ಮಿಸ್ ಸುಪ್ರ – ಕಲಿತ ಶಾಲೆಯಲ್ಲಿ ಸನ್ಮಾನ

ಮೂಲ್ಕಿ: ಜೀವನದಲ್ಲಿ ಶಾಲಾ ಶಿಕ್ಷಣದ ಅವಧಿಯು ಅತ್ಯಂತ ಮಹತ್ವಪೂರ್ಣದಾಗಿದ್ದು ಶಾಲಾ ಅವಧಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವೆಂದು ಮಿಸ್ ಸುಪ್ರ ನ್ಯಾಶನಲ್-2016 ಪುರಸ್ಕ್ರತೆ ಶ್ರೀನಿಧಿ ರಮೇಶ್ ಶೆಟ್ಟಿ ಹೇಳಿದರು.
ಪೋಲೆಂಡ್ ನಲ್ಲಿ ಜರಗಿದ ಜಾಗತಿಕ ಮಟ್ಟದ ಮಿಸ್ ಸುಪ್ರ ನ್ಯಾಷಿನಲ್-2016 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿಯನ್ನು ಪಡೆದಿರುವ ಅವರು ತಾನು ಕಲಿತ ಮೂಲ್ಕಿಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಮೂಲ್ಕಿ ಬಿಲ್ಲವ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿ ಜರಗಿದ ಅಭಿನಂದನಾ ಸಮಾರಂಭದಲ್ಲಿ ಶಾಲೆಯ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ತಾನು 1ನೇ ತರಗತಿಯಲ್ಲಿದ್ದಾಗ ಛದ್ಮ ವೇಷ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಪಾತ್ರ ಮಾಡಿದ್ದಾಗ ತನಗೆ ವೇದಿಕೆಯಲ್ಲಿ ಸರಿಯಾಗಿ ಕೈ ಎತ್ತಲು ಸಾಧ್ಯವಾಗಲಿಲ್ಲ ಆದರೆ ಕಠಿಣ ಪರಿಶ್ರಮ ಮತ್ತು ಶಾಲಾ ಶಿಕ್ಷಕರ ಹಾಗೂ ಹೆತ್ತವರ ಪ್ರೋತ್ಸಾಹ ತಾನು ಈ ಮಟ್ಡಕ್ಕೆ ಬೆಳೆದಿದ್ದೇನೆ ಪ್ರತಿಯೋರ್ವ ವಿದ್ಯಾರ್ಥಿಯು ತಮ್ಮ ಶಾಲಾ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮಸ್ಯೆಗಳಿದ್ದರೂ ನಿರಂತರ ನಗುಮೊಗದಿಂದ ಇರಬೇಕು. ಇದು ಜೀವನದ ಯಶಸ್ವಿನ ಗುಟ್ಟು ಎಂದು ಹೇಳಿದರು. ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ ಅವರು ತಾನು ಸಾಧಿಸಬೇಕಾದ ಕಾರ್ಯ ಬಹಳವಿದ್ದು ಆದಕ್ಕೆ ಪ್ರಯತ್ನಸುತ್ತೇನೆಂದು ಹೇಳಿದರು.
ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ವಹಿಸಿದ್ದು ಶಾಲಾ ವತಿಯಿಂದ ಶ್ರೀನಿಧಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ಎಚ್ ವಿ ಕೋಟ್ಯಾನ್, ಆಡಳಿತ ಮಂಡಳಿ ಸದಸ್ಯರಾದ ರತ್ನಾಕರ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವದಾಸ್ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಮಿಥುನ್ ಹೆಗ್ಡೆ ಮತ್ತಿತರಿದ್ದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಸ್ವಾಗತಿಸಿದರು, ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ನಿರೂಪಿಸಿರು.

Mulki-1912201602

Comments

comments

Comments are closed.

Read previous post:
Kinnigoli-1412201604
ಶ್ರೀನಿಧಿ ಶೆಟ್ಟಿ ಹುಟ್ಟೂರ ಅಭಿನಂದನಾ ಸಮಾರಂಭ

ಕಿನ್ನಿಗೋಳಿ: ಕುಂಟುಂಬ ಗುರು ಹಿರಿಯರ ಆಶೀರ್ವಾದ, ಪ್ರೀತಿ ಪ್ರೋತ್ಸಾಹ ಸಹಕಾರ , ದೈವ ದೇವರುಗಳ ಕೃಪಾ ಕಟಾಕ್ಷ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ತುಳು ನಾಡಿನ ಮಣ್ಣಿನ ಮಗಳು ಎಂದು...

Close