ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ

ಕಿನ್ನಿಗೋಳಿ: ಸಿಸಿ ಟಿವಿ, ಸೈರನ್‌ಗಳನ್ನು ದೇವಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕು. ದೇವಳಗಳಲ್ಲಿ ಊರಿನವರು ರಾತ್ರಿ ಮಲಗುವ ವ್ಯವಸ್ಥೆ ಮಾಡಿದರೆ ಕಾವಲು ಕಾದರೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದೆ. ನಮ್ಮ ಮನೆ, ಸೊತ್ತುಗಳ ಸುರಕ್ಷತೆಯ ಬಗ್ಗೆ ನಾವೇ ಜಾಗರೂಕರಾದರೆ ಉತ್ತಮ ಎಂದು ಮೂಲ್ಕಿ ಠಾಣಾಕಾರಿ ಅನಂತ ಪದ್ಮನಾಭ ಹೇಳಿದರು.
ಕಿನ್ನಿಗೋಳಿ ಲಯನ್ಸ್ ಮತ್ತು ಲಯೆನೆಸ್ ಕ್ಲಬ್ ಆಶ್ರಯದಲ್ಲಿ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ಗುರುವಾರ ನಡೆದ ಅಪರಾಧ ತಡೆ ಮಾಸಾಚಾರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಳದ ಆಡಳಿತ ಮೊಕ್ತೇಸರ ಪ್ರಭಾಕರ ಶೆಟ್ಟಿ ಕೋಂಜಾಲು ಗುತ್ತು, ಅರ್ಚಕರಾದ ಏಳಿಂಜೆ ಸದಾನಂದ ಭಟ್, ವೈ. ಗಣೇಶ್ ಭಟ್, ಉಳಿಪಾಡಿ ದೇವಳದ ಧರ್ಮದರ್ಶಿ ಮೋಹನದಾಸ್ ಸುರತ್ಕಲ್, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿದರು. ಲಯನೆಸ್ ಅಧ್ಯಕ್ಷೆ ವತ್ಸಲಾ ರಾವ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1612201603

Comments

comments

Comments are closed.

Read previous post:
Kinnigoli-1612201601
ಪಂಜ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಪಂಜ ಕೊಯಿಕುಡೆ ಗ್ರಾಮದಲ್ಲಿ ಸಂಘ ಪರಿವಾರ, ವಿಠೋಭ ಭಜನಾ ಮಂಡಳಿ, ಶನೀಶ್ವರ ಮಂಡಳಿ ಹಾಗೂ ವಿಠೋಭ ಸ್ವಸಹಾಯ ಸಂಘದ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ...

Close