ಏಳಿಂಜೆ ದೇವಳದಲ್ಲಿ ಚಪ್ಪರ ಮೂಹೂರ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಶ್ರೀ ಮಹಾಗಣಪತಿ ದೇವಳದಲ್ಲಿ ಜ. 13ರಿಂದ 19 ರತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಾಭಾವಿಯಾಗಿ ಚಪ್ಪರ ಮುಹೂರ್ತ ಗುರುವಾರ ನಡೆಯಿತು. ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳು ಧಾರ್ಮಿಕ ವಿಧಾನ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೈ. ಗಣೇಶ್ ಭಟ್, ಏಳಿಂಜೆ ಸದಾನಂದ ಭಟ್, ವರುಣ್ ಭಟ್, ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೊಂಜಾಲು ಗುತ್ತು ಪ್ರಭಾಕರ ಶೆಟ್ಟಿ, ದಿವಾಕರ ಶೆಟ್ಟಿ ಏಳಿಂಜೆ ಕೊಂಜಾಲುಗುತ್ತು , ಕಿಟ್ಟಣ ಶೆಟ್ಟಿ ಶಿಬರೂರು ಗುತ್ತು, ಅನಿಲ್ ಶೆಟ್ಟಿ ಕೊಂಜಾಲುಗುತ್ತು, ಗುಂಡು ಯಾನೆ ವಿಶ್ವನಾಥ ಶೆಟ್ಟಿ , ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ರಘುರಾಮ ಅಡ್ಯಂತಾಯ, ಯೋಗೀಶ್ ರಾವ್, ವೈ. ಕೃಷ್ಣ ಸಾಲ್ಯಾನ್, ಸಂಜೀವ ಶೆಟ್ಟಿ ನಂದನ ಮನೆ, ತಾವಡೆ ಬಾಳಿಕೆ ಸೀತಾರಾಮ ಎಮ್. ಶೆಟ್ಟಿ , ರಾಮಣ್ಣ ಶೆಟ್ಟಿ ಕುಂರ್ಬಿಲ್ ಗುತ್ತು, ದೊಡ್ಡಣ್ಣ ಎಮ್. ಶೆಟ್ಟಿ , ಮೂಲ್ಕಿ ಠಾಣಾ ವೃತ್ತ ನೀರೀಕ್ಷಕ ಅನಂತಪದ್ಮನಾಭ, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸಾಯಿನಾಥ ಶೆಟ್ಟಿ, ಸ್ವರಾಜ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಐಕಳ, ಜಯಪಾಲ ಶೆಟ್ಟಿ ಐಕಳ, ಉದ್ಯಮಿ ಧನಂಜಯ ಶೆಟ್ಟಿಗಾರ್, ಲೀಲಾಧರ ಶೆಟ್ಟಿ, ಸುಧಾಕರ ಶೆಟ್ಟಿ, ಕೃಷ್ಣ ಮಾರ್ಲ, ಸುಧಾಕರ ಸಾಲ್ಯಾನ್, ಲಕ್ಷಣ್ ಬಿ.ಬಿ., ಶರತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-1612201604

Comments

comments

Comments are closed.

Read previous post:
Kinnigoli-1612201603
ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ

ಕಿನ್ನಿಗೋಳಿ: ಸಿಸಿ ಟಿವಿ, ಸೈರನ್‌ಗಳನ್ನು ದೇವಳಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬೇಕು. ದೇವಳಗಳಲ್ಲಿ ಊರಿನವರು ರಾತ್ರಿ ಮಲಗುವ ವ್ಯವಸ್ಥೆ ಮಾಡಿದರೆ ಕಾವಲು ಕಾದರೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದೆ....

Close