ಶ್ರೀನಿಧಿ ಶೆಟ್ಟಿ ಹುಟ್ಟೂರ ಅಭಿನಂದನಾ ಸಮಾರಂಭ

ಕಿನ್ನಿಗೋಳಿ: ಕುಂಟುಂಬ ಗುರು ಹಿರಿಯರ ಆಶೀರ್ವಾದ, ಪ್ರೀತಿ ಪ್ರೋತ್ಸಾಹ ಸಹಕಾರ , ದೈವ ದೇವರುಗಳ ಕೃಪಾ ಕಟಾಕ್ಷ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ತುಳು ನಾಡಿನ ಮಣ್ಣಿನ ಮಗಳು ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಎಂದು ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿ ವಿಜೇತೆ ತಾಳಿಪಾಡಿಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಹೇಳಿದರು
ಮಿಸ್ ಸುಪ್ರ ನ್ಯಾಶನಲ್ 2016 ವಿಜೇತರಾದ ಶ್ರೀನಿಧಿ ರಮೇಶ್ ಶೆಟ್ಟಿ ಮಂಗಳವಾರ ಕಿನ್ನಿಗೋಳಿ ರಾಜಾಂಗಣದಲ್ಲಿ ಕಿನ್ನಿಗೋಳಿಯ ನಾಗರಿಕರು ಹಾಗೂ ತಾಳಿಪಾಡಿಗುತ್ತು ಕಟುಂಬಿಕರ ಆಶ್ರಯದಲ್ಲಿ ನಡೆದ ಹುಟ್ಟೂರ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದರು.
ನನಗೆ ತುಳುನಾಡಿನ ಸಂಸ್ಕೃತಿ ಆಚಾರ, ವಿಚಾರ ತುಂಬಾ ಇಷ್ಟ ಆದನ್ನು ನಾನು ಎಂದಿಗೂ ಮರೆಯುದಿಲ್ಲ ಎಂದು ಭಾವುಕರಾಗಿ ನುಡಿದರು.
ದ.ಕ. ಲೋಕಸಭಾಸದಸ್ಯ ಸಂಸದ ನಳಿನ್ ಕುಮಾರ್ ಮಾತನಾಡಿ ತುಳುನಾಡಿನ ಮಣ್ಣಿನ ಮಗಳು ದೇಶಕ್ಕೆ ಕೀರ್ತಿ ತಂದಿದ್ದು ತುಳುನಾಡಿಗೆ ಹೆಮ್ಮೆ ಎಂದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇವಳ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಶುಭ ಹಾರೈಸಿದರು.
ಈ ಸಂದರ್ಭ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದಲೂ ಶ್ರೀನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ, ಮೂಡಬಿದಿರೆ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ, ಮುಂಬಯಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ಮುಂಬಯಿ ಪೋಲಿಸ್ ಅಕಾರಿ ಪ್ರಕಾಶ್ ಭಂಡಾರಿ, ದೋಹ ಕತಾರ್ ಬಂಟ್ ಸಂಘದ ಅಧ್ಯಕ್ಷ ರವಿ ಶೆಟ್ಟಿ, ರಮೇಶ್ ಶೆಟ್ಟಿ , ತಾಳಿಪಾಡಿಗುತ್ತು ಧನಪಾಲ್ ಶೆಟ್ಟಿ , ತಾಳಿಪಾಡಿ ಗುತ್ತು ಭಾಸ್ಕರ ಶೆಟ್ಟಿ , ತಾಳಿಪಾಡಿ ಗುತ್ತು ಸುಕುಮಾರ್ ಶೆಟ್ಟಿ , ಸುರೇಶ್ ಶೆಟ್ಟಿ ಪುಚ್ಚಾಡಿ, ಕೆ ಸೀತಾರಾಮ ಶೆಟ್ಟಿ ಕಿನ್ನಿಗೋಳಿ, ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ತಾಳಿಪಾಡಿಗುತ್ತು ಶೋಭಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು. ಸಾಯಿನಾಥ್ ಶೆಟ್ಟಿ ಅಭಿನಂಧನಾ ಭಾಷಣಗೈದರು. ಶಾಲಾ ಸಹಪಾಠಿ ಶಾಲಾ ದಿನಗಳ ಬಗ್ಗೆ ಮಾತಾನಾಡಿದರು. ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ದಿವಾಕರ ಕರ್ಕೇರಾ ವಂದಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1412201601 Kinnigoli-1412201602 Kinnigoli-1412201603 Kinnigoli-1412201604 Kinnigoli-1412201605

Comments

comments

Comments are closed.

Read previous post:
Kinnigoli-1312201604
ಕಟೀಲಿಗೆ ಶ್ರೀನಿಧಿ ಶೆಟ್ಟಿ ಭೇಟಿ

ಕಿನ್ನಿಗೋಳಿ : ಪೋಲೆಂಡ್ ದೇಶದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಸುಪ್ರ ನ್ಯಾಶನಲ್-2016 ಆಯ್ಕೆಯಾದ ಕಿನ್ನಿಗೋಳಿಯ ತಾಳಿಪಾಡಿ ಗುತ್ತು ಶ್ರೀನಿಧಿ ಶೆಟ್ಟಿ ಕುಟುಂಬಿಕರು ಕಟೀಲು ದುರ್ಗಾಪರಮೇಶ್ವರೀ...

Close