ಮೂಲ್ಕಿ: ಈದ್ ಮಿಲಾದ್

ಮೂಲ್ಕಿ: ಕೋಮು ಸಾಮರಸ್ಯದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದ್ದು ಮುಂದಿನ ಜನಾಂಗದ ಕುಡಿಗಳು ಅರ್ಥೈಸಿಕೊಳ್ಳುವಂತೆ ಸಮಾಜದಲ್ಲಿ ಐಕ್ಯತೆ ಹಾಗೂ ಸಾಮರಸ್ಯದಿಂದ ಸಂಘಟಿತರಾಗಿ ನಾವು ಬದುಕಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಶಾಫಿ ಜುಮ್ಮಾ ಮಸೀದಿಯಲ್ಲಿ ಮಸೀದಿಯ ಜಮಾಅತ್ ವತಿಯಿಂದ ಭಾನುವಾರ ರಾತ್ರಿ ಈದ್ ಮಿಲಾದ್ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ದೇಶ ಬ್ರಷ್ಟಾಚಾರ ರಹಿತವಾಗಿ ಮುನ್ನಡಿ ಇಡಲು ಯುವ ಸಮಾಜಕ್ಕೆ ಉತ್ತಮ ಪ್ರೇರಣೆ ನೀಡುವ ಕಾರ್ಯಗಳು ನಡೆಯಬೇಕು ಯಾವುದೇ ದುಶ್ಪಪ್ರೇರಣೆಗೆ ಒಳಗಾಗದೆ ಸಮಾಜವನ್ನು ಉನ್ನತಿಗೊಳಿಸುವ ಸದೃಢ ಸಂಕಲ್ಪ ನಿಮ್ಮದಾಗಬೇಕು ಎಂದರು.
ಈದ್ ಮಿಲಾದ್ ಅಂಗವಾಗಿ ಮಸೀದಿ ವತಿಯಿಂದ ಹೊರತರಲಾದ ಗೃಹ ಪತ್ರಿಕೆ ’ಅಲ್ ಅಮೀನ್ ಈದ್ ಮಿಲಾದ್’ನ್ನು ಬಿಡುಗಡೆಗೊಳಿಸಿದ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಮ್.ಎ.ಗಫೂರ್ ಮಾತನಾಡಿ,ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಉತ್ತಮ ಕೊಡುಗೆ ನೀಡಬೇಕು. ಸಮಾಜದಲ್ಲಿ ಒಗ್ಗಟ್ಟಿನ ಅಗತ್ಯವಿದ್ದು, ಜಮಾಅತ್ ಈ ಬಗ್ಗೆ ಪರಿಣಾಮಕಾರೀ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಬಹುಮಾನ ವಿತರಣೆ: ಇದೇ ವೇಳೆ ಜಮಾಅತ್ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಕರ್ನಾಟಕ ದಾರಿಮೀಸ್ ಉಲಮಾ ಅಸೋಸಿಯೇಶನ್ ಅಧ್ಯಕ್ಷ ಎಸ್.ಬಿ. ಮೊಹಮ್ಮದ್ ದಾರಿಮಿ ಮುಖ್ಯ ಪ್ರಭಾಷಣಗೈದರು. ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಲ್‌ಹಾಜ್ ಇಬ್ರಾಹಿಮ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ದುವಾ ಪ್ರಾರ್ಥನೆ ನೆರವೇರಿಸಿದರು.
ಕಾರ್ನಾಡು ಮಸ್ಜಿದುನ್ನೂರು ಜುಮಾ ಮಸೀದಿಯ ಖತೀಬರಾದ ಬದ್ರುದ್ದೀನ್ ದಾರಿಮಿ ಪ್ರಸ್ತಾವಿಕ ಭಾಷಣಗೈದರು.
ಕೇಂದ್ರ ಜುಮಾ ಮಸೀದಿ ಜಮಅತ್ ಅಧ್ಯಕ್ಷ ಇಕ್ಬಾಲ್ ಅಹಮದ್ ಮೂಲ್ಕಿ ಅಧ್ಯಕ್ಷತೆ ವಹಿಸಿ, ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಮ್. ಲಿಯಾಕತ್ ಆಲಿ ಸ್ವಾಗತಿಸಿದರು.
ಉದ್ಯಮಿ ಇನಾಯತ್ ಆಲಿ ಮೂಲ್ಕಿ, ಉದ್ಯಮಿ ಕೆ.ಎಸ್. ಅಶ್ರಫ್ ಕರ್ನಿರೆ,ಉದ್ಯಮಿ ಕೆ. ಮೊಹಮ್ಮದ್ ಹಾರೀಸ್,ಉದ್ಯಮಿ ಎಮ್.ಕೆ. ಅಬ್ದುಲ್ ಖಾದರ್ ಬಾವಾ,ಮಂಗಳೂರು ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ,ಮೂಲ್ಕಿ ನಪಂ ಸದಸ್ಯ ಪುತ್ತುಬಾವಾ ,ಕಾರ್ನಾಡು ಹಿಮಾಯತ್ ಇಸ್ಲಾಮ್ ಸಮಿತಿ ಅಧ್ಯಕ್ಷ ಮುನೀರ್ ಕಾರ್ನಾಡು,ಮೂಲ್ಕಿ ನುಸ್ರತುಲ್ ಮಸಾಕೀನ್ ಅಧ್ಯಕ್ಷ ಎಮ್.ಎ.ಅಮಾನುಲ್ಲಾ, ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲಾ ದಾರಿಮಿ ಬೈತಡ್ಕ,ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್,ಕಾರ್ನಾಡು ಮಸ್ಜಿದುನ್ನೂರು ಜುಮಾ ಮಸೀದಿ ಸದರ್ ಉಸ್ತಾದ್ ಶೆರೀಫ್ ಬಾಖವಿ,ಕಾರ್ನಾಡು ಮುಸ್ಲಿಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಹುಸೈನ್ ಕಾರ್ನಾಡು, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.
ಕಾರ್ನಾಡು ಮಸ್ಜಿದೇ ನೂರ್ ಅದ್ಯಾಪಕ ಮೌಲಾನಾ ಎಮ್.ಎಸ್.ಹೈದರಾಲಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Mulkii-1112201603

Comments

comments

Comments are closed.

Read previous post:
Mulkii-1112201602
ಭಗವದ್ಗೀತೆಯನ್ನು ಅಥೈಸಿ

ಮೂಲ್ಕಿ: ಪ್ರಪಂಚದ ಮೊಟ್ಟ ಮೊದಲ ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಗಿದ್ದು ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಎಲ್ಲಾ ವರ್ಗದ ಜನರೂ ಮಾನಸಿಕ ಶಾಂತಿ ಸಮಾಧಾನ ಗಳಿಸಲು ಭಗವದ್ಗೀತೆಯನ್ನು ಅಥೈಸಿ...

Close