ಭಗವದ್ಗೀತೆಯನ್ನು ಅಥೈಸಿ

ಮೂಲ್ಕಿ: ಪ್ರಪಂಚದ ಮೊಟ್ಟ ಮೊದಲ ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಗಿದ್ದು ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಎಲ್ಲಾ ವರ್ಗದ ಜನರೂ ಮಾನಸಿಕ ಶಾಂತಿ ಸಮಾಧಾನ ಗಳಿಸಲು ಭಗವದ್ಗೀತೆಯನ್ನು ಅಥೈಸಿ ತನ್ನ ಜೀವನದಲ್ಲಿ ಅಳವಡಿಸುವುದರಿಂದ ಸಾಧ್ಯವಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಸೋಂದಾ ಭಾಸ್ಕರ ಭಟ್ ಹೇಳಿದರು.
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನ್ನಪೂಣೇಶ್ವರೀ ಸಭಾಂಗಣದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಮೂಲ್ಕಿ ಇವರ ಸಂಯೋಜನೆಯಲ್ಲಿ ಗೀತಾ ಜಯಂತಿಯ ಪ್ರಯುಕ್ತ ಸಪ್ತಾಹ ಗೀತಾ ಪಠಣಯಜ್ಞದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮಕ್ಕಳಲ್ಲಿ ಉತ್ತಮ ಚಿಂತನೆ, ಸಮಾಜ ಮುಖಿ ಬದುಕು ರೂಪಿಸಿ ಕೊಳ್ಳಲು, ಸ್ವಸ್ಥ ಸಮಾಜ ನಿರ್ಮಾಣವಾಗಲು ತಾಯಿ, ಅದ್ಯಾಪಕರು, ಹಾಗೂ ಧಾರ್ಮಿಕ ಗುರುಗಳು ಭಗವದ್ಗೀತೆಯ ಸಾರವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿ ಭೋಧಿಸುವಂತಾಗಬೆಕು ಎಂದರು.
ಪಠಣ ಯಜ್ಞದ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಶ ಸಗ್ರಿತ್ತಾಯ ಮಾತನಾಡಿ, ಸಂಘಟಿತ ಪ್ರಯತ್ನಕ್ಕೆ ದೇವರ ಆಶೀರ್ವಾದ ಸದಾ ಲಭ್ಯವಾಗುತ್ತದೆ. ಸ್ವಾರ್ಥ ರಹಿತ ಜಿಂತನೆಗಳು ಉತ್ತಮ ನೆಮ್ಮದಿಯ ಬದುಕನ್ನು ಕಲ್ಪಿಸುತ್ತದೆ. ಜೀವನದಲ್ಲಿ ಬರುವ ಸಂಕಷ್ಟಗಳು ಮಾನಸಿಕ ಗೊಜಲುಗಳನ್ನು ಭಗವದ್ಗೀತೆಯ ಶ್ಲೋಕಾರ್ಥಗಳು ಕ್ಷಣಮಾತ್ರದಲ್ಲಿ ನಿವಾರಿಸಿಕೊಳ್ಳುವ ಪ್ರಭಲ ಶಕ್ತಿಯನ್ನು ಹೊಂದಿದೆ ಎಂದರು. ಈ ಸಂದರ್ಭ ಸಮಿತಿಯ ವತಿಯಿಂದ ಲಕ್ಷ್ಮೀಶ ಸಗ್ರಿತ್ತಾಯ ರವರನ್ನು ಸನ್ಮಾನಿಸಿ ಗುರು ವಂದನೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎನ್.ಪಿ.ಶೆಟ್ಟಿ ವಹಿಸಿದ್ದರು. ಬಪ್ಪನಾಡು ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾದ್ಯಾಯ ಮತ್ತು ನರಸಿಂಹ ಭಟ್ ಉಪಸ್ಥಿತರಿದ್ದು ಶುಭಾರ್ಶಿವಾದ ನೀಡಿದರು.
ಮೂಲ್ಕಿ ವಿಜಯಾ ಕಾಲೇಜು ಸಂಸ್ಕೃತ ವಿಭಾಗ ಮುಖ್ಯಸ್ಥ ಪ್ರೊ. ಜಯರಾಂ ಬಪ್ಪನಾಡು ಸ್ವಾಗತಿಸಿದರು. ಕಲ್ಪನಾ ಭಟ್ ಎಸ್‌ವಿಟಿ ವಂದಿಸಿದರು.

Mulkii-1112201602

Comments

comments

Comments are closed.

Read previous post:
Mulkii-1112201601
ಶಾಂಭವೀ ನದಿಯಲ್ಲಿ ಜಲಕೋತ್ಸವ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಕ್ಕೋಟಿ ದ್ವಾದಶಿಯ ಪ್ರಯುಕ್ತ ಶ್ರೀ ಬಿಂಧು ಮಾದವ ದೇವರಿಗೆ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ್ ಶಿವಾನಂದ...

Close