಯಾಗಿಲ್ಲ ಅದು ಹಣ ಲೂಟಿ ಮಾಡುವ ಆಟವಾಗಿದೆ . ನಾವು ಯಾವತ್ತಿನ ವರೆಗೆ ಮೌನವಾಗಿರುತ್ತೇವೆಯೋ ಅಂದಿನವರೆಗೆ ಇಂತಹ ಪ್ರಕೃತಿ ವಿರುದ್ದ ಯೋಜನೆಗಳು ನಿರಂತರ ಕಾರ್ಯರೂಪಕ್ಕೆ ಬರುತ್ತಿವೆ ಎಂದು ಗಂಗಾ ಹೋರಾಟ ಸಮಿತಿಯ ಆನಂದ ಸ್ವರೂಪ ಸ್ವಾಮಿಜಿ ಹೇಳಿದರು.
ಸೋಮವಾರ ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಪಂಚತೀರ್ಥ ಸಪ್ತಕ್ಷೇತ್ರಗಳನ್ನು ಸಂಪರ್ಕಿಸಿ ಬಂದ ಮೂರು ದಿನಗಳ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯನ್ನು ಬರಡು ಮಾಡುವ ಎತ್ತಿನ ಹೊಳೆ ಯೋಜನೆ ವಿರೋಧಿಸಿ ಪಕ್ಷ ಬೇಧ ಧರ್ಮ ಮರೆತು ಒಂದಾಗಿ ಹೋರಾಡುವ ರಾಜಕೀಯ ರಹಿತವಾಗಿ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆ ವಿರೋಧಿ ಹೋರಾಟ ಯಶಸ್ಸು ಕಾಣಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಸರಕಾರ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ ಮತ್ತು ಪರಿಸರವಾದಿ ಹೋರಾಟಗಾರರನ್ನು ಕರೆದು ಚರ್ಚಿಸದೆ ಇದ್ದರೆ ಈ ಹೋರಾಟ ಜನವರಿ 26 ರಂದು ಸರ್ಜಿಕಲ್ ಸ್ಟ್ರೈಕ್‌ನ ರೀತಿ ಕ್ರಾಂತಿಕಾರಿ ಹೋರಾಟ ಆಗಲಿದೆ. ಪ್ರಜಾಪ್ರಭುತ್ವ ದಿನದಂದೇ ಜನ ಧ್ವನಿಯ ಕಿಚ್ಚು ಹಚ್ಚೋಣ ಎಂದು ಸರಕಾರಕ್ಕೆ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದರು.
ಜನಾರ್ದನ ಪೂಜಾರಿ, ವಿಜಯಕುಮಾರ್ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಹರಿಕೃಷ್ಣ ಬಂಟ್ವಾಳ್, ಎಂಜಿ.ಹೆಗಡೆ, ದಿನೇಶ ಹೊಳ್ಳ, ಎಸ್. ಜಿ. ಮಯ್ಯ ಅನೇಕ ಮಂದಿ ಎತ್ತಿನ ಹೊಳೆ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಪಕ್ಷಾತೀತ ಹೋರಾಟ ಎಂಬುವುದಕ್ಕೆ ಈ ರಥಯಾತ್ರೆಯಲ್ಲಿ ಚರ್ಚುಗಳು, ಮಸೀದಿಗಳಲ್ಲೂ ಸ್ವಾಗತ ಸಿಕ್ಕಿರುವುದೇ ಸಾಕ್ಷಿ. ನಮ್ಮ ಜೀವ ಜಲವಾದ ನೇತ್ರಾವತಿ ಹಾಗೂ ಎಲ್ಲ ನದಿಗಳ ಪವಿತ್ರತೆಯ ರಕ್ಷಣೆ ನಮ್ಮ ಧರ್ಮ. ಎಂದರು.

ಶ್ರೀ ದಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ, ಕೇಮಾರು ಈಶ ವಿಠಲದಾಸ ಸ್ವಾಮೀಜಿ, ಕಟೀಲು ದೇವಳ ಆಡಳಿತ ಮೊಕ್ತೇಸರರಾದ ವಾಸುದೇವ ಆಸಣ್ಣ, ಡಾ. ರವೀಂದ್ರನಾಥ ಪೂಂಜಾ, ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಕೆ. ಅಮರನಾಥ ಶೆಟ್ಟಿ, ರಥ ಯಾತ್ರೆ ಸಮಿತಿಯ ಎಂ.ಬಿ ಪುರಾಣಿಕ್, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕೆ ಮೋನಪ್ಪ ಭಂಡಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುರುಷೋತ್ತಮ ಚಿತ್ರಪುರ, ಸತ್ಯಜಿತ್ ಸುರತ್ಕಲ್, ದೇವದಾಸ ಶೆಟ್ಟಿ, ಎಂ.ಜಿ. ಹೆಗಡೆ, ಶಶಿರಾಜ್ ಶೆಟ್ಟಿ ಕೊಳಂಬೆ, ಎಂ.ಜಿ. ಹೆಗಡೆ, ಹರಿಕೃಷ್ಣ ಪುನರೂರು, ಎಸ್.ಜಿ. ಮಯ್ಯ, ಎಸ್. ಯೋಗೀಶ್ ಭಟ್, ಪ್ರಭಾಕರ ಬಂಗೇರ, ಪದ್ಮನಾಭ ಕೊಟ್ಟಾರಿ, ರಾಮಚಂದ್ರ ಬೈಕಂಪಾಡಿ ಯೋಗೀಶ್ ಶೆಟ್ಟಿ ಜೆಪ್ಪು, ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ಈಶ್ವರ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
ಸಂಜೀವ ಮಠಂದೂರು ಸ್ವಾಗತಿಸಿದರು. ವಂದಿಸಿದರು. ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಹರಿಕೃಷ್ಣ ಬಂಟ್ವಾಳ
ಈ ಅವೈಜ್ಞಾನಿಕ ಯೋಜನೆ ರಾಜಕಾರಣಿ ಅಧಿಕಾರಿಗಳ ಕೈ ಕಿಸೆ ತುಂಬುವ ಯೋಜನೆಯಾಗದೆ ಜನರ ಕಷ್ಟಗಳನ್ನು ಸ್ಪಂದಿಸುವ ಯೋಜನೆಯಾಗಬೇಕು
ಶ್ರೀ ದಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ,
ನೇತ್ರಾವತಿಯನ್ನು ತಿರುಗಿಸುವ ಮೂಲಕ ಪರಶುರಾಮ ಕ್ಷೇತ್ರವನ್ನು ಹಾಳುಗೆಡಹುವ ಕೆಲಸ ಮಾಡಬಾರದು.

ವಿಜಯಕುಮಾರ ಶೆಟ್ಟಿ
60 ಕೋಟಿಯಿಂದ 600 ಕೋಟಿಗೇರಿದ ಹಾಗೂ 36ವರ್ಷದಿಂದ ಕುಂಟುತ್ತಿರುವ ವಾರಾಹಿ ಯೋಜನೆಯನ್ನು ಮೊದಲು ಸಮರ್ಪಕ ಅನುಷ್ಠಾನಗೊಳ್ಳಲಿ

ಎಂ.ಜಿ. ಹೆಗಡೆ
ಮರಗಳ ಮಾರಣ ಹೋಮದಿಂದ ಮಳೆಗೂ ತತ್ವಾರ ಆಗಲಿದ್ದು ನದಿ ನೀರು ಬತ್ತಿ ಹೋಗಿ ತುಳು ನಾಡಿಗೆ ಅಪಾಯದ ಸಂಭವ. ಪ್ರಕೃತಿಯ ಸಾರವನ್ನು ಅನುಭವಿಸಬೇಕೇ ವಿನಃ ಪ್ರಕೃತಿಯ ಒಡಲನ್ನು ಬಗೆಯುದಲ್ಲ

ಕೇಮಾರು ಈಶ ವಿಠಲದಾಸ ಸ್ವಾಮೀಜಿ
ಯೋಜನೆಯಲ್ಲಿ ಜನರ ಬಲಿದಾನ ವಾಗದೆ ಯೋಜನೆಯ ಬಲಿದಾನವಾಗಲಿ ದ.ಕ. ಜಿಲ್ಲೆಯ ಜನರಿಗೆ ನ್ಯಾಯ ಸಿಗಬೇಕು ಎಂದರು.

Kinnigoli-1312201603

Comments

comments

Comments are closed.

Read previous post:
Mulkii-1112201603
ಮೂಲ್ಕಿ: ಈದ್ ಮಿಲಾದ್

ಮೂಲ್ಕಿ: ಕೋಮು ಸಾಮರಸ್ಯದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದ್ದು ಮುಂದಿನ ಜನಾಂಗದ ಕುಡಿಗಳು ಅರ್ಥೈಸಿಕೊಳ್ಳುವಂತೆ ಸಮಾಜದಲ್ಲಿ ಐಕ್ಯತೆ ಹಾಗೂ ಸಾಮರಸ್ಯದಿಂದ ಸಂಘಟಿತರಾಗಿ ನಾವು ಬದುಕಬೇಕು ಎಂದು...

Close